Bigg Boss Wild Card entry: ಕುತೂಹಲಕ್ಕೆ ಕೊನೆಗೂ ತೆರೆ- ವೈಲ್ಡ್​ ಕಾರ್ಡ್​ ಎಂಟ್ರಿ ಪ್ರೊಮೋ ರಿಲೀಸ್​: ಯಾರಿವರು?

Published : Oct 19, 2025, 02:15 PM IST

ಬಿಗ್ ಬಾಸ್ ಮನೆಯಲ್ಲಿ ಮಾಸ್ ಎಲಿಮಿನೇಷನ್ ನಡೆದಿದ್ದು, ಐವರು ಸ್ಪರ್ಧಿಗಳು ಹೊರಬಂದಿದ್ದಾರೆ. ಇದೀಗ ವೈಲ್ಡ್ ಕಾರ್ಡ್ ಎಂಟ್ರಿಯ ಚರ್ಚೆ ಜೋರಾಗಿದ್ದು, 'ಕಾಂತಾರ' ನಟ ರಾಘವೇಂದ್ರ, ಶ್ವೇತಾ ಪ್ರಸಾದ್ ಹಾಗೂ ರಿಷಾ ಗೌಡ ಅವರ ಹೆಸರುಗಳು ಕೇಳಿಬರುತ್ತಿವೆ.

PREV
18
ಈ ಬಾರಿ ಲೆಕ್ಕವೇ ಬೇರೆ

Bigg Boss ಇಷ್ಟು ವರ್ಷಕ್ಕೆ ಬೇರೆ ಈ ಬಾರಿಯ ಲೆಕ್ಕವೇ ಬೇರೆ ಎಂದಿದ್ದರು ಸುದೀಪ್​. ಅದರಂತೆಯೇ ಈ ಬಾರಿ ವಿಭಿನ್ನ ರೀತಿಯಲ್ಲಿ ಷೋ ನಡೆಯುತ್ತಿದೆ. ಸಾಕಷ್ಟು ಸರ್‌ಪ್ರೈಸ್‌ ಕೂಡ ಇವೆ. ಟ್ವಿಸ್ಟ್​ ಮೇಲೆ ಟ್ವಿಸ್ಟ್ ಕೊಟ್ಟು ಷೋ ನಡೆಸಲಾಗುತ್ತಿದೆ. ಷೋ ಶುರುವಾಗಿ ಮೂರೇ ವಾರಕ್ಕೆ ಮಿನಿ ಫಿನಾಲೆ ನಡೀತಿದೆ. ಕೆಲ ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಿ ಮತ್ತಷ್ಟು ಮಂದಿಯನ್ನು ಮನೆ ಒಳಗೆ ಕಳಿಸಲಾಗುತ್ತಿದೆ.

28
ಎಲಿಮಿನೇಷನ್​

ಬಿಗ್‌ ಬಾಸ್‌ ಮನೆಯಲ್ಲಿ ಈಗಾಗಲೇ ಮೊದಲ ವಾರ ಆರ್‌ಜೆ ಅಮಿತ್‌, ಕರಿಬಸಪ್ಪ ಅವರು ಎಲಿಮಿನೇಟ್‌ ಆಗಿದ್ದರು. ಎರಡನೇ ವಾರ ಯಾರೂ ಕೂಡ ಎಲಿಮಿನೇಟ್‌ ಆಗಿರಲಿಲ್ಲ. ಈಗ ಮೂರನೇ ವಾರಕ್ಕೂ ಮೊದಲು ಒಂದು ಎಲಿಮಿನೇಟ್‌ ಆಗಿತ್ತು. ಮಿಡ್‌ ವೀಕ್‌ ಎಲಿಮಿನೇಶನ್‌ ನಡೆದಿದ್ದು, ಸತೀಶ್‌ ಕ್ಯಾಡಬಮ್ಸ್‌ ಅವರು ಎಲಿಮಿನೇಟ್‌ ಆಗಿದ್ದರು. ರಾತ್ರೋ ರಾತ್ರಿ ಎಲಿಮಿನೇಶನ್‌ ಆಗಿರೋದು ಅನೇಕರಿಗೆ ಶಾಕ್‌ ನೀಡಿತ್ತು. ನಾಯಿಗಳ ವ್ಯಾಪಾರ ಮಾಡಿ ಸತೀಶ್‌ ಅವರು ಫೇಮಸ್‌ ಆಗಿದ್ದರು.

38
19 ಸ್ಪರ್ಧಿಗಳು

ಅಂದಹಾಗೆ ಮೂರನೇ ವಾರ ಮಂಜುಭಾಷಿಣಿ, ಅಶ್ವಿನಿ ಎಸ್‌ ಎಸ್‌ ಅವರು ಕೂಡ ಎಲಿಮಿನೇಟ್‌ ಆಗಿದ್ದಾರೆ. ಮಾಸ್‌ ಎಲಿಮಿನೇಶನ್‌ ಇರಲಿದೆ ಎಂದು ಮೊದಲೇ ಕಿಚ್ಚ ಸುದೀಪ್‌ ಸುಳಿವು ನೀಡಿದ್ದರು. ಅದರಂತೆ ಆಗಿದೆ. ಅಂದಹಾಗೆ ಈ ಸಲದ ಸೀಸನ್​ನಲ್ಲಿ 19 ಮಂದಿ ಸ್ಪರ್ಧಿಗಳು ಹೋಗಿದ್ದರು. ಇದಾಗಲೇ ಐವರು ಎಲಿಮಿನೇಟ್ ಆಗಿ ಹೊರ ಬಂದಂತೆ ಆಗಿದೆ. ಇನ್ನು 14 ಜನ ಮಾತ್ರ ಇದ್ದಾರೆ.

48
ವೈಲ್ಡ್‌ ಕಾರ್ಡ್‌ ಎಂಟ್ರಿ ಯಾರು?

ಅಂದಹಾಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಕಾಂತಾರ ಚಾಪ್ಟರ್‌ 1, ಕ್ರಾಂತಿ, ಕಾಟೇರ ಸಿನಿಮಾ ನಟ ರಾಘವೇಂದ್ರ ಎಸ್‌ ಹೊಂಡದಕೇರಿ ಅವರು ಬಿಗ್‌ ಬಾಸ್‌ ಮನೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗ್ತಿದೆ. ಕೇವಲ ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ಚರ್ಚೆ ಆಗ್ತಿದೆ. ಇಂದಿನ ಎಪಿಸೋಡ್‌ನಲ್ಲಿ ಸತ್ಯಾಸತ್ಯತೆ ಗೊತ್ತಾಗಲಿದೆ.

58
ಗುಸುಗುಸು ಶುರು

ಇದರ ನಡುವೆಯೇ ಇದೀಗ ಪ್ರೊಮೋ ಒಂದನ್ನು ರಿಲೀಸ್​ ಮಾಡಲಾಗಿದೆ. ಇದರಲ್ಲಿ ಸಾಕಷ್ಟು ಟ್ವಿಸ್ಟ್​ ಕೊಡಲಾಗಿದೆ. ಇವರನ್ನು ನೋಡಿದರೆ ವೈಲ್ಡ್​ ಕಾರ್ಡ್​ ಎಂಟ್ರಿ ಇವರೇನಾ, ಅವರೇನಾ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಯಾರ ಮುಖವನ್ನೂ ತೋರಿಸದೇ ಸೀಕ್ರೇಟ್​ ಇಡಲಾಗಿದೆ. 

68
ಶ್ವೇತಾ ಪ್ರಸಾದ್ ಹೋಗ್ತಾರಾ?

ಕಿರುತೆರೆ ನಟಿ ಶ್ವೇತಾ ಪ್ರಸಾದ್ ಹೆಸರು ಕೇಳಿ ಬರುತ್ತಿದೆ. ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಇವರ ಹೆಸರೇ ಇದೆ! ಆದರೆ ನಿಜವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

78
ರಿಷಾ ಗೌಡ ಹೆಸರೂ ಮುನ್ನಲೆಗೆ

ಮೈಸೂರು ಮೂಲಕ ರಿಷಾ ಗೌಡ ಕೂಡ ಬಿಗ್‌ಬಾಸ್ ಮನೆಗೆ ಹೋಗ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಈ ಹಿಂದೆ ಕೆಲ ಶೋಗಳಲ್ಲಿ ಆಕೆ ಭಾಗಿ ಆಗಿದ್ದರು ಎನ್ನಲಾಗ್ತಿದೆ.

88
ಕಾಂತಾರಾ ರಾಘವೇಂದ್ರ ಹೆಸರು

'ಕ್ವಾಟ್ಲೆ ಕಿಚನ್' ಷೋ ವಿನ್ನರ್ ನಟ, ಜಿಮ್ ಕೋಚ್ ರಾಘವೇಂದ್ರ ಹೆಸರೂ ಕೇಳಿಬರ್ತಿದೆ. 'ಕಾಂತಾರ-ಚಾಪ್ಟರ್​ 1' ಚಿತ್ರದಲ್ಲಿ ಕೂಡ ಅವರು ನಟಿಸಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ಎದುರು 'ವೃಷಭ' ಚಿತ್ರದಲ್ಲಿ ಸಹ ಬಣ್ಣ ಹಚ್ಚಿದ್ದಾರೆ. ಮುಂದಿನ ತಿಂಗಳು ಆ ಸಿನಿಮಾ ತೆರೆಗೆ ಬರ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories