1965ರ ಹಿನ್ನೆಲೆಯಲ್ಲಿ ನಡೆಯುವ ಸುಂದರ ಪ್ರೇಮಕಥೆಯನ್ನು ಹೇಳುತ್ತದೆ. 20 ವರ್ಷಗಳ ನಂತರ ಪಾಕಿಸ್ತಾನಿ ಯುವತಿ ಮೂಲಕ ಈ ಕಥೆಯ ಭಾವನಾತ್ಮಕ ರಹಸ್ಯಗಳು ಬಿಚ್ಚಿಕೊಳ್ಳುತ್ತವೆ. ಅತ್ಯುತ್ತಮ ದೃಶ್ಯಕಾವ್ಯ ಮತ್ತು ನಟನೆಯಿರುವ ಈ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಬಹುದು.
ಈ ಸಿನಿಮಾ ಥಿಯೇಟರ್‌ಗೆ ಬಂದಾಗ ಪ್ರೇಕ್ಷಕರಿಗೆ ಡಿಕ್ಯೂ (DQ) ಫ್ಯಾಕ್ಟರ್ ದೊಡ್ಡ ಆಕರ್ಷಣೆಯಾಗಿತ್ತು. 1965ರ ಹಿನ್ನೆಲೆಯಲ್ಲಿ ನಡೆಯುವ ಲವ್ ಸ್ಟೋರಿ ಎಂದು ಪ್ರಮೋಷನ್ ಮೂಲಕ ಸಿನಿಮಾ ತಂಡ ಪ್ರೇಕ್ಷಕರಿಗೆ ಪರಿಚಯಿಸಿತ್ತು. ಈ ಸಿನಿಮಾ ನೋಡಿ ಥಿಯೇಟರ್‌ನಿಂದ ಹೊರಬಂದ ಪ್ರೇಕ್ಷಕರಲ್ಲಿ ಸಂತೋಷದ ಜೊತೆಯಲ್ಲಿ ಭಾವುಕತೆಯಿಂದ ಹೊರ ಬಂದರು. 25 ಕೋಟಿ ಬಜೆಟ್‌ನ ಈ ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತು.
28
ಕ್ಷಣ ಕ್ಷಣಕ್ಕೂ ಭಾವನಾತ್ಮಕ ತಿರುವು ಪಡೆಯೋ ಸಿನಿಮಾ
ಮಲಯಾಳಂ ನಟನ ಇದು ಎರಡನೇ ತೆಲುಗು ಸಿನಿಮಾ ಆಗಿದ್ದರಿಂದ ಬಿಡುಗಡೆಗೂ ಮುನ್ನ ಹೆಚ್ಚು ನಿರೀಕ್ಷೆಯನ್ನು ಮೂಡಿಸಿತ್ತು. ಪ್ರೇಕ್ಷಕರ ನಿರೀಕ್ಷೆಗಿಂತ ಎರಡು ಪಟ್ಟು ಮನರಂಜನೆಯನ್ನು ನೀಡುವಲ್ಲಿ ಸಿನಿಮಾ ಸಕ್ಸಸ್ ಆಗಿತ್ತು. 1965 ಮತ್ತು 1985ರ ನಡುವಿನ ಕಥೆ ಇದಾಗಿದೆ. 1965ರಲ್ಲಿ ನಡೆದ ಘಟನೆಯ ಹುಡುಕಾಟ 1985ರಲ್ಲಿ ನಡೆಯುತ್ತದೆ. ಇಲ್ಲಿಂದ ಕಥೆ ಹಂತ ಹಂತವಾಗಿ ಭಾವನಾತ್ಮಕ ತಿರುವುಗಳನ್ನು ಪಡೆದುಕೊಳ್ಳಲು ಆರಂಭವಾಗುತ್ತದೆ.
38
ಸಿನಿಮಾದ ಕಥೆ ಏನು?
ಲಂಡನ್‌ನಲ್ಲಿ ಓದುತ್ತಿರುವ ಪಾಕಿಸ್ತಾನಿ ಯುವತಿ 'ಅಫ್ರೀನ್' ಮೂಲಕ 'ಸೀತಾ ರಾಮಂ' ಸಿನಿಮಾದ ಕಥೆ ಶುರುವಾಗುತ್ತದೆ. ಅಫ್ರೀನ್ ಅಜ್ಜ ಪಾಕಿಸ್ತಾನಿ ಸೇನೆಯಲ್ಲಿ ಮೇಜರ್ ಆಗಿದ್ದವರು. 1965ರಲ್ಲಿ 'ಲೆಫ್ಟಿನೆಂಟ್ ರಾಮ್' ಬರೆದಿದ್ದ ಒಂದು ಪತ್ರವನ್ನು 1985ರಲ್ಲಿ 'ಮಿಸ್ ಸೀತಾಮಹಾಲಕ್ಷ್ಮಿ'ಗೆ ತಲುಪಿಸುವ ಜವಾಬ್ದಾರಿಯನ್ನು ತಾತ ಅಫ್ರೀನ್‌ಗೆ ಒಪ್ಪಿಸುತ್ತಾರೆ. ಭಾರತ ಮತ್ತು ಪಾಕಿಸ್ತಾನದ ಸೈನಿಕರು ಹೇಗೆ ಸ್ನೇಹಿತರಾದರು ಎಂಬುದು ಅಪ್ಪಟ ದೇಶಭಕ್ತೆಯಾದ ಅಫ್ರೀನ್‌ಗೆ ಅಚ್ಚರಿ ತರುತ್ತದೆ.
'ಸೀತಾಮಹಾಲಕ್ಷ್ಮಿ'ಯನ್ನು ಹುಡುಕಿಕೊಂಡು ಹೊರಡುವ ಅಫ್ರೀನ್, ಮದ್ರಾಸ್ ರೆಜಿಮೆಂಟ್‌ನ ಲೆಫ್ಟಿನೆಂಟ್ 'ರಾಮ್'ನನ್ನು ಹುಡುಕುವ ಹಂತಕ್ಕೆ ತಲುಪುತ್ತಾಳೆ. ರಾಮ್ ಯಾರು? ಸೀತೆ ಯಾರು? ಎಂಬುದು ಅಫ್ರೀನ್ ಹುಡುಕಾಟದ ಮೂಲಕ ಪ್ರೇಕ್ಷಕರಿಗೆ ಗೊತ್ತಾಗುತ್ತದೆ. ಹೀಗೆ ರಾಮ್ ಮತ್ತು ಸೀತಾ ಮಹಾಲಕ್ಷ್ಮಿಯ ಲವ್ ಸ್ಟೋರಿ ಬಿಚ್ಚಿಕೊಳ್ಳುತ್ತದೆ. ಟೈಟಲ್ ಪಾತ್ರಗಳ ಪ್ರೀತಿಯ ಸುತ್ತ ಕಥೆ ಸುತ್ತಿದರೂ, ಸಿನಿಮಾ ಹಲವು ಆಯಾಮಗಳಲ್ಲಿ ತೆರೆದುಕೊಳ್ಳುತ್ತದೆ.
58
ದೃಶ್ಯಕಾವ್ಯದ ಕಥನ
ಹಳೆಯ ಕಾಲಘಟ್ಟದ ಕಥೆಯನ್ನು ಅದ್ಭುತ ದೃಶ್ಯಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಪ್ರೊಡಕ್ಷನ್ ಡಿಸೈನ್ ಬಗ್ಗೆ ನಿರ್ಮಾಪಕರು ತುಂಬಾನೇ ಗಮನಹರಿಸಿದ್ದಾರೆ. ಕ್ಯಾಮೆರಾಮನ್‌ಗಳಾದ ಪಿ.ಎಸ್. ವಿನೋದ್ ಮತ್ತು ಶ್ರೇಯಾಸ್ ಕೃಷ್ಣ ಅವರ ಕ್ಯಾಮೆರಾ ಕಣ್ಣುಗಳು ದೃಶ್ಯಕಾವ್ಯವನ್ನೇ ಸೃಷ್ಟಿಸಿವೆ. ಸಿನಿಮಾದ ಕಲರ್ ಟೋನ್ ಮತ್ತು ಲೈಟಿಂಗ್ ಪ್ರೇಕ್ಷಕರನ್ನು ಸೆಳೆಯುತ್ತದೆ. ಕಾಶ್ಮೀರದ ಲೊಕೇಶನ್‌ಗಳನ್ನು ಛಾಯಾಗ್ರಾಹಕರು ಅಷ್ಟೇ ಸುಂದರವಾಗಿ ಸೆರೆ
68
ಕಲಾವಿದರ ಪರಕಾಯ ಪ್ರವೇಶ
ದುಲ್ಕರ್ ಮತ್ತು ಮೃಣಾಲ್ ಠಾಕೂರ್ ಮಾತ್ರವಲ್ಲದೆ, ಸಣ್ಣ ಪಾತ್ರಗಳ ಕಾಸ್ಟಿಂಗ್ ಬಗ್ಗೆಯೂ ತಂಡ ಗಮನಹರಿಸಿದೆ. ಇದು ಪ್ರೇಕ್ಷಕರನ್ನು ಸಿನಿಮಾಗೆ ಹತ್ತಿರ ಮಾಡುತ್ತದೆ. ಸಣ್ಣ ಪಾತ್ರಗಳಿಗೂ ಹೆಸರಾಂತ ನಟರನ್ನು ಕರೆತರಲು ನಿರ್ಮಾಪಕರು ಶ್ರಮಿಸಿದ್ದಾರೆ. ದುಲ್ಕರ್ ಮತ್ತು ಮೃಣಾಲ್ ಠಾಕೂರ್ ಆನ್-ಸ್ಕ್ರೀನ್ ಕೆಮಿಸ್ಟ್ರಿ, ನಿರ್ದೇಶಕರಿಗೆ ಒಂದು ಕಾವ್ಯಾತ್ಮಕ ಲವ್ ಸ್ಟೋರಿ ಹೇಳಲು ಸಹಾಯ ಮಾಡಿದೆ.
78
ಕಥೆಯನ್ನು ಕೊನೆಯವರೆಗೂ ತೆಗೆದುಕೊಂಡು ಹೋಗುವ ರಶ್ಮಿಕಾ ಮಂದಣ್ಣ
'ರಾಮ್' ಆಗಿ ದುಲ್ಕರ್ ಮತ್ತು 'ಸೀತಾ ಮಹಾಲಕ್ಷ್ಮಿ'ಯಾಗಿ ಮೃಣಾಲ್ ಠಾಕೂರ್ ಜೀವ ತುಂಬಿದ್ದಾರೆ. ರೊಮ್ಯಾಂಟಿಕ್ ಮತ್ತು ಎಮೋಷನಲ್ ದೃಶ್ಯಗಳಲ್ಲಿ ದುಲ್ಕರ್ ಅದ್ಭುತವಾಗಿ ನಟಿಸಿದ್ದಾರೆ. 'ಅಫ್ರೀನ್' ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟನೆ ಕಥೆಯ ಓಟಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ತರುಣ್ ಭಾಸ್ಕರ್, ಸಚಿನ್ ಖೇಡೇಕರ್, ವೆಣ್ಣೆಲ ಕಿಶೋರ್, ಮುರಳಿ ಶರ್ಮಾ, ಪ್ರಕಾಶ್ ರಾಜ್, ಭೂಮಿಕಾ, ಗೌತಮ್ ವಾಸುದೇವ್ ಮೆನನ್ ಮುಂತಾದವರ ನಟನೆ ಕಥೆಗೆ ಪೂರಕವಾಗಿದೆ.
88
ಯಾವ OTT ಪ್ಲಾಟ್‌ಫಾರಂನಲ್ಲಿದೆ ಸಿನಿಮಾ?
ಸೀತಾ ಮತ್ತು ರಾಮ್ ಅವರ ಸುಂದರ ಪ್ರೇಮಕಥೆಗೆ ಹಿನ್ನೆಲೆ ಒದಗಿಸುವಲ್ಲಿ ವಿಶಾಲ್ ಚಂದ್ರಶೇಖರ್ ಅವರ ಸಂಗೀತ ಪ್ರಮುಖ ಪಾತ್ರ ವಹಿಸಿದೆ. ಹಾಡುಗಳು ಕಥೆಯ ಜೊತೆಯಲ್ಲೇ ಸಾಗುತ್ತವೆ. ಸೀತಾ ರಾಮಂ ಸಿನಿಮಾವನ್ನು Amazon Prime Video and Disney+ Hotstar, Amazon MX Playerನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.