ನೀಲಿ ಸೀರೆಯಲ್ಲಿ ಮಿಂಚಿದ 'ಸೀತಾರಾಮ' ನಟಿ ಪ್ರಿಯಾ, ಮೂಗುತ್ತಿ ಮೇಲೇನೆ ಬಿತ್ತು ಎಲ್ಲರ ಕಣ್ಣು!

First Published Apr 3, 2024, 9:49 AM IST

ಸೀತಾರಾಮ್‌ ಸೀರಿಯಲ್‌ನಲ್ಲಿ ಹೀರೋಯಿನ್ ಸೀತಾಳಂತೆ ಎಲ್ಲರ ಗಮನ ಸೆಳೆದಿರುವ ಪಾತ್ರ ಆಕೆಯ ಗೆಳತಿ ಪ್ರಿಯಾಳದ್ದು. ಈ ಪಾತ್ರವನ್ನು ನಿರ್ವಹಿಸುತ್ತಿರುವ ಮೇಘನಾ ಶಂಕರಪ್ಪ, ಸೀರಿಯಲ್‌ನಲ್ಲಿ ಯಾವಾಗಲೂ ಮಾಡರ್ನ್‌ ಆಗಿ ಕಾಣಿಸಿಕೊಳ್ಳುತ್ತಾರೆ. ಆದ್ರೆ ರಿಯಲ್ ಲೈಫ್‌ನಲ್ಲಿ ಟ್ರೆಡಿಶನಲ್ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. 

ಸೀತಾರಾಮ್‌ ಸೀರಿಯಲ್‌ನಲ್ಲಿ ಹೀರೋಯಿನ್ ಸೀತಾಳಂತೆ ಎಲ್ಲರ ಗಮನ ಸೆಳೆದಿರುವ ಪಾತ್ರ ಆಕೆಯ ಗೆಳತಿ ಪ್ರಿಯಾಳದ್ದು. ಈ ಪಾತ್ರವನ್ನು ನಿರ್ವಹಿಸುತ್ತಿರುವ ಮೇಘನಾ ಶಂಕರಪ್ಪ, ಸೀರಿಯಲ್‌ನಲ್ಲಿ ಯಾವಾಗಲೂ ಮಾಡರ್ನ್‌ ಆಗಿ ಕಾಣಿಸಿಕೊಳ್ಳುತ್ತಾರೆ. ಆದ್ರೆ ರಿಯಲ್ ಲೈಫ್‌ನಲ್ಲಿ ಟ್ರೆಡಿಶನಲ್ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. 

ಡಾರ್ಕ್‌ ಮತ್ತು ಸ್ಕೈ ಕಲರ್‌ ಸೀರೆಯುಟ್ಟ ಮೇಘನಾ ಶಂಕರಪ್ಪ ಮುದ್ದಾಗಿ ಫೋಟೋಗೆ ಫೋಸ್ ನೀಡಿದ್ದಾರೆ. ಪಿಂಕ್ ಮತ್ತು ರೆಡ್ ಕಲರ್‌ನ ಬ್ಯಾಕ್‌ಗ್ರೌಂಡ್‌ನಲ್ಲಿ ಸೀರೆಯುಟ್ಟು ಸುಂದರವಾಗಿ ನಗು ಬೀರಿದ್ದಾರೆ. 

ಸೀತಾರಾಮ್‌ ಸೀರಿಯಲ್‌ನಲ್ಲಿ ಮೇಘನಾ ಶಂಕರಪ್ಪ ನಿರ್ವಹಿಸುತ್ತಿರುವ ಪಾತ್ರ, ಬಬ್ಲಿ ಬಬ್ಲಿಯಾಗಿದ್ದು, ಮಾತಿನ ಮಲ್ಲಿಯಾಗಿರುವ ಮೇಘನಾ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮೇಘನಾ ಶಂಕರಪ್ಪ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ಸೀರೆ, ಗೌನ್‌ನಲ್ಲಿ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸೀರಿಯಲ್ ಟೀಂ ಜೊತೆ ರೀಲ್ಸ್ ಸಹ ಮಾಡಿ ಶೇರ್ ಮಾಡುತ್ತಾರೆ.

ಮೇಘನಾ ಶಂಕರಪ್ಪ ಮುದ್ದಾದ ಫೋಟೋಸ್‌ಗೆ ನೆಟ್ಟಿಗರು ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಓರ್ವ ಬಳಕೆದಾರರು, ನೈಸ್ ಲುಕ್ಕಿಂಗ್‌, ಬ್ಯೂಟಿಫುಲ್ ಎಂದೆಲ್ಲಾ ಕಮೆಂಟ್‌ನಲ್ಲಿ ತಿಳಿಸಿದ್ದಾರೆ.

ಇನ್ನೋರ್ವ ಬಳಕೆದಾರರು, 'ಸೌಂದರ್ಯ ಅಂದ್ರೇ ಮೋನಾಲಿಸಾ ಅನ್ನೋ ಜನರಿಗೆಲ್ಲಾ ಹಿಡಿದಿದೆ ಹುಚ್ಚು,ಯಾಕಂದ್ರೆ ನಿಮ್ಮ ನಗು ಮುಖ ನೋಡಿ ಭೂತಾಯಿಗೆನೇ ಹೊಟ್ಟೆ ಕಿಚ್ಚು' ಎಂದು ಕವನವನ್ನೇ ಬರೆದಿದ್ದಾರೆ.

ಕನ್ನಡ ಕಿರುತೆರೆಯ ಚಾಯಾ ಎಂದೇ ಜನಪ್ರಿಯತೆ ಪಡೆದಿದ್ದ ಮೇಘನಾ ಶಂಕರಪ್ಪ ಸೀತಾರಾಮ ಧಾರಾವಾಹಿಯಿಂದ ಎಲ್ಲರ ನೆಚ್ಚಿನ ಪ್ರಿಯಾ ಆಗಿದ್ದಾರೆ. ಸೀರಿಯಲ್‌ನಲ್ಲಿ ಮಾಡರ್ನ್ ಹುಡುಕಿ ಪ್ರಿಯಾ ಪಾತ್ರ ಮಾಡುತ್ತಿದ್ದರೂ ಧರಿಸುವ ಪ್ರತಿಯೊಂದು ಬಟ್ಟೆನೂ ಸಿಂಪಲ್ ಆಂಡ್ ಬ್ಯೂಟಿಫುಲ್ ಆಗಿರುತ್ತದೆ

ಇನ್‌ಸ್ಟಾಗ್ರಾಂನಲ್ಲಿ 174 ಪೋಸ್ಟ್‌ ಶೇರ್ ಮಾಡಿರುವ ಮೇಘನಾ ಶಂಕರಪ್ಪ 55 ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ. ದಿನದಿಂದ ದಿನಕ್ಕೆ ಜನರ ಗಮನ ಸೆಳೆಯುತ್ತಿದ್ದಾರೆ. ಸಾಮಾನ್ಯವಾಗಿ ಪ್ರಿಯಾ ಯಾವ ಫೋಟೋ ಅಥವಾ ವಿಡಿಯೋ ಹಾಕಿದರೂ ಪಾಸಿಟಿವ್ ಕಾಮೆಂಟ್ ಬರುತ್ತದೆ. ಒಂದೂ ನೆಗೆಟಿವ್ ಬರುವುದಿಲ್ಲ.

ಮೇಘನಾ, ಈ ಹಿಂದೆ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದಲ್ಲಿ ನಟಿಸಿದ್ದರು. ಪಾಸಿಟಿವ್ ಆಗಲಿ ನೆಗೆಟಿವ್ ಆಗಲಿ ಎಲ್ಲ ಪಾತ್ರಕ್ಕೂ ಮೇಘನಾ ಶಂಕರಪ್ಪ ಸೈ ಅನ್ನುತ್ತಾರೆ.  ಕಿನ್ನರಿ, ಕೃಷ್ಣ ತುಳಸಿ, ರತ್ನಗಿರಿ ರಹಸ್ಯ, ದೇವಯಾನಿ ಮತ್ತು ಸಿಂಧೂರಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಮೇಘನಾ ಶಂಕರಪ್ಪ. 

click me!