ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಬಿಗ್ಬಾಸ್ 7ರಲ್ಲಿ ಭಾಗವಹಿಸಿದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಟ್ರೆಂಡ್ ಆಗುತ್ತಾರೆ. ಮಾತ್ರವಲ್ಲ ನಟಿ ಆಗಾಗ ಇನ್ಸ್ಟಾಗ್ರಾಂನಲ್ಲೂ ಮಾಡರ್ನ್ ಹಾಗೂ ಟ್ರೆಡಿಶನಲ್ ಲುಕ್ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ.
ತೆಲುಗು ಧಾರಾವಾಹಿಗಳಲ್ಲಿ ಸಕ್ರಿಯವಾಗಿರುವ ನಟಿ ಇತ್ತೀಚಿಗೆ ಸ್ಕರ್ಟ್, ಬ್ಲೌಸ್ ಹಾಗೂ ದುಪ್ಪಟ್ಟಾ ಧರಿಸಿ ಟ್ರೆಡಿಶನಲ್ ಲುಕ್ನಲ್ಲಿ ಪೋಟೋಸ್ ಶೇರ್ ಮಾಡಿದ್ದಾರೆ. ಪ್ರಿಂಟ್ ಇರುವ ಪಿಂಕ್ ಸ್ಕರ್ಟ್ ಹಾಗೂ ಬ್ಲೌಸ್, ಆರೆಂಜ್ ದುಪ್ಪಟ್ಟಾದಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ.
ನೆಟ್ಟಿಗರು ಫೋಟೋಗೆ ಲೈಕ್ಸ್, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ಬ್ಯೂಟಿಫುಲ್, ಸಖತ್ ಹಾಟ್, ಸೆಕ್ಸೀ ಲುಕ್ ಎಂದೆಲ್ಲಾ ಕಮೆಂಟಿಸಿದ್ದಾರೆ. ಮತ್ತೆ ಕೆಲವರು ಹಿಂತಿರುಗಿ ನಿಂತಿರುವ ಫೋಸ್ಗೆ ಬ್ಯಾಕ್ ಲುಕ್ ಚೆನ್ನಾಗಿದೆ ಎಂದು ಹೊಗಳಿದ್ದಾರೆ.
ಕನ್ನಡದಲ್ಲಿ ನಟಿ ಮೊದಲು 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದರು. ಇದರಲ್ಲಿ ಶೋಭಾ ಶೆಟ್ಟಿ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 6 ವರ್ಷಗಳಿಗೂ ಅಧಿಕ ಕಾಲ ಕಲರ್ಸ್ ಕನ್ನಡದಲ್ಲಿ 'ಅಗ್ನಿಸಾಕ್ಷಿ' ಪ್ರಸಾರವಾಗಿತ್ತು. ಇದರಲ್ಲಿ ಶೋಭಾ ಶೆಟ್ಟಿ ತನು ಪಾತ್ರದಲ್ಲಿ ನಟಿಸಿದ್ದರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಾವಗುತ್ತಿದ್ದ ರುಕ್ಕು ಧಾರಾವಾಹಿಯಲ್ಲೂ ಶೋಭಾ ಶೆಟ್ಟಿ ಕೆಲ ತಿಂಗಳ ಕಾಲ ನಟಿಸಿದರು. ಈ ಸೀರಿಯಲ್ನ ಟಿಆರ್ಪಿ ಚೆನ್ನಾಗಿಲ್ಲವಾದ ಕಾರಣ ಧಾರಾವಾಹಿಯಿಂದ ಹೊರ ನಡೆದರು.
ಆ ನಂತರ ನಟಿ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಲು ಆರಂಭಿಸಿದರು. ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಾರಣ ಶೋಭಾ ಶೆಟ್ಟಿ ಅವರನ್ನು ಬಿಗ್ಬಾಸ್ಗೆ ಆಯ್ಕೆ ಮಾಡಲಾಗಿತ್ತು.
ಬಿಗ್ಬಾಸ್ ಮನೆ ಸೇರಿದಾಗಿನಿಂದಲೂ ತಮ್ಮ ಬಾಯಿ ಬೊಂಬಾಯಿಯಿಂದಾಗಿ ಶೋಭಾ ಶೆಟ್ಟಿ, ತೆಲುಗು ಟ್ರೋಲ್ ಪೇಜ್ಗಳಲ್ಲಿ ಸಖತ್ ಟ್ರೋಲ್ ಆಗಿದ್ದರು.
ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್ಬಾಸ್ ಕಾರ್ಯಕ್ರಮ ಹೋಸ್ಟ್ ಮಾಡುತ್ತಿದ್ದರೆ, ತೆಲುಗಿನಲ್ಲಿ ನಟ ಅಕ್ಕಿನೇನಿ ನಾಗಾರ್ಜುನ್ ಅವರು ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.
ಶೋಭಾ ಶೆಟ್ಟಿ ಬಿಗ್ಬಾಸ್ ಮನೆಯಿಂದ ಔಟ್ ಆದಾಗ ಸಾಮಾಜಿಕ ಜಾಲತಾಣದಲ್ಲಿ ತೆಲುಗು ಬಿಗ್ಬಾಸ್ ವೀಕ್ಷಕರಲ್ಲಿ ಕೆಲವರು ಖುಷಿಯಾಗಿದ್ದರು. ಶೋಭಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ ಎಂದು ಪೋಸ್ಟ್ ಹಾಕಿದ ಟ್ರೋಲ್ ಪೇಜ್ಗಳಲ್ಲಿ ಅನೇಕರು ಸಂತಸ ವ್ಯಕ್ತಪಡಿಸಿದ್ದರು. ಇನ್ನು ಮೇಲೆ ನಾನು ಖುಷಿಯಿಂದ ಬಿಗ್ ಬಾಸ್ ನೋಡ್ತೇವೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು.