Bigg Boss ಮನೆಯಲ್ಲೇ ಮೇಕಪ್​ ಕೋರ್ಸ್​ ಮಾಡಿದ ಗಗನ್, ತಾಂಡವ್​​! ಬ್ಯೂಟಿ ಪಾರ್ಲರ್​ ಇಡಲು ರೆಡಿ

Published : Sep 21, 2026, 01:05 PM IST

ಬಿಗ್‌ಬಾಸ್ 13 ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಮೊದಲ ವಾರದ ಎಲಿಮಿನೇಷನ್‌ನಲ್ಲಿ ದೊಡ್ಡ ಟ್ವಿಸ್ಟ್ ಎದುರಾಗಿದೆ. ಮನೆಯಿಂದ ಹೊರಬಂದ ಕಿರಣ್ ಶಾಸ್ತ್ರಿ ಮತ್ತು ಮಂಜ ಅಧಿಕೃತವಾಗಿ ಎಲಿಮಿನೇಟ್ ಆಗಿಲ್ಲ. ಇದರ ನಡುವೆ ಸ್ಪರ್ಧಿಗಳಾದ ಗಗನ್ ಮತ್ತು ತಾಂಡವ್ ನಡುವೆ ಮೇಕಪ್ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆದಿದೆ.

PREV
16
ಎರಡನೆ ವಾರಕ್ಕೆ ಕಾಲಿಟ್ಟ ಬಿಗ್​ಬಾಸ್​

ಬಿಗ್​ಬಾಸ್​​ 13 (Bigg Boss 13) ಆರಂಭವಾಗಿ ಎರಡನೆಯ ವಾರಕ್ಕೆ ಕಾಲಿಟ್ಟಿದೆ. ಇದಾಗಲೇ ಕಿಚ್ಚನ ಮೊದಲ ಪಂಚಾಯ್ತಿ ಕೂಡ ಆಗಿದ್ದು, ಹಲವರಿಗೆ ಕ್ಲಾಸ್​ ತೆಗೆದುಕೊಂಡು ಆಗಿದೆ. ಮೊದಲ ವಾರ ಕಿಚ್ಚನ ಚಪ್ಪಾಳೆ ಯಾರಿಗೂ ಸಿಗಲಿಲ್ಲ. ಎರಡನೇ ವಾರದಲ್ಲಿ ‘ಕರ್ನಾಟಕದ ಜನತೆ’ಗೆ ತಲೆಬಾಗಿ ಚಪ್ಪಾಳೆ ನೀಡಿದ್ದಾರೆ ಕಿಚ್ಚ ಸುದೀಪ್‌.

26
ಮನೆಯೊಳಗೆ ಮೇಕಪ್​ ವಿಷ್ಯ

ಇದೀಗ ಬಿಗ್​ಬಾಸ್​ ಮನೆಯಲ್ಲಿ ಮೇಕಪ್​ ವಿಷ್ಯದ ಬಗ್ಗೆ ಸ್ಪರ್ಧಿಗಳಾದ ನಟ ಗಗನ್​ ಚಿನ್ನಪ್ಪ ಮತ್ತು ತಾಂಡವ್​ ರಾಮ್​ ನಡುವೆ ಭರ್ಜರಿ ಮಾತುಕತೆ ಶುರುವಾಗಿದೆ. ಲೇಡೀಸ್​ ಮೇಕಪ್​ ಮಾಡಿಕೊಳ್ಳೋದನ್ನು ನೋಡಿಯೇ ನಾನು ಮೇಕಪ್​ ಆರ್ಟಿಸ್ಟ್​ ಆದೆ ಎಂದು ತಾಂಡವ್​ ಹೇಳಿದ್ದು, ಗಗನ್​ ನಾನು ಕೂಡ ಮೇಕಪ್​ ಮಾಡೋದನ್ನು ಕಲಿತೆ ಎಂದಿದ್ದಾರೆ.

36
ಮದುವೆ ಮನೆಗೆ ಮೇಕಪ್​

ಕೊನೆಗೆ ಗಗನ್​ ಅವರು, ತಾಂಡವ್​ಗೆ, ಹಾಗಿದರೆ ನೀನು ಹೊರಕ್ಕೆ ಹೋದ ಮೇಲೆ ಬ್ಯೂಟಿ ಪಾರ್ಲರ್​ ತೆಗೆಯಬಹುದು ಎಂದಾಗ, ತಾಂಡವ್​, ಬ್ಯೂಟಿ ಪಾರ್ಲರ್​ ಆಗಲ್ಲ ಆದರೆ ಮದುವೆ ಮನೆಗೆ ಮೇಕಪ್​ಗೆ ಹೋಗುವಷ್ಟು ರೆಡಿ ಆಗಿದ್ದೇನೆ ಎನ್ನುವ ಮೂಲಕ ಬಿಗ್​ಬಾಸ್​​ ಸ್ಪರ್ಧಿಗಳು ಮೇಕಪ್​ ಮಾಡಿಕೊಳ್ಳೋದರಲ್ಲಿಯೇ ಹೆಚ್ಚಿನ ಟೈಮ್​ ತೆಗೆದುಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

