ಫ್ಲೋರಲ್‌ ಪ್ರಿಂಟ್ ಸ್ಯಾರಿಯಲ್ಲಿ ರಶ್ಮಿಕಾ ಮಂದಣ್ಣ, ಸೀರೆಯ ಅಂದ ಇನ್ನಷ್ಟು ಹೆಚ್ಚಿತು ಎಂದ ಫ್ಯಾನ್ಸ್!

First Published | Feb 3, 2024, 10:01 AM IST

ಕನ್ನಡದ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌, ಕಾಲಿವುಡ್‌ನಲ್ಲಿ ಸಖತ್‌ ಫೇಮಸ್‌..ಹಲವು ಸೂಪರ್‌ಹಿಟ್‌ ಸಿನ್ಮಾಗಳನ್ನು ಮಾಡಿರುವ ನಟಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್‌. ಇತ್ತೀಚಿಗೆ ಫ್ಲೋರಲ್‌ ಪ್ರಿಂಟೆಂಡ್ ಸೀರೆಯುಟ್ಟು ಅಭಿಮಾನಿಗಳ ಮನಕದ್ದಿದ್ದಾರೆ.

ಕನ್ನಡದ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌, ಕಾಲಿವುಡ್‌ನಲ್ಲಿ ಸಖತ್‌ ಫೇಮಸ್‌..ಹಲವು ಸೂಪರ್‌ಹಿಟ್‌ ಸಿನ್ಮಾಗಳನ್ನು ಮಾಡಿರುವ ನಟಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್‌. ಇತ್ತೀಚಿಗೆ ಫ್ಲೋರಲ್‌ ಪ್ರಿಂಟೆಂಡ್ ಸೀರೆಯುಟ್ಟು ಅಭಿಮಾನಿಗಳ ಮನಕದ್ದಿದ್ದಾರೆ.

ತಮ್ಮ ಬಿಝಿ ಶೆಡ್ಯೂಲ್‌ಗಳ ಮಧ್ಯೆಯೂ ರಶ್ಮಿಕಾ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಿನಿಮಾಗಳ ಕುರಿತಾದ ಅಪ್‌ಡೇಟ್‌, ಮಾಡರ್ನ್‌, ಟ್ರೆಡಿಶನಲ್‌ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಫ್ಯಾನ್ಸ್ ಸಹ ಇದಕ್ಕೆ ಮಿಸ್ ಮಾಡ್ದೆ ಕಾಮೆಂಟ್ ಮಾಡುತ್ತಾರೆ.

Latest Videos


ಹಾಗೆಯೇ ಇತ್ತೀಚಿಗೆ ಕಿರಿಕ್ ಬೆಡಗಿ ಸಿಂಪಲ್ ಆದ ಫ್ಲೋರಲ್ ಪ್ರಿಂಟೆಂಡ್ ಸೀರೆಯುಟ್ಟು ಮುದ್ದಾಗಿ ಫೋಸ್ ನೀಡಿದ್ದಾರೆ. 'ಎ ಸ್ಯಾರಿ ಕ್ಯಾನ್ ನೆವರ್ ಗೋ ರಾಂಗ್‌' ಎಂದು ಇದಕ್ಕೆ ಶೀರ್ಷಿಕೆ ನೀಡಿದ್ದಾರೆ.

ಆರೆಂಜ್‌ ಕಲರ್‌ನಲ್ಲಿ ಪಿಂಕ್‌ ಹೂಗಳ ಡಿಸೈನ್‌ ಇರೋ ಸೀರೆ ಇದಾಗಿದ್ದು, ಸಿಂಪಲ್‌ ಲುಕ್‌ಗೆ ಫ್ಯಾನ್ಸ್ ಮನಸೋತಿದ್ದಾರೆ. ರಶ್ಮಿಕಾ ಸ್ಯಾರಿ ಲುಕ್‌ಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಬ್ಯೂಟಿಫುಲ್‌, ಗಾರ್ಜಿಯಸ್, ಪ್ರೆಟ್ಟೀ ಎಂದೆಲ್ಲಾ ಹೇಳಿದ್ದಾರೆ.

ಅಭಿಮಾನಿಯೊಬ್ಬರು, 'ಈ ಸೀರೆಯಿಂದಲೇ ನಿಮ್ಮ ಅಂದ ಹೆಚ್ಚಿದೆ' ಎಂದು ತಿಳಿಸಿದ್ದಾರೆ. ಇನ್ನೊಬ್ಬರು 'ಆಲ್ವೇಸ್ ನ್ಯಾಷನಲ್ ಕ್ರಶ್‌' ಎಂದು ಹೇಳಿದ್ದಾರೆ. ಮತ್ತೆ ಕೆಲವರು, 'ಯಾವಾಗ ವಿಜಯ್‌ ದೇವರಕೊಂಡ ಜೊತೆ ಎಂಗೇಜ್‌ಮೆಂಟ್ ಮಾಡಿಕೊಳ್ತೀರಿ' ಎಂದು ಕೇಳಿದ್ದಾರೆ.

ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಎಂಗೇಜ್​ಮೆಂಟ್ ಮಾಡಿಕೊಳ್ತಾರೆ ಎನ್ನುವ ಸಿನಿ ರಂಗದಲ್ಲಿ ರೂಮರ್ಸ್ ಕೇಳಿ ಬರ್ತಿದೆ. ಆದ್ರೆ ಇದರ ಬಗ್ಗೆ ಇಬ್ಬರೂ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. 

ಇನ್ನು, ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳ ಸಕ್ಸಸ್ ಬೆನ್ನಲ್ಲಿಯೇ ಬಾಲಿವುಡ್, ಟಾಲಿವುಡ್ ಅಂತ ಫುಲ್ ಬಿಝಿಯಾಗಿದ್ದಾರೆ. ಅನಿಮಲ್ ಸಿನಿಮಾದಲ್ಲಿ ಗೀತಾಂಜಲಿ ಪಾತ್ರದಲ್ಲಿ ರಶ್ಮಿಕಾ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪುಷ್ಪಾ ಸಿನಿಮಾ ಹಿಟ್‌ ಆಗುವುದರೊಂದಿಗೆ ರಶ್ಮಿಕಾ ಮಂದಣ್ಣ ನಟನೆ ಎಲ್ಲರಿಗೂ ಅರ್ಥವಾಗಿದೆ. ಗ್ಲಾಮರ್‌ ಪಾತ್ರವೇ ಆಗಲಿ, ಡಿ ಗ್ಲಾಮರ್‌ ಪಾತ್ರವೇ ಆಗಲಿ ರಶ್ಮಿಕಾ ಯಶಸ್ವಿಯಾಗಿ ನಿಭಾಯಿಸುತ್ತಾರೆ.

ಸಾಲು ಸಾಲು ಹಿಟ್‌ ಸಿನಿಮಾಗಳ ಬಳಿಕ ರಶ್ಮಿಕಾ ಮಂದಣ್ಣ ಮತ್ತೆ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಫೆಬ್ರವರಿ ಎರಡನೇ ವಾರದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ.  

click me!