ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದಿರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ಹೊಗಳಿದ್ದಕ್ಕೇ ಈ ಪ್ರಶಸ್ತಿ ಸಿಕ್ಕಿದೆ ಎಂಬ ಟೀಕೆಗಳಿಗೆ ಅನಂತ್ ನಾಗ್ ಖಡಕ್ ತಿರುಗೇಟು ನೀಡಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದರಲ್ಲಿ ಒಬ್ಬರು ಅನಂತ್ನಾಗ್. ಅವರ ಅಭಿನಯವನ್ನು ಮೆಚ್ಚಿದವರು ಕೋಟ್ಯಂತರ ಮಂದಿ. ಆದರೆ ಅವರು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿದ್ದಂತೆಯೇ ಅವರ ವಿರುದ್ಧ ತಿರುಗಿ ಬಿದ್ದವರು ಕೆಲವರು! ಅದರ ಬೆನ್ನಲ್ಲೇ ಚಿತ್ರರಂಗದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಗುತ್ತಿದ್ದಂತೆಯೇ, ಕೆಲವರು ನಖಶಿಖಾಂತ ಉರಿದುಬಿದ್ದಿದ್ದಾರೆ. ಅನಂತ್ನಾಗ್ ಅವರ ನಟನೆಯನ್ನು ಮೆಚ್ಚಿಕೊಳ್ಳುತ್ತಿದ್ದವರೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದರಿಂದ ಅವರಿಗೆ ಈ ಪ್ರಶಸ್ತಿ ಸಿಕ್ಕಿದೆ ಎಂದು ಆಡಿಕೊಳ್ಳುತ್ತಿದ್ದಾರೆ!
26
ಅರಗಿಸಿಕೊಳ್ಳಲಾಗದ ಪ್ರಶಸ್ತಿ
ಇಷ್ಟು ವರ್ಷ ಬೇರೆ ನಟರಿಗೆ ಈ ಪ್ರಶಸ್ತಿ ಸಿಕ್ಕಾಗ, ಅವರಿಗೆ ಸಿಗಬೇಕಿತ್ತು, ಇವರಿಗೆ ಸಿಗಬೇಕಿತ್ತು ಎಂದೆಲ್ಲಾ ಹೇಳದವರು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬೇರೆ ನಟರ ಹೆಸರನ್ನು ಹೇಳಲು ಆರಂಭಿಸಿದ್ದಾರೆ. ಇಷ್ಟು ವರ್ಷಗಳಲ್ಲಿ ಕನ್ನಡಿಗನೊಬ್ಬನಿಗೆ ಅದೂ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ಎಂಥ ಪಾತ್ರಕ್ಕೂ ಸೈ ಎನ್ನಿಸಿಕೊಂಡು ಮೇಧಾವಿ ನಟನಾಗಿರುವ ಅನಂತ್ನಾಗ್ ಅವರಿಗೆ ಸಿಕ್ಕರೂ ಅದನ್ನು ಅರಗಿಸಿಕೊಳ್ಳಲಾಗದೇ ನೆಗೆಟಿವ್ ಕಮೆಂಟ್ ಹಾಕುತ್ತಿದ್ದಾರೆ.
