ಈ 8 ವರ್ಷದ ಪುಟಾಣಿ ಜಗತ್ತಿನ ಅತಿ ಕಿರಿಯ ಫ್ಯಾಶನ್ ಡಿಸೈನರ್; ಬೆರಗುಗೊಳಿಸುತ್ತೆ ಈತನ ಅದ್ಭುತ ವಿನ್ಯಾಸ..

First Published | Jun 6, 2024, 9:55 AM IST

30 ವರ್ಷ ದಾಟಿದ ನಮಗೆ ಬಟ್ಟೆಗಳು ಹರಿದಾಗ ಸಣ್ಣದೊಂದು ಹೊಲಿಗೆ ಹಾಕಿಕೊಳ್ಳುವುದು ಕಷ್ಟವೆನಿಸುತ್ತದೆ, ಆದರೆ ಈ 8 ವರ್ಷದ ಹುಡುಗ ಚಕಾಚಕ್ ಹೊಸ ಹೊಸ ವಿನ್ಯಾಸಗಳನ್ನು ಮಾಡುತ್ತಾ, ಜಗತ್ತಿನ ಅತಿ ಕಿರಿಯ ಫ್ಯಾಶನ್ ಡಿಸೈನರ್ ಎನಿಸಿದ್ದಾನೆ. 

ಈತನ ಟ್ಯಾಲೆಂಟ್ ನೋಡಿದಾಗ ಇದೊಂತೂ ಪೂರ್ವ ಜನ್ಮದ ನೆನಪುಗಳಿಂದಷ್ಟೇ ಸಾಧ್ಯ ಎನಿಸದಿರದು. ಈತ ಕಳೆದ ಜನ್ಮದಲ್ಲಿ ಅತಿ ದೊಡ್ಡ ಫ್ಯಾಶನ್ ಡಿಸೈನರ್ ಆಗಿದ್ದನೇನೋ..

ನೀವೇನೇ ಬಟ್ಟೆ ಕೊಡಿ, ಪ್ಯಾಸ್ಟಿಕ್, ಗೋಣಿಚೀಲ ಏನನ್ನೇ ಕೊಡಿ, ನೋಡುನೋಡುತ್ತಲೇ ಅದರಲ್ಲೊಂದು ಅದ್ಭುತ ಫ್ಯಾಶನ್ ವಿನ್ಯಾಸ ಮಾಡುತ್ತಾನೆ ಈ 8 ವರ್ಷದ ಪೋರ. 
 

Tap to resize

ಈತ ಡಿಸೈನ್ ಮಾಡಿದ ಬಟ್ಟೆಗಳು ಈಗಾಗಲೇ ಮಾಡೆಲ್‌ಗಳ ಮೈ ಮೇಲೆ ನಿಂತು ರ್ಯಾಂಪ್ ಮೇಲೆ ವಾಕ್ ಮಾಡಿ ಬರುತ್ತವೆ, ಎಲ್ಲರ ಹುಬ್ಬೇರಿಸುತ್ತವೆ. 

ಹೌದು, 4ನೇ ವರ್ಷದಿಂದಲೇ ಫ್ಯಾಶನ್ ವಿನ್ಯಾಸದಲ್ಲಿ ಜಗತ್ತನ್ನು ಬೆರಗುಗೊಳಿಸುತ್ತಿರುವ ಮ್ಯಾಕ್ಸ್ ಅಲೆಕ್ಸಾಂಡರ್‌ಗೀಗ 8 ವರ್ಷ. ಈತ ಜಗತ್ತಿನ ಅತಿ ಕಿರಿಯ ಫ್ಯಾಶನ್ ಡಿಸೈನರ್ ಎಂಬ ಬಿರುದು ಗಳಿಸಿದ್ದಾನೆ. 
 

ಲಾಸ್ ಏಂಜಲೀಸ್‌ನ ಈ ಪುಟಾಣಿಯ ಟ್ಯಾಲೆಂಟ್ ಪ್ರದರ್ಶಿಸುವ ಹಲವಾರು ವಿಡಿಯೋಗಳನ್ನು ಆತನ ಇನ್ಸ್ಟಾಗ್ರಾಂನಲ್ಲಿ ಕಾಣಬಹುದು. ಒಂದಕ್ಕಿಂತ ಒಂದು ಬೆರಗುಗೊಳಿಸುತ್ತದೆ. 

couture.to.the.max ನಲ್ಲಿ 2.8 ಮಿಲಿಯನ್ ಅನುಯಾಯಿಗಳೊಂದಿಗೆ, ಅವನನ್ನು 'ಕಿರಿಯ ಫ್ಯಾಷನ್ ಡಿಸೈನರ್' ಎಂದು ಪ್ರಶಂಸಿಸಲಾಗುತ್ತದೆ.

ಫ್ಯಾಶನ್‌ನತ್ತ ಮ್ಯಾಕ್ಸ್‌ನ ಪ್ರಯಾಣವು ನಾಲ್ಕನೇ ವಯಸ್ಸಿನಲ್ಲಿ ಪ್ರಾರಂಭವಾಯಿತು, ಅವನು ಯಾವುದೇ ತಯಾರಿ ಇಲ್ಲದೇ ಹೊಲಿಯಲು ಪ್ರಾರಂಭಿಸಿದನು, ಚೆಂದದ ವಿನ್ಯಾಸಗಳನ್ನು ಸೃಷ್ಟಿಸಿ ಬೆರಗುಗೊಳಿಸಿದನು. 

