ಟೆಂಪಲ್ ಹಾಗೂ ರೂರಲ್ ಥೀಮ್‌ನಲ್ಲಿ ಫೋಟೋ ಶೂಟ್ ಮಾಡಿಸಿರುವ ಪ್ರಿಯಾಂಕಾ ಲೈಟ್ ಗೋಲ್ಡನ್ ಕಲರ್ ಸೀರೆಗೆ ನೇರಳೆ ಬಣ್ಣದ ಬ್ಲೌಸ್ ಧರಿಸಿ ಮಿಂಚಿದ್ದಾರೆ. ಈ ಡ್ರೆಸ್‌ಗೆ ಮ್ಯಾಚಿಂಗ್ ಆಗುವಂತೆ ಲಾಂಗ್ ಟೆಂಪಲ್ ಜ್ಯೂವೆಲರಿ ಧರಿಸಿ ಮಹಾರಾಣಿಯಂತೆ ಮಿಂಚಿದ್ದಾರೆ.
ದೇವಸ್ಥಾನ ಆವರಣದಲ್ಲಿ ಪೂಜೆಗೆ ಹೋಗುವ ಮಹಿಳೆಯಂತೆ ಫೋಟೋಗೆ ಪೋಸ್ ಕೊಟ್ಟಿದ್ದು, ಕೈಯಲ್ಲಿ ಹೂವು, ಹಣ್ಣು, ಸೇರಿದಂತೆ ಪೂಜೆಗೆ ಬೇಕಾದ ಸಾಮಾಗ್ರಿಗಳನ್ನು ಹಿಡಿದು ಪೋಸ್ ಕೊಟ್ಟಿದ್ದಾರೆ.
ದೇವಾಲಯದ ಗೋಪುರ ಮುಂದೆ ನಿಂತು ಕತ್ತನ್ನು ಮೇಲೆತ್ತಿ ನಿಂತಿರುವ ಭಂಗಿಯಲ್ಲಿ ಪ್ರಿಯಾಂಕಾ ಅವರ ಸೌಂದರ್ಯ ಇಮ್ಮಡಿಗೊಂಡಿದೆ. ಸೀರೆ ಮತ್ತು ಬ್ಲೌಸ್‌ಗಳ ಬಾರ್ಡರ್‌ನಲ್ಲಿರುವ ಹರಳುಗಳು ಬಿಸಿಲಿಗೆ ಹೊಳೆಯುತ್ತಿವೆ.
ದೇವಸ್ಥಾನದ ಆವರಣದಲ್ಲಿ ನಿಲ್ಲಿಸಿದ ಹಳೆಯ ರಥವೊಂದರ ಬಳಿ ನಿಂತು ಪೋಸ್ ಕೊಟ್ಟಿದ್ದು, ಪ್ರಿಯಾಂಕಾ ಧರಿಸಿದ ಸೀರೆ ಆಭರಣಗಳಿಗೆ ಒಪ್ಪುವಂತೆಯೇ ಹಿಂಬದಿ ಚಿತ್ರವೂ ಮೂಡಿಬಂದಿದೆ.
ಸಾಮಾನ್ಯವಾಗಿ ಹಿಂದೂಗಳು ದೇಲಾಯಕ್ಕೆ ಹೋದರೆ ದೇವರಿಗೆ ಪೂಜೆ ಅರ್ಪಣೆ ಮಾಡಿದ ನಂತರ ಪ್ರದಕ್ಷಿಣೆ ಹಾಕುತ್ತೇವೆ. ಅದೇ ರೀತಿ ದೇವಾಲಯದ ಆವರಣದ ಸುತ್ತಲೂ ಪ್ರದಕ್ಷಿಣೆ ಹಾಕುವ ಮಾದರಿಯಲ್ಲಿಯೂ ಫೋಟೋ ಶೂಟ್ ಮಾಡಿಸಿದ್ದಾರೆ.
ನಟಿ ಪ್ರಿಯಾಂಕಾ ಧರಿಸಿದ ಸೀರೆಗೆ ಒಪ್ಪುವಂತೆ ಟೆಂಪಲ್ ಜ್ಯೂವೆಲರಿ ಲಾಂಗ್ ಹಾರ, ಬೈತಲೆ ಸೆಟ್, ಸೊಂಟದ ಪಟ್ಟಿ, ಕತ್ತಿನ ಹಾರ ಸೇರಿ ಎಲ್ಲವೂ ಪ್ರಿಯಾಂಕ ಸೌಂದರ್ಯವನ್ನು ನೂರ್ಮಡಿಗೊಳಿಸಿವೆ.
ಉಪೇಂದ್ರ ಅವರ ಹೆಚ್‌ಟುಒ (H2O) ಸಿನಿಮಾದಲ್ಲಿ ಹೂವಿನ ಬುಟ್ಟಿಯನ್ನು ಹಿಡಿದು ಹೂವೆ ಹೂವೇ... ಎಂದು ಹಾಡುವಂತೆಯೇ ಫೋಟೋ ಶೂಟ್‌ನಲ್ಲಿಯೂ ಸ್ಥಳೀಯವಾಗಿ ಸಿಗುವ ದಾಸವಾಳ ಹೂವನ್ನು ಹಿಡಿದು ಅಂದ ಪ್ರದರ್ಶನ ಮಾಡಿದ್ದಾರೆ.
ಹಿಂದೂಗಳು ಆಚರಣೆ ಮಾಡುವ ಪ್ರತಿ ಹಬ್ಬಕ್ಕೂ ಪ್ರಿಯಾಂಕಾ ಉಪೇಂದ್ರ ಅವರು ಒಳ್ಳಯ ಸಿದ್ಧತೆ ಮಾಡಿಕೊಂಡು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಇದಕ್ಕೆ ಪ್ರತ್ಯೇಕ ಸಮಯ ಮೀಸಲಿಡುವುದಾಗಿ ಪ್ರಿಯಾಂಕಾ ಹೇಳಿಕೊಂಡಿದ್ದಾರೆ.
ಕಳೆದೊಂದು ವಾರದ ಹಿಂದೆ ದೇಶದೆಲ್ಲೆಡೆ ಸಂಭ್ರಮದಿಂದ ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡಲಾಗಿದ್ದು, ಆಗ ಪ್ರಿಯಾಂಕಾ ಉಪೇಂದ್ರ ಅವರು ವಿಜೃಂಭನೆಯಿಂದ ಕುಟುಂಬ ಸಮೇತರಾಗಿ ಹಬ್ಬ ಆಚರಿಸಿ ಫೋಟೋ ತೆಗೆಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಟ ಉಪೇಂದ್ರ ಮತ್ತು ಪ್ರಿಯಾಂಕ ದಂಪತಿಗಳು ಸಕುಟುಂಬ ಸಮೇತರಾಗಿ ನಾಗರಪಂಚಮಿ ಹಬ್ಬ ಆಚರಿಸಿದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು. ನಟ ಮತ್ತು ನಿರ್ದೇಶಕ ಉಪೇಂದ್ರ, ಅವರ ಪತ್ನಿ ನಟಿ ಪ್ರಿಯಾಂಕ, ಮಗ ಆಯುಷ್ , ಮಗಳು ಐಶ್ವರ್ಯ, ಉಪೇಂದ್ರ ಅವರ ತಂದೆ, ತಾಯಿ, ಅಣ್ಣ ಮತ್ತು ಅತ್ತಿಗೆ ಹಾಗೂ ಅವರ ಮಕ್ಕಳು ಸೇರಿದಂತೆ ಎಲ್ಲರೂ ಸಕುಟುಂಬ ನಾಗಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.