ಹಳದಿ, ನೇರಳೆ ಸೀರೆಯುಟ್ಟು ಮುದ್ದಾಗಿ ಫೋಸ್ ನೀಡಿದ ಶೋಭಾ ಶೆಟ್ಟಿ, ಅಪ್ಪಟ ಕನ್ನಡತಿ ಎಂದು ಹೊಗಳಿದ ಫ್ಯಾನ್ಸ್

First Published Mar 17, 2024, 3:00 PM IST

ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಬಿಗ್‌ಬಾಸ್‌ 7ರಲ್ಲಿ ಭಾಗವಹಿಸಿದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಹಳದಿ, ನೇರಳೆ ಸೀರೆಯುಟ್ಟು ಮುದ್ದಾಗಿ ಫೋಟೋಗೆ ಫೋಸ್ ನೀಡಿದ್ದಾರೆ.

ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಬಿಗ್‌ಬಾಸ್‌ 7ರಲ್ಲಿ ಭಾಗವಹಿಸಿದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಇನ್‌ಸ್ಟಾಗ್ರಾಂನಲ್ಲಿ ಮಾಡರ್ನ್ ಹಾಗೂ ಟ್ರೆಡಿಶನಲ್‌ ಲುಕ್‌ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. 

ಇತ್ತೀಚಿಗೆ ನೇರಳೆ ಮತ್ತು ಹಳದಿ ಸೀರೆಯಲ್ಲ ಮುದ್ದಾಗಿ ಮಿಂಚಿದ್ದಾರೆ. ನೆಟ್ಟಿಗರು ಕನ್ನಡತಿಯ ಅಂದಕ್ಕೆ ಬೆರಗಾಗಿದ್ದಾರೆ. ಪುಟ್ಟದಾದ ಜುಮ್ಕಾವನ್ನು ಸಹ ಹಾಕಿಕೊಂಡಿದ್ದಾರೆ.

ಶೋಭಾ ಶೆಟ್ಟಿಯ ಈ ಗ್ರ್ಯಾಂಡ್ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಲೈಕ್ಸ್‌, ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ. ಬ್ಯೂಟಿಫುಲ್, ಕ್ಯೂಟ್, ಏಂಜೆಲ್‌, ನೈಸ್ ಲುಕ್ಕಿಂಗ್‌, ಗಾರ್ಜಿಯಸ್, ಸೂಪರ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 

ಇನ್ನು ಕೆಲವು ಅಭಿಮಾನಿಗಳು, ನೇರಳೆ ಬಣ್ಣದ ಸೀರೇಲಿ ತುಂಬಾ ಚೆನ್ನಾಗಿ ಕಾಣಿಸ್ತಾಯಿದೀರ, ಅಪ್ಪಟ ಕನ್ನಡತಿ ಎಂದೆಲ್ಲಾ ಹೊಗಳಿದ್ದಾರೆ.

ತೆಲುಗು ಧಾರಾವಾಹಿಗಳಲ್ಲಿ ಸಕ್ರಿಯವಾಗಿರುವ ನಟಿ ಶೋಭಾ ಶೆಟ್ಟಿ ಇತ್ತೀಚಿಗಷ್ಟೇ ತಮ್ಮ ಸಹನಟ ಯಶವಂತ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಶೋಭಾ ಶೆಟ್ಟಿ-ಯಶವಂತ್‌ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು
 

ಕನ್ನಡದಲ್ಲಿ ನಟಿ ಮೊದಲು 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದರು. ಇದರಲ್ಲಿ ಶೋಭಾ ಶೆಟ್ಟಿ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 6 ವರ್ಷಗಳಿಗೂ ಅಧಿಕ ಕಾಲ ಕಲರ್ಸ್​ ಕನ್ನಡದಲ್ಲಿ 'ಅಗ್ನಿಸಾಕ್ಷಿ' ಪ್ರಸಾರವಾಗಿತ್ತು. ಇದರಲ್ಲಿ ಶೋಭಾ ಶೆಟ್ಟಿ  ತನು ಪಾತ್ರದಲ್ಲಿ ನಟಿಸಿದ್ದರು.

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರಾವಗುತ್ತಿದ್ದ ರುಕ್ಕು ಧಾರಾವಾಹಿಯಲ್ಲೂ ಶೋಭಾ ಶೆಟ್ಟಿ ಕೆಲ ತಿಂಗಳ ಕಾಲ ನಟಿಸಿದರು. ಈ ಸೀರಿಯಲ್‌ನ ಟಿಆರ್‌ಪಿ ಚೆನ್ನಾಗಿಲ್ಲವಾದ ಕಾರಣ ಧಾರಾವಾಹಿಯಿಂದ ಹೊರ ನಡೆದರು.

ಆ ನಂತರ ನಟಿ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಲು ಆರಂಭಿಸಿದರು. ಇವರು ಅಭಿನಯಿಸಿದ 'ಕಾರ್ತಿಕ ದೀಪಂ' ಸೀರಿಯಲ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಾರಣ ಶೋಭಾ ಶೆಟ್ಟಿ ಅವರನ್ನು ಬಿಗ್‌ಬಾಸ್‌ಗೆ ಆಯ್ಕೆ ಮಾಡಲಾಗಿತ್ತು. 

ಬಿಗ್‌ಬಾಸ್‌ ಮನೆ ಸೇರಿದಾಗಿನಿಂದಲೂ ತಮ್ಮ ಬಾಯಿ ಬೊಂಬಾಯಿಯಿಂದಾಗಿ ಶೋಭಾ ಶೆಟ್ಟಿ, ತೆಲುಗು ಟ್ರೋಲ್ ಪೇಜ್‌ಗಳಲ್ಲಿ ಸಖತ್ ಟ್ರೋಲ್ ಆಗಿದ್ದರು.
ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್ಬಾಸ್ ಕಾರ್ಯಕ್ರಮ ಹೋಸ್ಟ್ ಮಾಡುತ್ತಿದ್ದರೆ, ತೆಲುಗಿನಲ್ಲಿ ನಟ ಅಕ್ಕಿನೇನಿ ನಾಗಾರ್ಜುನ್ ಅವರು ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.

ಇನ್ನು ಶೋಭಾ, ಬಿಗ್‌ಬಾಸ್‌ನಲ್ಲಿ ಎಲ್ಲಾ ಸ್ಪರ್ಧಿಗಳಿಗಿಂತಲೂ  ಅತಿ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗ್ತಿತ್ತು. ಅಂದರೆ  ಒಂದು ವಾರಕ್ಕೆ 1.25 ಲಕ್ಷ ರೂಪಾಯಿಯಿಂದ 1.50 ಲಕ್ಷ ರೂಪಾಯಿ ಸಂಭಾವನೆ ಸಿಗುತ್ತಿದೆ ಎಂದು ಬಹಿರಂಗ ಪಡಿಸಲಾಗಿತ್ತು

click me!