ಯೆಲ್ಲೋ ಸ್ಯಾರಿಯಲ್ಲಿ ಶ್ರೀಲೀಲಾ, ಕಿಸ್ ಬೆಡಗಿ ಹಾಟ್‌ನೆಸ್ ನೋಡಿ ಫೈರ್ ಬಾಲ್ ಎಂದ ಫ್ಯಾನ್ಸ್‌

First Published | Jun 6, 2024, 12:57 PM IST

ಸ್ಯಾಂಡಲ್‌ವುಡ್‌ನ ನಟಿ ಶ್ರೀಲೀಲಾ ಸದ್ಯ ಸೌತ್‌ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿ. ಲೇಟೆಸ್ಟ್ ಆಗಿ ಯೆಲ್ಲೋ ಕಲರ್ ಸೀರೆಯುಟ್ಟು ಪಡ್ಡೆ ಹುಡುಗರ ಹಾರ್ಟ್‌ಬೀಚ್‌ ಹೆಚ್ಚುವಂತೆ ಮಾಡಿದ್ದಾರೆ. ಫ್ಯಾನ್ಸ್ ಹಾಟ್‌ನೆಸ್ ನೋಡಿ ಫೈರ್‌ ಬಾಲ್ ಎಂದು ಕರೆದಿದ್ದಾರೆ.

ಸ್ಯಾಂಡಲ್‌ವುಡ್‌ನ ನಟಿ ಶ್ರೀಲೀಲಾ ಸದ್ಯ ಸೌತ್‌ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿ. ಲೇಟೆಸ್ಟ್ ಆಗಿ ಯೆಲ್ಲೋ ಕಲರ್ ಸೀರೆಯುಟ್ಟು ಪಡ್ಡೆ ಹುಡುಗರ ಹಾರ್ಟ್‌ಬೀಚ್‌ ಹೆಚ್ಚುವಂತೆ ಮಾಡಿದ್ದಾರೆ. ಫ್ಯಾನ್ಸ್ ಹಾಟ್‌ನೆಸ್ ನೋಡಿ ಫೈರ್‌ ಬಾಲ್ ಎಂದು ಕರೆದಿದ್ದಾರೆ.

ಶ್ರೀಲೀಲಾ, ತೆಲುಗಿನಲ್ಲಿ ಸಾಲು ಸಾಲು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕ್ರೇಜ್‌ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಫೋಟೋ ಶೂಟ್ ಮೂಲಕ ಅಭಿಮಾನಿಗಳಿಗೆ ಗ್ಲಾಮರ್ ಟ್ರೀಟ್ ನೀಡುತ್ತಿದ್ದಾರೆ. ಈ ಬಾರಿ ಯೆಲ್ಲೋ ಕಲರ್ ಸ್ಯಾರಿ ಲುಕ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

Tap to resize

ಗಾರ್ಜಿಯಸ್‌. ಬ್ಯೂಟಿಫುಲ್‌, ವಾವ್ಹ್‌. ಸೆಕ್ಸೀ, ಡಾರ್ಲಿಂಗ್‌ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮುಖದಲ್ಲಿ ಸ್ಮೈಲೇ ಇಲ್ವಲ್ಲಾ ಎಂದಿದ್ದಾರೆ.

ಶ್ರೀಲೀಲಾ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಶ್ರೀಲೀಲಾ ಅಭಿನಯದ ಸಾಲು ಸಾಲು ಸಿನಿಮಾಗಳು ರಿಲೀಸ್​ ಆಗ್ತಿದೆ. ಭಗವಂತ ಕೇಸರಿ ಹಿಟ್ ಬಳಿಕ ಶ್ರೀಲೀಲಾಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್​ ಆಗಿದೆ.

ಧಮಾಕಾ ಸಿನಿಮಾ ಮೂಲಕ ಟಾಲಿವುಡ್ ಇಂಡಸ್ಟ್ರಿಯಲ್ಲಿ ಫೇಮಸ್​ ಆದ ಶ್ರೀಲೀಲಾ ಈ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಸೈಮಾ ಪ್ರಶಸ್ತಿಯನ್ನು ಪಡೆದರು. ಇತ್ತೀಚೆಗಷ್ಟೇ ಆಕೆ ನಟಿಸಿದ ಸ್ಕಂದ ಬಾಕ್ಸ್ ಆಫೀಸ್​ನಲ್ಲಿ ಆವರೇಜ್ ಹಿಟ್​ ಆಗಿತ್ತು.

ಬಾಲಯ್ಯ ಜೊತೆ ಶ್ರೀಲೀಲಾ ಭಗವಂತ ಕೇಸರಿ ಸಿನಿಮಾ ಮಾಡಿದ್ದಾರೆ. ದತ್ತು ಮಗಳ ಪಾತ್ರಕ್ಕೆ ಬಾಲಯ್ಯ ಜೊತೆ ಶ್ರೀಲೀಲಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸ್ಟಾರ್ ಹೀರೋ ಸಿನಿಮಾದಲ್ಲಿ ನಟಿಸಿದ್ದರೂ ತನ್ನ ನಟನೆಯಿಂದ ಶ್ರೀಲೀಲಾ ಇಂಪ್ರೆಸ್ ಮಾಡಿದ್ದಾರೆ

ಡ್ಯಾನ್ಸ್ ವಿಚಾರದಲ್ಲಿಯೂ ಸಖತ್ ಫೇಮಸ್ ಆಗಿರುವ ಶ್ರೀಲೀಲಾ ಅವರ ನೃತ್ಯ ಎಲ್ಲರಿಗೂ ಇಷ್ಟ. ಸಿನಿಮಾಗಳಲ್ಲಿ ಶ್ರೀಲೀಲಾ ಅವರ ಡ್ಯಾನ್ಸ್ ನೋಡಿ ಜನರು ಫಿದಾ ಆಗುತ್ತಾರೆ. ಇದು ಕೂಡಾ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. 

ಸ್ಯಾಂಡಲ್​ವುಡ್​ನಿಂದ ವೃತ್ತಿ ಜೀವನ ಆರಂಭಿಸಿ, ಬಳಿಕ ಬೇರೆ ಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಸ್ಟಾರ್​ ನಟಿಯಾಗಿ ಮಿಂಚುತ್ತಿರುವವರಲ್ಲಿ ಶ್ರೀಲೀಲಾ ಕೂಡ ಒಬ್ಬರು.

2019ರಲ್ಲಿ ಕನ್ನಡದ 'ಕಿಸ್'​ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಸದ್ಯ ಟಾಲಿವುಡ್​ನ ಬಹುಬೇಡಿಕೆಯ ನಾಯಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 

Latest Videos

click me!