ಗೋಲ್ಡನ್ ಕಲರ್ ಸಲ್ವಾರ್‌ನಲ್ಲಿ ಶ್ವೇತಾ ಚೆಂಗಪ್ಪ, ಚೆಂದುಳ್ಳಿ ಚೆಲುವೆ ಎಂದು ಹೊಗಳಿದ ಫ್ಯಾನ್ಸ್!

First Published | Jan 25, 2024, 12:13 PM IST

ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡೂ ಕಡೆಗಳಲ್ಲಿ ಮಿಂಚುತ್ತಿರುವ ನಟಿ ಶ್ವೇತಾ ಚೆಂಗಪ್ಪ. ಇತ್ತೀಚಿಗೆ ಗೋಲ್ಡನ್ ಕಲರ್ ಸಲ್ವಾರ್, ಮೆರೂನ್ ದುಪ್ಪಟ್ಟಾ, ಸಿಲ್ವರ್ ಜ್ಯುವೆಲ್ಲರಿ ಹಾಕ್ಕೊಂಡು ಸ್ಟೈಲಿಶ್ ಆಗಿ ಮಿಂಚಿದ್ದಾರೆ. ನೆಟ್ಟಿಗರು ಫೋಟೋ ನೋಡಿ ಚೆಂದುಳ್ಳಿ ಚೆಲುವೆ ಎಂದು ಹೊಗಳಿದ್ದಾರೆ.

ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡೂ ಕಡೆಗಳಲ್ಲಿ ಮಿಂಚುತ್ತಿರುವ ನಟಿ ಶ್ವೇತಾ ಚೆಂಗಪ್ಪ. ಸದ್ಯಕ್ಕಂತೂ ಕನ್ನಡದ ನೆಚ್ಚಿನ ನಿರೂಪಕಿಯರಲ್ಲಿ ಒಬ್ಬರು ಎಂದರೆ ಅದು ಶ್ವೇತಾ  ಚೆಂಗಪ್ಪ

ಯಾವಾಗಲೂ ಸ್ಟೈಲಿಶ್ ಧರಿಸಿಕೊಂಡು ಮಿಂಚುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿರುವ ಶ್ವೇತಾ, ಯಾವಾಗ್ಲೂ ಟ್ರೆಡಿಶನಲ್ ಹಾಗೂ ಮಾಡರ್ನ್ ಡ್ರೆಸ್‌ನಲ್ಲಿ ಪೋಟೋವನ್ನು ಶೇರ್ ಮಾಡುತ್ತಿರುತ್ತಾರೆ.

Tap to resize

ಇತ್ತೀಚಿಗೆ ಗೋಲ್ಡನ್‌ ಕಲರ್ ಸಲ್ವಾರ್‌ ಹಾಗೂ ಮೆರೂನ್ ಪ್ರಿಂಟೆಂಡ್ ದುಪ್ಪಟ್ಟಾ ಧರಿಸಿ ಮುದ್ದಾಗಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ನೆಟ್ಟಿಗರು ಶ್ವೇತಾ ಚೆಂಗಪ್ಪ ನ್ಯೂ ಲುಕ್‌ಗೆ ಫಿದಾ ಆಗಿದ್ದಾರೆ.

ಬ್ಯೂಟಿಫುಲ್, ಸೂಪರ್, ಕ್ಯೂಟ್‌, ಗಾರ್ಜಿಯಸ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಮತ್ತೆ ಹಲವರು ಸೋ ಎಲಿಗೆಂಟ್‌, ಪ್ರೆಟ್ಟೀ ಸ್ಮೈಲ್ ಎಂದೆಲ್ಲಾ ಮೆಸೇಜ್ ಮಾಡಿದ್ದಾರೆ.

ಶ್ವೇತಾ ಚೆಂಗಪ್ಪ ಕಿರುತೆರೆಯ ಅಭಿನೇತ್ರಿ, ನಿರೂಪಕಿ. ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅರುಂಧತಿ ಧಾರಾವಾಹಿ, ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ, ತಂಗಿಗಾಗಿ ಚಲನಚಿತ್ರಗಳ ಮೂಲಕ ನಾಡಿನ ಮನೆಮಾತಾಗಿದ್ದಾರೆ. 

ಮಡಿಕೇರಿಯವರಾದ ಶ್ವೇತಾ ಚೆಂಗಪ್ಪ, ಸದ್ಯ ಬೆಂಗಳೂರಿನಲ್ಲೇ ನೆಲೆಯೂರಿದ್ದಾರೆ. ಮೌಂಟ್ ಕಾರ್ಮೆಲ್ ಕಾಲೇಜಲ್ಲಿ ಓದಿರುವ ಶ್ವೇತಾ ಹತ್ತನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಸೇರಿದ್ದರು

ಕಾಲೇಜ್‍ನಲ್ಲಿ ಓದುವ ಸಮಯದಲ್ಲೇ ಶ್ವೇತಾ ಚೆಂಗಪ್ಪಗೆ ಅವಕಾಶಗಳು ಬರುತ್ತಿತ್ತು. ಸುಮತಿ ಧಾರಾವಾಹಿಯಲ್ಲಿನ ಆಡಿಶನ್ ಮೂಲಕ ಆಯ್ಕೆಯಾದರು. ಇಲ್ಲಿಯವರೆಗೆ ಶ್ವೇತಾ ಅವರು ಎಲ್ಲ ಧಾರಾವಾಹಿಗಳಲ್ಲೂ 'ಟೈಟಲ್ ರೋಲ್' ನಲ್ಲಿ ಅಭಿನಯಿಸಿದ್ದಾರೆ.

ವರ್ಷ, ತಂಗಿಗಾಗಿ, ವೇದಾ ಮೊದಲಾದ ಸಿನಿಮಾಗಳಲ್ಲೂ ಶ್ವೇತಾ ಚೆಂಗಪ್ಪ ನಟಿಸಿದ್ದಾರೆ. ಡಾನ್ಸ್ ಡಾನ್ಸ್ ಜೂನಿಯರ್ಸ್, ಜೋಡಿ ನಂ. 1 (ಸೀಸನ್ 1), ಸೂಪರ್ ಕ್ವೀನ್, ಛೋಟಾ ಚಾಂಪಿಯನ್,ಜೋಡಿ ನಂ.1 (ಸೀಸನ್ 2) ರಿಯಾಲಿಟಿ ಶೋಗಳ ನಿರೂಪಕಿಯಾಗಿ ಜನರ ಮನಗೆದ್ದಿದ್ದಾರೆ.

Latest Videos

click me!