ಸೀರೆ ಸೈಡಿಗಿಟ್ಟು ಜೀನ್ಸ್‌-ಟಾಪ್‌ನಲ್ಲಿ ಫೋಸ್ ಕೊಟ್ಟ ವೈಷ್ಣವಿ ಗೌಡ , ಸೀತಾ ಏನಮ್ಮ ಕಥೆ ಅಂತಿದ್ದಾರೆ ನೆಟ್ಟಿಗರು!

First Published | Apr 2, 2024, 5:34 PM IST

ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀತಾರಾಮ ಸೀರಿಯಲ್ ಪ್ರೇಕ್ಷಕರ ಫೇವರಿಟ್‌. ಅದರಲ್ಲೂ ಸೀತಾ ಸರಳತೆ, ಸಾಂಪ್ರದಾಯಿಕ ಲುಕ್‌ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ರಿಯಲ್ ಲೈಫ್‌ನಲ್ಲೂ ಸೀರೆಯನ್ನು ಇಷ್ಟಪಡೋ ವೈಷ್ಣವಿ ಗೌಡ ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಜೀನ್ಸ್‌-ಟಾಪ್ ಹಾಕ್ಕೊಂಡು ಮಾಡರ್ನ್‌ ಲುಕ್‌ನಲ್ಲಿ ಫೋಟೋಸ್ ಶೇರ್ ಮಾಡಿದ್ದಾರೆ.

ಬ್ಲೂ ಜೀನ್ಸ್‌, ವೈಟ್ ಟಾಪ್‌ಗೆ ವೈಷ್ಣವಿ ಯೆಲ್ಲೋ ಕಲರ್‌ನ ಲಾಂಗ್‌ ಶ್ರಗ್‌ ಹಾಕ್ಕೊಂಡಿದ್ದಾರೆ. ಕಣ್ಣಿಗೆ ಬ್ಲ್ಯಾಕ್ ಕಲರ್ ಸನ್‌ಗ್ಲಾಸ್ ಹಾಕ್ಕೊಂಡು ಹಾಟ್‌ ಪೋಸ್ ಕೊಟ್ಟಿದ್ದಾರೆ.

Latest Videos

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್‌ ಆಗಿರುವ ವೈಷ್ಣವಿ ಆಗಾಗ ತಮ್ಮ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಜೀನ್ಸ್‌ ಹಾಕಿ ಮುದ್ದಾಗಿ ಫೋಸ್ ಕೊಟ್ಟಿದ್ದಾರೆ.

ವೈಷ್ಣವಿ ಗೌಡ ಹೊಸ ಫೋಟೋಸ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಸಹ ಮಾಡಿದ್ದಾರೆ. ಕ್ಯೂಟ್, ಗಾರ್ಜಿಯಸ್‌, ಬ್ಯೂಟಿಫುಲ್ ಎಂದೆಲ್ಲಾ ಹೊಗಳಿದ್ದಾರೆ. 

ಮತ್ತೆ ಕೆಲವರು ಕ್ಯೂಟ್‌ನೆಸ್‌ ಓವರ್‌ಲೋಡೆಡ್‌ ವೈಶು ಮ್ಯಾಮ್‌ ಎಂದಿದ್ದಾರೆ. ಇನ್ನೊಬ್ಬರು, ಟ್ರೆಡಿಶನಲ್ ಆಗಿರ್ಲಿ, ಮಾಡರ್ನ್ ಲುಕ್ ಆಗಿರ್ಲಿ ನೀವು ಎಲ್ಲದರಲ್ಲೂ ಸಖತ್‌ ಆಗಿ ಕಾಣಿಸ್ತೀರಿ ಎಂದು ಹೊಗಳಿದ್ದಾರೆ.

ಸೀರಿಯಲ್‌ ಪ್ರಿಯರಿಗೂ ವೈಷ್ಣವಿ ಅಚ್ಚುಮೆಚ್ಚು. ಅದರಲ್ಲೂ ಇತ್ತೀಚಿಗೆ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿಯಲ್ಲಿ ನಟಿಯ ಪಾತ್ರ ಹಾಗೂ ಅಭಿನಯ ಎಲ್ಲರಿಗೂ ಇಷ್ಟವಾಗಿದೆ. ಮುಗ್ದೆ ಸೀತೆಯ ಪಾತ್ರವನ್ನು ಎಲ್ಲರೂ ಕೊಂಡಾಡುತ್ತಾರೆ.

ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಅದಾದ ಬಳಿಕ ಬಿಗ್ ಬಾಸ್ ನಲ್ಲೂ ಕೂಡ ಸಕ್ಕತ್ತಾಗಿ ಆಟ ಆಡಿದ್ದಾರೆ.

ವೈಷ್ಣವಿ ಗೌಡ, ಇದೀಗ ಸೀತಾ ರಾಮ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದು, ಇದು ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ರಾಮ-ಸೀತಾ, ಸಿಹಿಯ ಕಥೆ ಎಲ್ಲರ ಮನ ಗೆಲ್ಲುತ್ತಿದೆ.

click me!