ಬೋಲ್ಡ್‌ ಫೋಟೋಸ್‌, ಸೆಕ್ಸೀ ಲುಕ್‌ನಿಂದ ಫೇಮಸ್ ಆಗಿದ್ದ ಹಾಟ್ ನಟಿ ಪೂನಂ ಪಾಂಡೆ

First Published | Feb 2, 2024, 3:13 PM IST

ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟಿರೋ ನಟಿ ಪೂನಂ ಪಾಂಡೆ ಯಾವಾಗಲೂ ತಮ್ಮ ಹಾಟ್ ಅವತಾರದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಹಸಿ-ಬಿಸಿ ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದರು.

ಬಾಲಿವುಡ್ ನಟಿ ಪೂನಂ ಪಾಂಡೆ ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಗರ್ಭಕಂಠದ ಕ್ಯಾನ್ಸರ್​ ಅವರನ್ನು ಬಲಿ ತೆಗೆದುಕೊಂಡಿತು. ಪೂನಂ ಪಾಂಡೆ ಯಾವಾಗಲೂ ತಮ್ಮ ಹಾಟ್ ಮತ್ತು ಬೋಲ್ಡ್ ಸ್ಟೈಲ್‌ನಿಂದಾಗಿ ಸುದ್ದಿಯಾಗುತ್ತಿದ್ದ ನಟಿ. 

ಯಾವಾಗಲೂ ತಮ್ಮ ಹಾಟ್ ಅವತಾರದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಹಸಿ-ಬಿಸಿ ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದರು.

Tap to resize

ಪೂನಂ ಪಾಂಡೆ ಅವರು 2013ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ನಶಾ’ ಅವರ ನಟನೆಯ ಮೊದಲ ಸಿನಿಮಾ. ‘ಲವ್ ಈಸ್ ಪಾಯಿಸನ್’ ಹೆಸರಿನ ಕನ್ನಡ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. 
 

ತೆಲುಗು, ಬೋಜ್​ಪುರಿ ಸಿನಿಮಾಗಳಲ್ಲಿ ಪೂನಂ ನಟಿಸಿದ್ದಾರೆ. 2018ರಲ್ಲಿ ರಿಲೀಸ್ ಆದ ‘ದಿ ಜರ್ನಿ ಆಫ್ ಕರ್ಮ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. 

Poonam Pandey

ವಿವಾದಾತ್ಮಕ ರೂಪದರ್ಶಿ ಎಂದೇ ಹೆಸರು ಪಡೆದ ನಟಿ ಪೂನಂ ಪಾಂಡೆ, ಲವ್ ಕಿ ಪ್ಯಾಶನ್, ಮಾಲಿನಿ ಅಂಡ್ ಕಂಪನಿ, ಆ ಗಯಾ ಹೀರೋ ಮತ್ತು ದಿ ಜರ್ನಿ ಆಫ್ ಕರ್ಮದಂಥ ಕೆಲವೇ ಚಿತ್ರಗಳಲ್ಲಿ ನಟಿಸಿದ್ದಾರೆ.

ಪೂನಂ ಪಾಂಡೆ, ತಮ್ಮ ಕಾಂಟ್ರವರ್ಸಿಗಳಿಂದಾಗಿಯೇ ಇವರು ಬಿಗ್​ಬಾಸ್​ನಲ್ಲಿ ಅವಕಾಶ ಪಡೆದುಕೊಂಡಿದ್ದರು. ಹೆಚ್ಚು ಫೇಮಸ್ ಆಗಿದ್ದರು.

ಆಲ್ಟ್ ಬಾಲಾಜಿಯ ಷೋ ಲಾಕಪ್‌ ನಲ್ಲಿಯೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇವರ ಹಾಟ್​ನೆಸ್​ಗೆ ಈ ಷೋ ಸಕತ್​ ಹಿಟ್​ ಆಗಿತ್ತು. ಅಲ್ಲಿ ಇವರು,  ಪ್ರತಿ ವಾರ ಸುಮಾರು 3 ಲಕ್ಷ ರೂ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ.  

ಮಾತ್ರವಲ್ಲ ಪೂನಂ ಪಾಂಡೆ, ಅರೆನಗ್ನ ಫೋಟೋಶೂಟ್​ ಮಾಡಿಸಿಕೊಂಡು ಮ್ಯಾಗಜೀನ್​ಗಳಿಂದ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದರು.

ಇವೆಲ್ಲಕ್ಕಿಂತಲೂ ಮಿಗಿಲಾಗಿ ನಟಿಗೆ ಹೆಚ್ಚು ಹಣವನ್ನು ತಂದುಕೊಟ್ಟದ್ದು ಕಾಮಪ್ರಚೋದಕ ಆ್ಯಪ್​. ಹೌದು. ನಟಿ ಖುದ್ದು ಒಂದು  ಕಾಮಪ್ರಚೋದಕ ಅಪ್ಲಿಕೇಶನ್ ಹೊಂದಿದ್ದರು.

ಇದರಿಂದ ಅವರು ಕೋಟಿ ಕೋಟಿ ಹಣ ಗಳಿಸಿದ್ದರು ಎನ್ನಲಾಗಿದೆ. ಈ ಆ್ಯಪ್​ಗೆ  32 ಲಕ್ಷಕ್ಕೂ ಅಧಿಕ  ಚಂದಾದಾರರು ಇದ್ದರು. ಈ ಆ್ಯಪ್​ನಲ್ಲಿ 32 ಲಕ್ಷ ಚಂದಾರಾರರಿಗೆ ಮನತಣಿಸುವ ವಿಡಿಯೋಗಳನ್ನು ಪೂನಂ ಹರಿಬಿಡುತ್ತಿದ್ದರು. 

Latest Videos

click me!