ಎಂಗೇಜ್‌ಮೆಂಟ್ ರೂಮರ್ಸ್ ಬೆನ್ನಲ್ಲೇ ಕೈಯಲ್ಲಿ ಫ್ಲವರ್ಸ್ ಹಿಡಿದು ಲವ್ ಯು ಎಂದ ರಶ್ಮಿಕಾ!

First Published | Jan 30, 2024, 10:12 AM IST

ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಎಂಗೇಜ್​ಮೆಂಟ್ ಮಾಡಿಕೊಳ್ತಾರೆ ಎನ್ನುವ ಸಿನಿ ರಂಗದಲ್ಲಿ ರೂಮರ್ಸ್ ಕೇಳಿ ಬರ್ತಿದೆ. ಆದ್ರೆ ಇದರ ಬಗ್ಗೆ ಇಬ್ಬರೂ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಈ ಮಧ್ಯೆ ರಶ್ಮಿಕಾ ಕೈಯಲ್ಲಿ ವೈಟ್ ಫ್ಲವರ್ಸ್ ಹಿಡಿದು ಐ ಲವ್‌ ಯೂ ಅಂದಿದ್ದಾರೆ.

ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಎಂಗೇಜ್​ಮೆಂಟ್ ಮಾಡಿಕೊಳ್ತಾರೆ ಎನ್ನುವ ಸಿನಿ ರಂಗದಲ್ಲಿ ರೂಮರ್ಸ್ ಕೇಳಿ ಬರ್ತಿದೆ. ಆದ್ರೆ ಇದರ ಬಗ್ಗೆ ಇಬ್ಬರೂ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಈ ಮಧ್ಯೆ ರಶ್ಮಿಕಾ ಕೈಯಲ್ಲಿ ವೈಟ್ ಫ್ಲವರ್ಸ್ ಹಿಡಿದು ಹ್ಯಾಂಡ್ ಗೆಸ್ಚರ್‌ನಲ್ಲಿ ಲವ್‌ ಯೂ ಅಂದಿದ್ದಾರೆ.

ಬ್ಲೂ ಡ್ರೆಸ್ ಧರಿಸಿದ ರಶ್ಮಿಕಾ ಮುದ್ದಾಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ವೈಟ್ ಫ್ಲವರ್ಸ್ ಕೈಯಲ್ಲಿ ಹಿಡಿದು ಸ್ಮೈಲ್ ಕೊಟ್ಟಿದ್ದಾರೆ. ಮಾತ್ರವಲ್ಲ ಕಿರಿಕ್‌ ಬೆಡಗಿ ಹ್ಯಾಂಡ್ ಗೆಸ್ಚರ್‌ನಲ್ಲಿ ಐ ಲವ್ ಯೂ ಎಂದಿದ್ದಾರೆ.

Tap to resize

ಅನಿಮಲ್‌ ಒಟಿಟಿಗೆ ಬಂದಿರೋ ಹಿನ್ನಲೆ ರಶ್ಮಿಕಾ ಈ ಫೋಟೋ ಶೇರ್ ಮಾಡಿದ್ದು, 'ಅನಿಮಲ್ ಈಸ್ ನೌ ಓನ್ ನೆಟ್‌ಫ್ಲಿಕ್ಸ್‌' ಎಂದು ಶೀರ್ಷಿಕೆ ನೀಡಿದ್ದಾರೆ. ಯಾವತ್ತಿನಂತೆ ನೆಟ್ಟಿಗರು ಸಹ ನ್ಯಾಷನಲ್ ಕ್ರಶ್‌ ಫೋಟೋಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಪ್ರೆಟ್ಟಿಯೆಸ್ಟ್ ಆಕ್ಟ್ರೆಸ್‌, ಡಾರ್ಲಿಂಗ್‌, ಹೆವನ್ ಕ್ವೀನ್, ಲವ್ಲೀ, ಬ್ಯೂಟಿಫುಲ್ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು 'ಗೀತಾಂಜಲಿಯಾಗಿ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದೀರಿ' ಎಂದು ಹೊಗಳಿದ್ದಾರೆ.

ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳ ಸಕ್ಸಸ್ ಬೆನ್ನಲ್ಲಿಯೇ ಬಾಲಿವುಡ್, ಟಾಲಿವುಡ್ ಅಂತ ಫುಲ್ ಬಿಝಿಯಾಗಿದ್ದಾರೆ. ಇದೆಲ್ಲದರ ಮಧ್ಯೆಯೂ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ಪೋಸ್ಟ್ ಮಾಡೋದನ್ನು ಮಾತ್ರ ಮರೆಯೋದಿಲ್ಲ

ಸಾಲು ಸಾಲು ಹಿಟ್‌ ಸಿನಿಮಾಗಳ ಬಳಿಕ ರಶ್ಮಿಕಾ ಮಂದಣ್ಣ ಮತ್ತೆ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಅನಿಮಲ್ ಸಿನಿಮಾದಲ್ಲಿ ಗೀತಾಂಜಲಿ ಪಾತ್ರದಲ್ಲಿ ರಶ್ಮಿಕಾ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪುಷ್ಪಾ ಸಿನಿಮಾ ಹಿಟ್‌ ಆಗುವುದರೊಂದಿಗೆ ರಶ್ಮಿಕಾ ಮಂದಣ್ಣ ನಟನೆ ಎಲ್ಲರಿಗೂ ಅರ್ಥವಾಗಿದೆ. ಗ್ಲಾಮರ್‌ ಪಾತ್ರವೇ ಆಗಲಿ, ಡಿ ಗ್ಲಾಮರ್‌ ಪಾತ್ರವೇ ಆಗಲಿ ರಶ್ಮಿಕಾ ಯಶಸ್ವಿಯಾಗಿ ನಿಭಾಯಿಸುತ್ತಾರೆ.

ಇದೆಲ್ಲದರ ಮಧ್ಯೆ ಈಗ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಸಹ ಬರುತ್ತಿದೆ. ಫೆಬ್ರವರಿ ಎರಡನೇ ವಾರದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ.  

Latest Videos

click me!