ಬ್ಯಾಕ್ ಟು ಬ್ಯಾಕ್ ತಮನ್ನಾ ಹಾಟ್​ ಅವತಾರ ನೋಡಿ ಹಾರಿ ಹೋಯ್ತು ಪಡ್ಡೆ ಹುಡುಗರ ನಿದ್ದೆ

Published : Jan 31, 2026, 05:54 PM IST

Tamannaah latest photo: ಮುಖದಲ್ಲಿ ನೈಸರ್ಗಿಕ ಹೊಳಪು, ಫ್ರೀ ಹೇರ್ ಸ್ಟೈಲ್ ನೋಡಿ ಅಭಿಮಾನಿಗಳು ಫುಲ್ ಖುಷ್ ಅಗಿದ್ದಾರೆ. ಆದರೆ ಈ ಫೋಟೋಗಳು ಪ್ರೊಫೆಶನಲ್ ಫೋಟೋಶೂಟ್ ಅಥವಾ ರಜೆಯ ಸಮಯದಲ್ಲಿ ತೆಗೆದುಕೊಳ್ಳಲಾಗಿದೆಯೇ?, ಅಥವಾ….

PREV
17
ಅಭಿಮಾನಿಗಳನ್ನು ಬೆರಗುಗೊಳಿಸುವ ತಮನ್ನಾ

ತಮನ್ನಾ ಭಾಟಿಯಾ ಅವರ ಸ್ಟೈಲ್ ಮತ್ತು ಕಾನ್ಫಿಡೆನ್ಸ್ ಯಾವಾಗಲೂ ವಿಶಿಷ್ಟವಾಗಿರುತ್ತದೆ. ಕ್ಲಾಸಿಕ್ ಮತ್ತು ಬೋಲ್ಡ್ ವಿಷಯ ಬಂದಾಗ ತಮನ್ನಾ ಅವರಿಗೆ ಸರಿಸಾಟಿಯಿಲ್ಲ. ರೆಡ್ ಕಾರ್ಪೆಟ್ ಮೇಲೆ ಇರಲಿ ಅಥವಾ ಹಾಲಿಡೇಸ್ ಇರಲಿ, ಚಿತ್ರದ ಪ್ರಚಾರವಿರಲಿ ತಮನ್ನಾ ಯಾವಾಗಲೂ ತಮ್ಮ ಅಭಿಮಾನಿಗಳನ್ನು ಬೆರಗುಗೊಳಿಸುತ್ತಾರೆ.

27
ಸಾಮಾಜಿಕ ಮಾಧ್ಯಮದಲ್ಲಿ ವೈರಲ್

ಇತ್ತೀಚೆಗೆ ತಮನ್ನಾ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇವುಗಳಲ್ಲಿ ಅವರು ಸುಂದರವಾದ ಕೆಂಪು ಈಜುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಈಜುಡುಗೆ ಸಖತ್ ಸ್ಟೈಲಿಶ್ ಆಗಿದ್ದು, ಟಸೆಲ್ ವಿನ್ಯಾಸ ಮತ್ತು ಬದಿಯಲ್ಲಿ ಡೀಪ್ ಕಟ್ ಹೊಂದಿದೆ.

37
ಅಭಿಮಾನಿಗಳು ಫುಲ್ ಖುಷ್

ಮುಖದಲ್ಲಿ ನೈಸರ್ಗಿಕ ಹೊಳಪು, ಫ್ರೀ ಹೇರ್ ಸ್ಟೈಲ್ ನೋಡಿ ಅಭಿಮಾನಿಗಳು ಫುಲ್ ಖುಷ್ ಅಗಿದ್ದಾರೆ. ಆದರೆ ಈ ಫೋಟೋಗಳು ಪ್ರೊಫೆಶನಲ್ ಫೋಟೋಶೂಟ್ ಅಥವಾ ರಜೆಯ ಸಮಯದಲ್ಲಿ ತೆಗೆದುಕೊಳ್ಳಲಾಗಿದೆಯೇ?, ಅಥವಾ ಎಐ ಫೋಟೋನಾ ಎಂಬುದು ಸ್ಪಷ್ಟವಾಗಿಲ್ಲ. ಆದರೇನಂತೆ ಅಭಿಮಾನಿಗಳು ಈ ಲುಕ್ ಅನ್ನು ಇಷ್ಟಪಟ್ಟು ಪ್ರಶಂಸಿಸುತ್ತಿದ್ದಾರೆ.

47
ಕಪ್ಪು ಬಣ್ಣದ ಡ್ರೆಸ್‌

ಒಂದು ವಾರದ ಹಿಂದೆಯಷ್ಟೇ ತಮನ್ನಾ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ಸಿಂಪಲ್ ಕೇಶವಿನ್ಯಾಸ, ಮೇಕಪ್, ಜ್ಯುವೆಲರಿ ತಮನ್ನಾ ಡಬ್ಬಲ್ ಆಕರ್ಷಕವಾಗಿ ಕಾಣುವಂತೆ ಮಾಡಿತು. ಈ ಲುಕ್‌ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದರು.

57
ಕಾತರದಿಂದ ಕಾಯುತ್ತಿದ್ದಾರೆ ಅಭಿಮಾನಿಗಳು

ತಮನ್ನಾ ಅವರ ಮುಂಬರುವ ಚಿತ್ರಗಳ ಮಾತನಾಡುವುದಾದರೆ ಹೊಸ ಚಿತ್ರ "ಪುರುಷ"ದಲ್ಲಿ ಅವರು ನಟ ವಿಶಾಲ್ ಜೊತೆ ನಟಿಸಲಿದ್ದಾರೆ. ಚಿತ್ರದ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಿದರು. "ಆಕ್ಷನ್" ನಂತರ ತಮನ್ನಾ ಮತ್ತು ವಿಶಾಲ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟ್ ರಾಘವನ್ ಚಿತ್ರದ ಸಂಭಾಷಣೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಅಥವಾ ಇತರ ವಿವರಗಳನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ, ಆದರೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

67
ಮೇ 15, 2026 ರಂದು ಬಿಡುಗಡೆ

ತಮನ್ನಾ ಪ್ರಸ್ತುತ "ಒನ್: ಫೋರ್ಸ್ ಆಫ್ ದಿ ಫಾರೆಸ್ಟ್" ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ. ಅರುಣಾಭ್ ಕುಮಾರ್ ಮತ್ತು ದೀಪಕ್ ಮಿಶ್ರಾ ನಿರ್ದೇಶನದ ಇದು ಥ್ರಿಲ್ಲರ್ ಚಿತ್ರವಾಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಮನ್ನಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಮೇ 15, 2026 ರಂದು ಬಿಡುಗಡೆಯಾಗಲಿದೆ.

77
ಹೊಸ ಲುಕ್ ಇಷ್ಟಪಟ್ಟ ಫ್ಯಾನ್ಸ್

ತಮನ್ನಾ ತಮ್ಮ ನಟನೆಯಿಂದ ಮಾತ್ರವಲ್ಲದೆ ಬೋಲ್ಡ್ ಸ್ಟೈಲ್ ಮತ್ತು ವ್ಯಕ್ತಿತ್ವದಿಂದಲೂ ನಿರಂತರವಾಗಿ ಹೃದಯಗಳನ್ನು ಗೆಲ್ಲುತ್ತಿದ್ದಾರೆ. ಅಭಿಮಾನಿಗಳು ಅವರ ಹೊಸ ಲುಕ್ ಮತ್ತು ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories