Vaishnavi Gowda ಮದ್ವೆ ನಂತ್ರ ಮೊದಲ ಬಾರಿ ಕಾಣಿಸಿಕೊಂಡ ನಟಿ: ಮುದ್ದಾಗಿ ಕಂಡ್ರೂ ಭುಗಿಲೆದ್ದ ಅಸಮಾಧಾನ!

Published : Jul 31, 2025, 01:33 PM ISTUpdated : Jul 31, 2025, 03:17 PM IST

ನಟಿ ವೈಷ್ಣವಿ ಗೌಡ ಅವರು ಮದುವೆಯಾದ ಮೇಲೆ ಇದೇ ಮೊದಲ ಬಾರಿಗೆ ಕಾರ್ಯಕ್ರಮವೊಂದರಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆದರೂ ಅಭಿಮಾನಿಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇದಕ್ಕೆ ಕಾರಣವೇನು ನೋಡಿ... 

PREV
18
ಮದುವೆಯ ಬಳಿಕ ಲೈಫ್​ ಎಂಜಾಯ್​

ಸೀತಾರಾಮ ಸೀತಾ ಉರ್ಫ್‌ ವೈಷ್ಣವಿ ಗೌಡ ಅವರು ಈಗ ಮದ್ವೆ ಲೈಫ್​ ಅನ್ನು ಎಂಜಾಯ್​ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ಅವರು ಛತ್ತೀಸಗಢದ ಅನುಕೂಲ್‌ ಮಿಶ್ರಾ ಎನ್ನುವವರ ಜೊತೆ ಮದುವೆಯಾಗಿರುವ ನಟಿ, ಈಗ ಹೊಸದಾಗಿ ಮದ್ವೆಯಾಗಿರುವ ಕಾರಣ ಬಣ್ಣದ ಲೋಕದಿಂದ ಸ್ವಲ್ಪ ವಿರಾಮ ತೆಗೆದುಕೊಂಡರೂ ರೀಲ್ಸ್​ಗೇನೂ ಕಡಿಮೆ ಇಲ್ಲ. ಆಗೀಗ ಸೋಷಿಯಲ್​ ಮೀಡಿಯಾದಲ್ಲಿ ನಟಿ ಕಾಣಿಸಿಕೊಂಡು ರೀಲ್ಸ್​ ಮಾಡುತ್ತಿರುತ್ತಾರೆ. ಇದೀಗ ಮಳಿಗೆಯೊಂದರ ಉದ್ಘಾಟನೆ ಕಾರ್ಯಕ್ರಮದಲ್ಲಿ ವೈಷ್ಣವಿ ಅವರು ಇನ್ನೋರ್ವ ನಟಿ ಸೋನಲ್​ ಮೊಂಥೆರೋ ಜೊತೆ ಕಾಣಿಸಿಕೊಂಡಿದ್ದಾರೆ.

28
ಮದುವೆಯ ಬಳಿಕ ಲೈಫ್​ ಎಂಜಾಯ್​

ಸೀತಾರಾಮ ಸೀತಾ ಉರ್ಫ್‌ ವೈಷ್ಣವಿ ಗೌಡ ಅವರು ಈಗ ಮದ್ವೆ ಲೈಫ್​ ಅನ್ನು ಎಂಜಾಯ್​ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ಅವರು ಛತ್ತೀಸಗಢದ ಅನುಕೂಲ್‌ ಮಿಶ್ರಾ ಎನ್ನುವವರ ಜೊತೆ ಮದುವೆಯಾಗಿರುವ ನಟಿ, ಈಗ ಹೊಸದಾಗಿ ಮದ್ವೆಯಾಗಿರುವ ಕಾರಣ ಬಣ್ಣದ ಲೋಕದಿಂದ ಸ್ವಲ್ಪ ವಿರಾಮ ತೆಗೆದುಕೊಂಡರೂ ರೀಲ್ಸ್​ಗೇನೂ ಕಡಿಮೆ ಇಲ್ಲ. ಆಗೀಗ ಸೋಷಿಯಲ್​ ಮೀಡಿಯಾದಲ್ಲಿ ನಟಿ ಕಾಣಿಸಿಕೊಂಡು ರೀಲ್ಸ್​ ಮಾಡುತ್ತಿರುತ್ತಾರೆ. ಇದೀಗ ಮಳಿಗೆಯೊಂದರ ಉದ್ಘಾಟನೆ ಕಾರ್ಯಕ್ರಮದಲ್ಲಿ ವೈಷ್ಣವಿ ಅವರು ಇನ್ನೋರ್ವ ನಟಿ ಸೋನಲ್​ ಮೊಂಥೆರೋ ಜೊತೆ ಕಾಣಿಸಿಕೊಂಡಿದ್ದಾರೆ.

38
ತಾಳಿ ಹಾಕುವ ಪದ್ಧತಿ ಇಲ್ಲ!

ಇದಾಗಲೇ ವೈಷ್ಣವಿ ಗೌಡ ಅವರು ನೇರಪ್ರಸಾರದಲ್ಲಿ ಬಂದು ಮಂಗಳಸೂತ್ರದ ವಿಷಯಕ್ಕೆ ಸ್ಪಷ್ಟನೆ ಕೊಟ್ಟಿದ್ದರು. “ನಮ್ಮ ಸಂಪ್ರದಾಯಕ್ಕೆ ಗೌರವ ಕೊಡೋದಿಲ್ವಾ? ತಾಳಿ ಬೇಡ ಅಂದ್ರೆ ಯಾಕೆ ಮದುವೆ ಆದ್ರಿ ಅಂತ ಕೆಲವರು ಕೇಳಿದ್ದಾರೆ. ಹುಡುಗನ ಮನೆಯಲ್ಲಿ ಯಾವ ಪದ್ಧತಿ ಇದೆಯೋ ಅದನ್ನೇ ಹುಡುಗಿ ಕೂಡ ಅನುಸರಿಸುತ್ತಾಳೆ. ಅದೇ ಪದ್ಧತಿ ರೂಢಿಯಲ್ಲಿದೆ. ಹೀಗಾಗಿ ಹುಡುಗನ ಪದ್ಧತಿಯಂತೆ ನಮ್ಮ ಮದುವೆ ಆಯ್ತು. ತಾಳಿ ಹಾಕಿಲ್ಲ ಅಂತ ಕೆಲವರು ಕೇಳಿದ್ದೀರಾ. ನನ್ನ ಅತ್ತೆ ಕೂಡ ಇದುವರೆಗೂ ತಾಳಿ ಹಾಕಿಲ್ಲ. ತಾಳಿ ಹಾಕುವ ಪದ್ಧತಿ ನಮ್ಮಲ್ಲಿ ಇಲ್ಲ” ಎಂದು ವೈಷ್ಣವಿ ಗೌಡ ಹೇಳಿದ್ದರು.

48
ತಾಳಿ ಹಾಕೋ ಪದ್ಧತಿ ಇಲ್ಲ

“ತಾಳಿ ಹಾಕೋದು ಅವರ ಪದ್ಧತಿಯಲ್ಲಿ ಇಲ್ಲ, ಅದು ನಮಗೆ ಮುಖ್ಯ ಅಲ್ಲ ಎಂದರು. ಮೂಗು ಚುಚ್ಚಿಸಿರಬೇಕು, ಕೈಯಲ್ಲಿ ಗಾಜಿನ ಬಳೆ ಇರಬೇಕು, ಕೈಯಲ್ಲಿ ಒಂದು ದಾರ ಇರಬೇಕು, ಕಾಲುಂಗುರ ಹಾಕಿರಬೇಕು. ನಮ್ಮ ಸಂಪ್ರದಾಯ, ಸಂಸ್ಕೃತಿ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಮನೆಯಲ್ಲಿ ಈ ಪದ್ಧತಿ ಇಲ್ಲ ಎಂದು ಹಾಕುತ್ತಿಲ್ಲ ಅಷ್ಟೇ” ಎಂದು ವೈಷ್ಣವಿ ಗೌಡ ಹೇಳಿದ್ದರು.

58
ಮೆಟ್ರಿಮೋನಿಯಲ್ಲಿ ಪರಿಚಯ

ನಟಿ ವೈಷ್ಣವಿ ಗೌಡ ಅವರ ಮದ್ವೆ ಕುರಿತು ಹೇಳುವುದಾದರೆ, ಮೆಟ್ರಿಮೋನಿಯಲ್ಲಿ ವೈಷ್ಣವಿ ಗೌಡ ಹಾಗೂ ಅನುಕೂಲ್‌ ಮಿಶ್ರಾ ಪರಿಚಯ ಆಗಿದೆ. ಒಂದು ವರ್ಷದ ಹಿಂದೆಯೇ ಇವರ ಮದುವೆ ಫಿಕ್ಸ್‌ ಆಗಿತ್ತು. ಈ ವರ್ಷ ಈ ಜೋಡಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು, ಮದುವೆ ಆಗಿದ್ದಾರೆ. ಅನುಕೂಲ್‌ ಮಿಶ್ರಾ ಅವರು ಇಂಡಿಯನ್‌ ಆರ್ಮಿಯಲ್ಲಿ ಲೆಫ್ಟಿನೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ನಟಿಯಾದರೆ, ಅನುಕೂಲ್‌ ಅವರು ಆರ್ಮಿಯಲ್ಲಿದ್ದಾರೆ.

68
ಪತಿಯ ಪರಿಚಯವಾಗಿದ್ದು ಹೇಗೆ?

ಅನುಕೂಲ್‌ ಮಿಶ್ರಾ ಅವರು ಉತ್ತರಾಖಂಡದವರು. ಹೀಗಾಗಿ ಮಧ್ಯರಾತ್ರಿ ಈ ಜೋಡಿ ಮದುವೆ ಆಗಿತ್ತು. ಈ ಮದುವೆಯಲ್ಲಿ ಸೀತಾರಾಮ ಧಾರಾವಾಹಿ, ಅಗ್ನಿಸಾಕ್ಷಿ ಧಾರಾವಾಹಿ ಕಲಾವಿದರು ಸೇರಿದಂತೆ ಸಾಕಷ್ಟು ಕಿರುತೆರೆಯ ಗಣ್ಯರು ಆಗಮಿಸಿದ್ದರು. ಒಟ್ಟಿನಲ್ಲಿ ಅದ್ದೂರಿಯಾಗಿ ವೈಷ್ಣವಿ ಮದುವೆಯಾಗಿದ್ದರು.

78
ನಟಿಸೋ ಬಗ್ಗೆ ಹೇಳಿದ್ದೇನು ನಟಿ?

ಅನುಕೂಲ್‌ ಮಿಶ್ರಾ ಅವರು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈಷ್ಣವಿ ಗೌಡ ಕೂಡ ಇಲ್ಲಿಯೇ ಇರಲಿದ್ದಾರೆ. ಅಂದಹಾಗೆ ಮದುವೆ ಬಳಿಕವೂ ವೈಷ್ಣವಿ ಗೌಡ ಅವರು ನಟಿಸಲಿದ್ದಾರಂತೆ. ಅವರಂತೂ ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ.

88
ಸಿಂದೂರ ಆದ್ರೂ ಬೇಡ್ವಾ?

ನಟಿ ಇಷ್ಟೆಲ್ಲಾ ಸ್ಪಷ್ಟನೆ ಕೊಟ್ಟಿದ್ದರೂ ಪತಿಯ ಮನೆಯ ಸಂಪ್ರದಾಯವನ್ನಾದರೂ ಕೊನೆಯ ಪಕ್ಷ ಪಾಲಿಸಬೇಕಿತ್ತಲ್ವಾ ಎನ್ನುವುದು ನೆಟ್ಟಿಗರ ಪ್ರಶ್ನೆ. ಅದೂ ಹೋಗಲಿ ಎಂದರೆ, ಒಂದು ಕುಂಕುಮನೋ, ಸಿಂದೂರನೋ ಹಚ್ಚಿಕೊಳ್ಳಲು ಏನಾಗಿತ್ತು ಎನ್ನುವುದು ಅವರ ಮಾತು!

Read more Photos on
click me!

Recommended Stories