36
ಈಗಲೂ ಮಾತಿಗೆ ಬದ್ಧ
ಈ ಬಗ್ಗೆ ಸುದ್ದಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟ ಅನಂತ್ಕುಮಾರ್ ಬೇಸರದಿಂದ ನುಡಿದಿದ್ದಾರೆ. ಇನ್ನೆರಡು ವರ್ಷಗಳಲ್ಲಿ ನಮಗೆ ಸ್ವಾತಂತ್ರ್ಯ ಬಂದು 80 ವರ್ಷ ಆಗುತ್ತದೆ. ಆದರೆ ಈಗಲೂ ನಾನು ನನ್ನ ಮಾತಿಗೆ ಬದ್ಧವಾಗಿದ್ದೇನೆ. ನರೇಂದ್ರ ಮೋದಿ ಅವರಂಥ ಪ್ರಧಾನಿ ಇಲ್ಲಿಯವರೆಗೆ ಬಂದಿಲ್ಲ. ಅವರ ಕಾರ್ಯಗಳನ್ನು ನಾನು ಹೊಗಳಿದ್ದೇನೆ. ಅದು ಹೊಗಳಿಕೆ ಅಲ್ಲ. ದೇಶದ ಪ್ರಗತಿ, ಅರ್ಥವ್ಯವಸ್ಥೆಯಲ್ಲಿನ ಏರುಗತಿಯನ್ನು ಕಣ್ಣಾರೆ ನೋಡಿದವರು ಯಾರು ಬೇಕಾದರೂ ಅವರನ್ನು ಹೊಗಳುತ್ತಾರೆ. ಇದರಲ್ಲಿ ಅತಿಶಯೋಕ್ತಿ ಏನೂ ಇಲ್ಲ ಎಂದಿದ್ದಾರೆ.
ಕೆಲವರು ಪ್ರಶಸ್ತಿ ಸಿಕ್ಕಿದ್ದಕ್ಕೆ ಏನೇನೋ ಮಾತನಾಡುತ್ತಿದ್ದಾರೆ. ಕೈಲಾಗದವನು ಮೈ ಪರಚಿಕೊಂಡ ಅಂತಾರಲ್ಲ, ಆ ರೀತಿ ಆಗಿದೆ ಅವರ ಸ್ಥಿತಿ. ನಾನು ಮೋದಿ ಅವರಿಗಿಂದ ಎರಡು ವರ್ಷ ದೊಡ್ಡವನು. ಅವರನ್ನು ಸುಖಾಸುಮ್ಮನೆ ಹೊಗಳಿ ನನಗೇನೂ ಆಗಬೇಕಿಲ್ಲ. ಆದರೆ ಅವರಂಥ ನಾಯಕ ದೇಶ ಕಂಡಿಲ್ಲ ಎನ್ನುವುದು ಯಾರು ಏನೇ ಪರಚಿಕೊಂಡರೂ ಸತ್ಯ ಎಂದಿದ್ದಾರೆ ನಟ ಅನಂತ್ ನಾಗ್.
56
ದೇಶಕ್ಕೆ ಒಳ್ಳೆಯದ್ದನ್ನೇ ಮಾಡ್ತಿದ್ದಾರೆ
ಒಬ್ಬರು ದೇಶಕ್ಕಾಗಿ ಒಳ್ಳೆಯದನ್ನು ಮಾಡುತ್ತಿರುವಾಗ ಅವರನ್ನು ಹೊಗಳಿದರೆ, ಅವರ ಸಾಧನೆಯನ್ನು ಬೆಂಬಲಿಸಿದರೆ ಸುಖಾ ಸುಮ್ಮನೇ ಕೆಟ್ಟಕೆಟ್ಟದ್ದಾಗಿ ಹೇಳುವುದಕ್ಕೆ ಏನು ಪ್ರಯೋಜನ ಎಂದು ನಟ ಪ್ರಶ್ನಿಸಿದ್ದಾರೆ.
66
ಇಂಥ ನಾಯಕ ಸಿಕ್ಕಿದ್ದೇ ಪುಣ್ಯ
ಹಾಗೆ ನೋಡಿದರೆ ನಮ್ಮ ದೇಶಕ್ಕೆ ಇಂಥ ನಾಯಕ ಸಿಕ್ಕಿದ್ದೇ ಪುಣ್ಯ. ಈಗಲೂ ನಾನು ಅದನ್ನೇ ಹೇಳುತ್ತೇನೆ. ಅವರ ಸಾಧನೆ ಅವರ ಕೃತ್ಯವೇ ತೋರಿಸುತ್ತಿದೆ. ಅಂಥಅಪರೂಪದ ನಾಯಕ ಅವರು ಎಂದು ಅನಂತ್ನಾಗ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.