ಭಾರತೀಯ ಬಿಲಿಯನೇರ್ 141279 ಕೋಟಿ ರೂ ಆಸ್ತಿ ಒಡೆಯನ ಸೊಸೆ ಪ್ರಸಿದ್ಧ ಫ್ಯಾಷನ್ ಡಿಸೈನರ್

Published : Jan 26, 2024, 04:35 PM IST

ಈಕೆ ಪ್ರಸಿದ್ಧ ಫ್ಯಾಷನ್ ಡಿಸೈನರ್‌ ಉದ್ಯಮಿ, ಭಾರತೀಯ ಬಿಲಿಯನೇರ್‌ ಮಗನನ್ನು ಮದುವೆಯಾಗಿದ್ದು, ಅವರ ನಿವ್ವಳ ಮೌಲ್ಯ 141279 ಕೋಟಿ ರೂ. ಯಾಕೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.

PREV
15
ಭಾರತೀಯ ಬಿಲಿಯನೇರ್  141279 ಕೋಟಿ ರೂ ಆಸ್ತಿ ಒಡೆಯನ ಸೊಸೆ ಪ್ರಸಿದ್ಧ ಫ್ಯಾಷನ್ ಡಿಸೈನರ್

ಮೇಘಾ ಮಿತ್ತಲ್ ಭಾರತೀಯ ಫ್ಯಾಷನ್ ಉದ್ಯಮಿಯಾಗಿದ್ದು, ಅವರು ಜರ್ಮನ್ ಫ್ಯಾಷನ್ ಮತ್ತು ಐಷಾರಾಮಿ ಬ್ರಾಂಡ್ ಎಸ್ಕಾಡಾದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಮೇಘಾ ಕೋಲ್ಕತ್ತಾದಲ್ಲಿ ಹೈದರಾಬಾದ್ ಕುಟುಂಬದಲ್ಲಿ ಜನಿಸಿದರು. 

25

 ಅವರು ತಮ್ಮ ಶಾಲಾ ಶಿಕ್ಷಣವನ್ನು ಹೈದರಾಬಾದ್ ಪಬ್ಲಿಕ್ ಸ್ಕೂಲ್‌ನಲ್ಲಿ ಮಾಡಿದರು. ವಾರ್ಟನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಫೈನಾನ್ಸ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಉನ್ನತ ವ್ಯಾಸಂಗ ಮಾಡಲು ಮೇಘಾ ಪೆನ್ನೆಸ್ಲಿವಿಯಾಕ್ಕೆ ಹೋದರು. ಪದವಿಯ ನಂತರ, ಅವರು ಇನ್ವೆಸ್ಟ್ಮೆಂಟ್ ಬ್ಯಾಂಕ್ ಗೋಲ್ಡ್ಮನ್ ಸ್ಯಾಚ್ಸ್ನ ಸಂಶೋಧನಾ ವಿಭಾಗದಲ್ಲಿ ವಿಶ್ಲೇಷಕರ ಕೆಲಸವನ್ನು ಪಡೆದರು.

35

ಆದರೂ 2003 ರಲ್ಲಿ, ಅವರು ಆರ್ಕಿಟೆಕ್ಚರಲ್ ಇಂಟೀರಿಯರ್ ಡಿಸೈನ್‌ನಲ್ಲಿ ಪಿಜಿ ಮಾಡಲು ಲಂಡನ್‌ನ ಇಂಚ್‌ಬಾಲ್ಡ್ ಸ್ಕೂಲ್ ಆಫ್ ಡಿಸೈನ್‌ಗೆ ಸೇರಿಕೊಂಡರು. ಆಕೆಯ ಪಿಜಿ ಮುಗಿದ ನಂತರ, 2009 ರಲ್ಲಿ ಜರ್ಮನ್ ಐಷಾರಾಮಿ ಬ್ರಾಂಡ್ ಎಸ್ಕಾಡಾದ ಅಧ್ಯಕ್ಷೆ ಮತ್ತು ಡಿಎಂ ಆಗಿ ನೇಮಕಗೊಂಡರು. 

45

 ಮೇಘಾ ಮಿತ್ತಲ್ ಅವರು ಭಾರತೀಯ ಬಿಲಿಯನೇರ್ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಪುತ್ರ ಆದಿತ್ಯ ಮಿತ್ತಲ್ ಅವರನ್ನು ವಿವಾಹವಾಗಿದ್ದಾರೆ. ಫೋರ್ಬ್ಸ್ ಪ್ರಕಾರ ಲಕ್ಷ್ಮಿ ಮಿತ್ತಲ್ 1,41,279 ಕೋಟಿ ರೂ. ಆದಿತ್ಯ ಮಿತ್ತಲ್ ಅವರು ಪ್ರಸ್ತುತ ತಮ್ಮ ತಂದೆ ಸ್ಥಾಪಿಸಿದ ಆರ್ಸೆಲರ್ ಮಿತ್ತಲ್‌ನ ಸಿಇಒ ಆಗಿದ್ದಾರೆ. 

55

ಆದಿತ್ಯ ಮತ್ತು ಮೇಘಾ ಮಿತ್ತಲ್ 1998 ರಲ್ಲಿ ವಿವಾಹವಾದರು. ಅವರು ಇಬ್ಬರು ಮಕ್ಕಳಿಗೆ ಪೋಷಕರು. ಆದಿತ್ಯ ಮತ್ತು ಮೇಘಾ ಇಬ್ಬರೂ ಭಾರತ ಮತ್ತು ಯುಕೆಯಲ್ಲಿ ಮಕ್ಕಳ ಆರೋಗ್ಯ ಕಾರಣಗಳಿಗಾಗಿ ಸಕ್ರಿಯವಾಗಿ ದಾನ ಮಾಡುತ್ತಾರೆ.

Read more Photos on
click me!

Recommended Stories