46
ಮೇಕಪ್​ ನೋಡೋದೇ ಚೆಂದ

ಅದಕ್ಕೆ ಇನ್ನಷ್ಟು ಮಾತು ಸೇರಿಸಿದ ತಾಂಡವ್​, ಏನೇ ಹೇಳಿ ಈ ಹೆಣ್ಮಕ್ಕಳು ಮೇಕಪ್​ ಮಾಡಿಕೊಳ್ಳೋದನ್ನು ನೋಡುವುದೇ ಚೆಂದ ಎನ್ನುವ ಮೂಲಕ ಯಾವುದೇ ಕಾಂಟ್ರವರ್ಸಿಗೆ ಸಿಲುಕದಂತೆ ನೋಡಿಕೊಂಡಿದ್ದಾರೆ.

56
ಎಲಿಮಿನೇಷನ್​

ಇನ್ನು ಮೊದಲ ವಾರದ ಎಲಿಮಿನೇಷನ್​ ಪ್ರಕ್ರಿಯೆಯೂ ನಡೆದಿದೆ. ಈ ವಾರ ಇಬ್ಬರು ಹೊರಬಂದಿದ್ದಾರೆ. ಕಿರಣ್ ಶಾಸ್ತ್ರಿ ಮತ್ತು ಮಾಡ್ರನ್ ಮಹಾಕವಿ ಮಂಜ. ಆದರೆ‌, ಮೇಜರ್‌ ಟ್ವಿಸ್ಟ್‌ ಇರೋದೇ ಇಲ್ಲಿ. ದೊಡ್ಮನೆಯಿಂದ ಹೊರಬಂದ ಶಾಸ್ತ್ರಿ - ಮಂಜ ಎಲಿಮಿನೇಟ್‌ ಆಗಿಲ್ಲ! ಅಸಲಿ ವಿಷಯ ಏನೆಂದರೆ, ಈ ವಾರ ಯಾವುದೇ ನಿಜವಾದ ಎಲಿಮಿನೇಷನ್ ನಡೆದಿಲ್ಲ. ಹೊರಬಂದ ಕಿರಣ್ ಶಾಸ್ತ್ರಿ ಮತ್ತು ಮಂಜ ಮುಖ್ಯ ವೇದಿಕೆಗೆ ಬರಲೇ ಇಲ್ಲ. ಹಾಗೂ ಅವರು ಆಟದಿಂದ ಅಧಿಕೃತವಾಗಿ ಎಲಿಮಿನೇಟ್ ಕೂಡ ಆಗಿಲ್ಲ.

66
ಎಲಿಮಿನೇಷನ್​

ಇನ್ನು ಮೊದಲ ವಾರದ ಎಲಿಮಿನೇಷನ್​ ಪ್ರಕ್ರಿಯೆಯೂ ನಡೆದಿದೆ. ಈ ವಾರ ಇಬ್ಬರು ಹೊರಬಂದಿದ್ದಾರೆ. ಕಿರಣ್ ಶಾಸ್ತ್ರಿ ಮತ್ತು ಮಾಡ್ರನ್ ಮಹಾಕವಿ ಮಂಜ. ಆದರೆ‌, ಮೇಜರ್‌ ಟ್ವಿಸ್ಟ್‌ ಇರೋದೇ ಇಲ್ಲಿ. ದೊಡ್ಮನೆಯಿಂದ ಹೊರಬಂದ ಶಾಸ್ತ್ರಿ - ಮಂಜ ಎಲಿಮಿನೇಟ್‌ ಆಗಿಲ್ಲ! ಅಸಲಿ ವಿಷಯ ಏನೆಂದರೆ, ಈ ವಾರ ಯಾವುದೇ ನಿಜವಾದ ಎಲಿಮಿನೇಷನ್ ನಡೆದಿಲ್ಲ. ಹೊರಬಂದ ಕಿರಣ್ ಶಾಸ್ತ್ರಿ ಮತ್ತು ಮಂಜ ಮುಖ್ಯ ವೇದಿಕೆಗೆ ಬರಲೇ ಇಲ್ಲ. ಹಾಗೂ ಅವರು ಆಟದಿಂದ ಅಧಿಕೃತವಾಗಿ ಎಲಿಮಿನೇಟ್ ಕೂಡ ಆಗಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories