"ಮಕ್ಕಳು ಆಟದ‌ ಸಮಯ ಬದಲಾಯಿಸಿ ನಿಮ್ಮ ಧಾರಾವಾಹಿ ನೋಡ್ತಿದ್ದಾರೆ": ವೀಕ್ಷಕರು ಹೀಗಂದದ್ದು ಯಾರಿಗೆ, ಯಾಕೆ?

Published : Oct 19, 2025, 02:44 PM IST

TV serial fan craze: ಅವರಿಬ್ಬರನ್ನೂ ಕಂಡರೂ ಕನ್ನಡಿಗರಿಗೆ ಇಷ್ಟವಾದರೂ ವಿಶೇಷವಾಗಿ ಈ ನಟ ನೆಚ್ಚಿನ ನಾಯಕ ಪ್ರಶಸ್ತಿ ಪಡೆದಿರುವುದಕ್ಕೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಯಾರು ಆ ನಟ, ಯಾಕೆ ಅಂತ ಮುಂದೆ ಓದಿ... 

PREV
16
ಯಾರು ಆ ನಟ?

ಜೀ ಕನ್ನಡ ವಾಹಿನಿಯಲ್ಲಿ ಕಳೆದೆರೆಡು ದಿನಗಳಿಂದ ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2025 ಪ್ರಸಾರವಾಗುತ್ತಿದೆ. ಈ ಬಾರಿ ನೆಚ್ಚಿನ ನಾಯಕ ಪ್ರಶಸ್ತಿಯನ್ನು ಇಬ್ಬರು ನಟರು ತಮ್ಮದಾಗಿಸಿಕೊಂಡಿದ್ದಾರೆ. ಅವರಿಬ್ಬರನ್ನೂ ಕಂಡರೂ ಕನ್ನಡಿಗರಿಗೆ ಇಷ್ಟವಾದರೂ ವಿಶೇಷವಾಗಿ ಈ ನಟ ನೆಚ್ಚಿನ ನಾಯಕ ಪ್ರಶಸ್ತಿ ಪಡೆದಿರುವುದಕ್ಕೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಯಾರು ಆ ನಟ, ಯಾಕೆ ಅಂತ ಮುಂದೆ ಓದಿ…

26
ಅಭಿಮಾನಿಗಳಿಂದ ವಿಶ್

ಈ ಬಾರಿ ನೆಚ್ಚಿನ ನಾಯಕ ಪ್ರಶಸ್ತಿಯನ್ನು ಅಣ್ಣಯ್ಯ ಧಾರಾವಾಹಿಯಿಂದ ಶಿವು ಪಾತ್ರಧಾರಿ ವಿಕಾಶ್ ಉತ್ತಯ್ಯ, ಅಮೃತಧಾರೆ ಧಾರಾವಾಹಿಯಿಂದ ಗೌತಮ್ ದಿವಾನ್ ಪಾತ್ರಧಾರಿ ನಟರಂಗ ರಾಜೇಶ್‌ ಪಡೆದಿದ್ದಾರೆ. ಇವರಿಬ್ಬರಿಗೂ ಈ ಪ್ರಶಸ್ತಿ ದೊರೆತಿರುವುದಕ್ಕೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರ ಹರಿದು ಬಂದಿದೆ.

36
ವಿಕಾಶ್ ಉತ್ತಯ್ಯ

ವಿಕಾಶ್ ಉತ್ತಯ್ಯ ಅಣ್ಣಯ್ಯ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಹೆಚ್ಚು ಹತ್ತಿರವಾದರು. ಹಿರಿತೆರೆಯಲ್ಲೂ ಕಾಣಿಸಿಕೊಂಡು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಮೂಲತಃ ಕೊಡಗಿನವರಾದ ವಿಕಾಶ್ ಉತ್ತಯ್ಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಸಿನಿಮಾ ಹಾಗೂ ಕಿರುಚಿತ್ರಗಳಲ್ಲಿ ಅಭಿನಯಿಸಿರುವ ವಿಕಾಶ್ ಇದುವರೆಗೂ ಎರಡು ಸಿನಿಮಾಗಳಾದ ಆನಾ, ಮೇರಿ ಹಾಗೂ ಕನಸಿನ ಮಳೆ ಕಿರುಚಿತ್ರದಲ್ಲಿ ನಟಿಸಿದ್ದಾರೆ.

46
ನಟರಂಗ ರಾಜೇಶ್‌

ಇನ್ನು ನಟರಂಗ ರಾಜೇಶ್‌ ಬಗ್ಗೆ ಹೇಳುವುದಾದರೆ ಟಿಎನ್ ಸೀತಾರಾಮ್ ಅವರ ನಿರ್ದೇಶನದ ಮಾಯಮೃಗ ಸೀರಿಯಲ್‌ನಲ್ಲಿ ಶ್ರೀಧರ್ ಎಂಬ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದರು. ಅದಾದ ಬಳಿಕ 2003ರಲ್ಲಿ ಗುಪ್ತಗಾಮಿನಿ ಧಾರಾವಾಹಿಯಲ್ಲಿ ನಟಿಸಿದರು. ಇದರಲ್ಲಿ ತೇಜಸ್ವಿ ಪಾತ್ರ ಎಲ್ಲರ ಗಮನ ಸೆಳೆಯಿತು. ಹೀಗೆ ಒಂದಾದ ಮೇಲೊಂದರಂತೆ ಹಿಟ್ ಸೀರಿಯಲ್‌ಗಳಲ್ಲಿ ನಟಿಸಿರುವ ರಾಜೇಶ್‌ ಅವರು ಸದ್ಯ ಅಮೃತಧಾರೆಯಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಧಾರಾವಾಹಿಗಳಲ್ಲಿ ಮಾತ್ರವಲ್ಲ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು ರಾಜೇಶ್. ಇದುವರೆಗೂ 80ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

56
ನೀವೇ ಜನಪ್ರಿಯ ನಾಯಕ

ಈಗ ನೆಚ್ಚಿನ ನಾಯಕ ಪ್ರಶಸ್ತಿಯನ್ನು ಪಡೆದಿರುವ ನಟರಂಗ ರಾಜೇಶ್‌ಗೆ ಅಭಿಮಾನಿಗಳು ವಿಶ್ ಮಾಡುತ್ತಲೇ ಇದ್ದಾರೆ. ಜೀ ಅವ್ರಿಗೆ ಬೆಸ್ಟ್ ಇರ್ಬೋದು ನಮ್ಗೆ ನೀವೇ ಜನಪ್ರಿಯ ನಾಯಕ ಎಂದಿರುವ ಅಭಿಮಾನಿಗಳು ರಾಜೇಶ್ ಅವರ ಬಗ್ಗೆ ಇನ್ನು ಏನೆಲ್ಲಾ ಹೇಳಿದ್ದಾರೆ ನೋಡಿ…

66
ಅಭಿಮಾನಿಗಳ ಪ್ರತಿಕ್ರಿಯೆ

*ನಟರಂಗ ರಾಜೇಶರಿಗೆ "ನೆಚ್ಚಿನ ನಟ" ಪ್ರಶಸ್ತಿ ಸಿಕ್ಕಿರುವುದು ಬಹಳ ಸಂತೋಷ.
*ನೀವು ಈ ಪ್ರಶಸ್ತಿಗೆ ಅರ್ಹರು.
*ಶುಭಾಷಯಗಳು ಸರ್. ನಿಮ್ಮ ಪಾತ್ರಕ್ಕೆ ನೀವು ಜೀವ ತುಂಬಿದ್ದೀರ.
*ಕಂಗ್ರಾಟ್ಸ್ ಸರ್. ನೀವು ಧಾರಾವಾಹಿಯಲ್ಲಿ ತೋರಿಸಿರುವಂತೆ ನಿಜ ಜೀವನದಲ್ಲಿ ಶಕುಂತಲಾ ಮತ್ತು ಲಕ್ಷ್ಮೀಕಾಂತ ಅವರನ್ನ ನಂಬಬೇಡಿ. *ಅಭಿನಂದನೆಗಳು .. ಹೀಗೊಂದು ಹೇಳಿಕೊಳ್ಳುವ ಸಂಗತಿ ಇದೆ . ಶಟಲ್ ಬ್ಯಾಟ್ ಮಿಟನ್‌ ಕೋಚ್ ತೆಗೆದುಕೊಳ್ಳುತ್ತಿರುವ ಹಲವು ಮಕ್ಕಳು ಆಟದ‌ ಸಮಯ ಬದಲಾಯಿಸಿಕೊಂಡು ಅಮೃತಧಾರೆಯಲ್ಲಿ ನಿಮ್ಮ ಪಾತ್ರ‌ ನೋಡಲು ಅಪೇಕ್ಷಿಸುತ್ತಿದ್ದಾರೆ... ಮತ್ತೊಮ್ಮೆ ಅಭಿನಂದನೆ ಒಂದು ಪಾತ್ರ ಯುವ ಜನಾಂಗಕ್ಕೂ ಸ್ಪೂರ್ತಿಯಾಗುತ್ತಿರುವುದು ನಿಜಕ್ಕೂ ಹೆಮ್ಮೆ ಶುಭಂ ಭೂಯಾತ್ ಎಂದೆಲ್ಲಾ ವಿಶ್ ಮಾಡಿದ್ದಾರೆ.

Read more Photos on
click me!

Recommended Stories