ಈಗ, ಕೇವಲ ಎಂಟು ವರ್ಷ ವಯಸ್ಸಿನ ಮ್ಯಾಕ್ಸ್, ತನ್ನ ಅತ್ಯದ್ಭುತ ರಚನೆಗಳಿಂದ ಎಲ್ಲರನ್ನೂ ಚಕಿತಗೊಳಿಸುತ್ತಾನೆ ಮತ್ತು ಶರೋನ್ ಸ್ಟೋನ್‌ನಂತಹ ಪ್ರಸಿದ್ಧ ವ್ಯಕ್ತಿಗಳಿಂದ ಕಮಿಷನ್‌ಗಳನ್ನು ಗಳಿಸುತ್ತಾನೆ!
 

ಮ್ಯಾಕ್ಸ್ ತಾಯಿ, ಅವನ Instagram ಅನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ, ಅದು ಹೇಗೆ ಪ್ರಾರಂಭವಾಯಿತು ಎಂದು ಹಂಚಿಕೊಂಡಿದ್ದಾರೆ. ಒಂದು ಸಂಜೆ, ನಾಲ್ಕನೇ ವಯಸ್ಸಿನಲ್ಲಿ, ಮ್ಯಾಕ್ಸ್ ಡ್ರೆಸ್ ಮೇಕರ್ ಮತ್ತು ಮನುಷ್ಯಾಕೃತಿಯ(ಮ್ಯಾನೆಕ್ವೀನ್) ಅಗತ್ಯವಿದೆ ಎಂದು ರಾತ್ರಿಯ ಊಟದ ಸಮಯದಲ್ಲಿ ಕೇಳಿದನು. ಆದ್ದರಿಂದ, ಅವನ ತಾಯಿ ಅವನಿಗೆ ಕಾರ್ಡ್ಬೋರ್ಡ್ ಬಳಸಿ ಮೊದಲ ಮ್ಯಾನೆಕ್ವೀನ್ ಕೊಟ್ಟರು.

ಅವನ ತಾಯಿಯ ಸ್ಟುಡಿಯೊದಿಂದ ಕೆಲವು ಸ್ಕ್ರ್ಯಾಪ್‌ಗಳೊಂದಿಗೆ, ಅವನು ತನ್ನ ಮೊದಲ ದೊಡ್ಡ ಉಡುಪನ್ನು ರಚಿಸಿ, ಎಲ್ಲರನ್ನೂ ಆಶ್ಚರ್ಯಗೊಳಿಸಿದನು.   

ಸಂದರ್ಶನಗಳಲ್ಲಿ, ಮ್ಯಾಕ್ಸ್ ತನ್ನನ್ನು ಐಷಾರಾಮಿ ಬ್ರಾಂಡ್ ಗುಚ್ಚಿಗೆ ಹೋಲಿಸಿಕೊಂಡು ಪ್ರಸಿದ್ಧ ವಿನ್ಯಾಸಕನಾಗುವ ತನ್ನ ಕನಸುಗಳನ್ನು ಹಂಚಿಕೊಂಡಿದ್ದಾನೆ. 

'ನಾನು ಗುಚ್ಚಿ ಎಂದು ನನಗೆ ತಿಳಿದಿತ್ತು,' ಎಂದವನು ತನ್ನ ಕನಸಿನ ಬಗ್ಗೆ ಹೇಳುತ್ತಾನೆ. ಐದನೇ ವಯಸ್ಸಿನಲ್ಲಿ, ಅವನು ತನ್ನದೇ ಆದ ಫ್ಯಾಶನ್ ಶೋನೊಂದಿಗೆ ಹೆಸರು ಮಾಡಿದ್ದನು. (ತಾನೇ ಡಿಸೈನ್ ಮಾಡಿದ ಸೂಟ್‌ನೊಂದಿಗೆ ಮ್ಯಾಕ್ಸ್)

ಮ್ಯಾಕ್ಸ್ ತನ್ನ ತಾಯಿ ಮತ್ತು ಸ್ಥಳೀಯ ವೃತ್ತಿಪರರಿಂದ ಹೊಲಿಯಲು ಕಲಿತನು ಮತ್ತು ಅಂದಿನಿಂದ ಅವನ ಕೌಶಲ್ಯಗಳು ಪ್ರವರ್ಧಮಾನಕ್ಕೆ ಬಂದವು.

ಈಗ, ಮ್ಯಾಕ್ಸ್‌ನ ವಿನ್ಯಾಸಗಳು ಪ್ರಪಂಚದಾದ್ಯಂತ ಮಾರಾಟವಾಗುತ್ತಿವೆ, ಅವನಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.ತನ್ನ ಚಿಕ್ಕ ವಯಸ್ಸಿನ ಹೊರತಾಗಿಯೂ, ಪ್ರತಿಭೆಗೆ ಯಾವುದೇ ಮಿತಿಯಿಲ್ಲ ಎಂದು ಅವನು ಸಾಬೀತುಪಡಿಸುತ್ತಿದ್ದಾನೆ.

ಪ್ರತಿ ಬಟ್ಟೆ ವಿನ್ಯಾಸಗೊಳಿಸುವಾಗಲೂ ಅದನ್ನು ಧರಿಸುವವರ ಅಳತೆ ಬಗ್ಗೆ ತುಂಬಾ ನಿಖರವಾಗಿರಿಸಲು ಬಯಸುತ್ತಾನೆ ಮ್ಯಾಕ್ಸ್.  ಮ್ಯಾಕ್ಸ್‌ನ ಈ ಅದ್ಭುತ ಪ್ರತಿಭೆ ಆತನನ್ನು ಎಲ್ಲಿಗೆ ಕರೆದೊಯ್ಯುತ್ತದೆ ಕಾದು ನೋಡಬೇಕು. 

Latest Videos

click me!