ಕಿರುತೆರೆ ನಟಿ ವೈಷ್ಣವಿ ಗೌಡ ಸೀರಿಯಲ್ ಪ್ರಿಯರಿಗೆ ಅಚ್ಚುಮೆಚ್ಚು. ಅದರಲ್ಲೂ ಇತ್ತೀಚಿಗೆ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿಯಲ್ಲಿ ನಟಿಯ ಪಾತ್ರ ಹಾಗೂ ಅಭಿನಯ ಎಲ್ಲರಿಗೂ ಇಷ್ಟವಾಗಿದೆ. ಮುಗ್ದೆ ಸೀತೆಯ ಪಾತ್ರವನ್ನು ಎಲ್ಲರೂ ಕೊಂಡಾಡುತ್ತಾರೆ.
ಹಾಗೆಯೇ ಸೋಷಿಯಲ್ ಮೀಡಿಯಾದಲ್ಲೂ ನಟಿ ವೈಷ್ಣವಿ ಗೌಡ ಸಖತ್ ಆಕ್ಟಿವ್. ಆಗಾಗ ತಮ್ಮ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿರುತ್ತಾರೆ. ಮಾಡರ್ನ್, ಟ್ರೆಡಿಶನಲ್ ಲುಕ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ.
ಇತ್ತೀಚಿಗೆ ಗ್ರೀನ್ ಕಲರ್ ಸೀರೆಯುಟ್ಟು ಮುದ್ದಾಗಿ ಸ್ಮೈಲ್ ಕೊಟ್ಟು ಫೋಟೋಗೆ ಫೋಸ್ ನೀಡಿದ್ದಾರೆ. ಯೆಲ್ಲೋ ಡಿಸೈನರ್ ಬ್ಲೌಸ್ ಹಾಗೂ ಗ್ರೀನ್ ಸೀರೆಯಲ್ಲಿ ವೈಷ್ಣವಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ನೆಟ್ಟಿಗರು ಫೋಟೋಗೆ ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿ ಕೊಟ್ಟಿದ್ದಾರೆ. ಬ್ಯೂಟಿಫುಲ್, ಕ್ಯೂಟ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು 'ಶಾನೆ ಟಾಪಾಗವ್ಳೆ ಶಾನೆ ಟಾಪಾಗವ್ಳೆ ವೈಷ್ಣವಿ, ಬೊಂಬೆ ಹುಡುಗಿ ರಾಜಕುಮಾರಿ ಹಸಿರು ಸೀರೆಯಲ್ಲಿ ದೃಷ್ಟಿ ತೆಗೆದುಕೊಳ್ಳಿ' ಎಂದು ಕಮೆಂಟಿಸಿದ್ದಾರೆ.
ಮತ್ತೆ ಕೆಲವರು, 'ಕ್ಯೂಟ್ ಸ್ಮೈಲ್', ಸೀತಾ, ಪ್ರೆಟ್ಟೀ ಗರ್ಲ್, ವಾವ್ಹ್ ಬ್ಯೂಟಿ ಎಂದೆಲ್ಲಾ ಹೊಗಳಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ವೈಷ್ಣವಿ ಸೀರೆಯುಟ್ಟು ಸುಂದರವಾದ ಪೋಟೋಗಳನ್ನು ಶೇರ್ ಮಾಡುತ್ತಾರೆ.
ಮಾತ್ರವಲ್ಲ ಸೀರಿಯಲ್‌ಗಾಗಿ ಸುಂದರವಾಗಿ ರೆಡಿಯಾದಾಗಲ್ಲೆಲ್ಲಾ ನಟಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಅದಾದ ಬಳಿಕ ಬಿಗ್ ಬಾಸ್ ನಲ್ಲೂ ಕೂಡ ಸಕ್ಕತ್ತಾಗಿ ಆಟ ಆಡಿದ್ದಾರೆ.
ವೈಷ್ಣವಿ ಗೌಡ, ಇದೀಗ ಸೀತಾ ರಾಮ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದು, ಇದು ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ರಾಮ-ಸೀತಾ, ಸಿಹಿಯ ಕಥೆ ಎಲ್ಲರ ಮನ ಗೆಲ್ಲುತ್ತಿದೆ.