ನಟಿ ಸಂಗೀತಾ ಶೃಂಗೇರಿ ಅವರು ಬಿಗ್‌ಬಾಸ್ 10 ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟಿವ್ ಆಗಿದ್ದು, ತಮ್ಮ ಸ್ಟೈಲಿಶ್ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಸುಂದರವಾದ ಮೈಸೂರು ಸಿಲ್ಕ್ ಸೀರೆಯುಟ್ಟು ಮಿಂಚಿದ್ದಾರೆ.
ಕ್ರೀಮ್ ಕಲರ್‌ಗೆ ಪರ್ಪಲ್ ಮತ್ತು ಗ್ರೀನ್ ಬಾರ್ಡರ್ ಇರೋ ಸ್ಯಾರಿ, ಇದಕ್ಕೆ ಪರ್ಪಲ್ ಬ್ಲೌಸ್‌ನ್ನು ಹಾಕ್ಕೊಂಡಿದ್ದಾರೆ. ಸಿಂಪಲ್ ಆದ ನೆಕ್ಲೇಸ್ ಹಾಕ್ಕೊಂಡು ಮುದ್ದಾಗಿ ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ.
ನೆಟ್ಟಿಗರು ಸಂಗೀತಾ ರೇಷ್ಮೆ ಸೀರೆ ಲುಕ್‌ಗೆ ಫಿದಾ ಆಗಿದ್ದಾರೆ. ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿಕೊಟ್ಟಿದ್ದಾರೆ. ಗಾರ್ಜಿಯಸ್, ಪ್ರೆಟ್ಟೀ, ಬ್ಯೂಟಿಫುಲ್, ಸೂಪರ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
'ನಾವು ಬಿಗ್ ಬಾಸ್ ಅಲ್ಲಿ ಅತ್ಯುತ್ತಮವಾದ ವ್ಯಕ್ತಿಗೆ ಸಪೋರ್ಟ್ ಮಾಡಿದ್ದೀವಿ ವ್ಯಕ್ತಿತ್ವ ಅದ್ಬುತ' ಎಂದು ಅಭಿಮಾನಿಯೊಬ್ಬರು ಹೊಗಳಿದ್ದಾರೆ. ಇನ್ನೊಬ್ಬ ಅಭಿಮಾನಿ, 'ಸಿಂಗಾರದ ಸಿರಿ... ಮುದ್ದು ಬಂಗಾರಿ..ಸಂಗೀತ ಶೃಂಗೇರಿ' ಎಂದು ಕಾಮೆಂಟ್ ಮಾಡಿದ್ದಾರೆ.
ಚಾರ್ಲಿ ಬೆಡಗಿ, ಸಂಗೀತಾ ಶೃಂಗೇರಿ ಇದೀಗ ಕನ್ನಡಿಗರಿಗೆಲ್ಲಾ ಪರಿಚಯವಾದವರು. ಬಿಗ್‌ಬಾಸ್ ಸೀಸನ್ 10ನಲ್ಲಿ ಸ್ಟ್ರಾಂಗೆಸ್ಟ್ ಸ್ಪರ್ಧಿ ಎನಿಸಿಕೊಂಡು ಗ್ರ್ಯಾಂಡ್ ಫಿನಾಲೆಯ ವರೆಗೂ ತಲುಪಿದವರು. ಇವರು 2ನೇ ರನ್ನರ್ ಅಪ್ ಆದರೂ ವಿಶೇಷವೆಂದರೆ, ಈ ಸೀಸನ್‌ನಲ್ಲಿ ಫೈನಲಿಸ್ಟ್ ಎನಿಸಿಕೊಂಡ ಏಕೈಕ ಮಹಿಳಾ ಸ್ಪರ್ಧಿ ಇವರೇ.
ಸಂಗೀತಾ ಅವರು ಗುರುತಿಸಿಕೊಂಡಿದ್ದು 777 ಚಾರ್ಲಿ ಸಿನಿಮಾ ಮೂಲಕ. ಸಂಗೀತ ಬಿಗ್ ಬಾಸ್ 10ರ ಗೆಲ್ಲುವ ಸ್ಪರ್ಧಿ ಆಗಿದ್ರು. ಆದ್ರೆ 2ನೇ ರನ್ನರ್ ಅಪ್ ಆಗಿ ಹೊರ ಹೋಗಿದ್ದು ಮಾತ್ರ ಸಂಗೀತ ಅಭಿಮಾನಿಗಳಲ್ಲಿ ತೀರಾ ನೋವುಂಟು ಮಾಡಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಸಂಗೀತಾ ಶೃಂಗೇರಿ ಆ್ಯಕ್ಟಿವ್ ಆಗಿದ್ದು ತಮ್ಮ ಕುರಿತಾದ ಎಲ್ಲಾ ವಿಚಾರಗಳನ್ನೂ ಫ್ಯಾನ್ಸ್ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ. ಫೋಟೋಸ್ ಹಾಗೂ ವಿಡಿಯೋಸ್ ಅಪ್ಲೋಡ್ ಮಾಡುತ್ತಿರುತ್ತಾರೆ.
ಸಂಗೀತಾ ಶೃಂಗೇರಿ ಧಾರಾವಾಹಿಗಳ ಮೂಲಕ ಸದ್ದು ಮಾಡುತ್ತಾ ಕೊನೆಗೆ ಕನ್ನಡ ಬೆಳ್ಳಿತೆರೆ ಮೇಲೆ ಕೂಡ ಮಿಂಚಿದ್ದರು. ಬಿಗ್‌ಬಾಸ್ ಸ್ಪರ್ಧಿಯಾಗಿ ಹೋದ ಸಂಗೀತಾ ತಮ್ಮ ನೇರ ನಡೆನುಡಿಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಅದರಲ್ಲೂ ಕೆಲವು ವರ್ಷದ ಹಿಂದೆ ರಿಲೀಸ್ ಆಗಿದ್ದ ಸಂಗೀತಾ ಶೃಂಗೇರಿ ಅವರ ಸಿನಿಮಾ '777 ಚಾರ್ಲಿ' ಸಖತ್ ಸೌಂಡ್ ಮಾಡಿತ್ತು. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಸಂಗೀತಾ ನಟಿಸಿದ್ದರು.