ಕೆಲ ಸಿನಿಮಾಗಳು ಬಾಕ್ಸ್‌ಆಫಿಸ್‌ನಲ್ಲಿ ಭಾರಿ ಯಶಸ್ಸು ಗಳಿಸುತ್ತವೆ. ಆದರೆ ಈ ಚಿತ್ರಗಳು ಸಮಾಜಕ್ಕೆ ವಂಚನೆ, ಹಿಂಸೆ, ಮತ್ತು ಅಕ್ರಮದಂತಹ ಅಪಾಯಕಾರಿ ಸಂದೇಶಗಳನ್ನು ಸಾರುತ್ತವೆ. ಈ ಲೇಖನವು ಅಂತಹ ಕೆಲವು ಜನಪ್ರಿಯ ಚಿತ್ರಗಳನ್ನು ಮತ್ತು ಅವುಗಳ ವಿವಾದಾತ್ಮಕ ಕಥಾವಸ್ತುವನ್ನು ಪರಿಶೀಲಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡುವ ಕಾಲ ಮುಗಿದು ಹೋಗಿದೆ ಎಂಬ ಮಾತುಗಳು ಕೇಳಿ ಬರುತ್ತವೆ. ಆದ್ರೆ ಅಂತಹ ಸಿನಿಮಾಗಳನ್ನು ಮಾಡಿದ್ರೆ ಯಾರು ನೋಡ್ತಾರೆ ಎಂಬುವುದು ಸಿನಿಅಂಗಳದ ಮಾತು. ಕೆಲವೊಂದು ಸಿನಿಮಾಗಳು ದೇಶಕ್ಕೆ ಅಥವಾ ಕೆಟ್ಟ ಸಂದೇಶ ಹೊತ್ತು ಬಂದ ಸೂಪರ್ ಹಿಟ್ ಆಗಿವೆ. ಜನರಿಂದ ಮೆಚ್ಚುಗೆ ಪಡೆದು ಬಾಕ್ಸ್‌ಆಫಿಸ್‌ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ಮಾಡಿವೆ. ಸೂಕ್ಷ್ಮವಾಗಿ ಗಮನಿಸಿದ್ರೆ ಈ ಸಂದೇಶಗಳು ಮಾರಕ ಅನ್ನೋದು ಗೊತ್ತಾಗುತ್ತದೆ.
26
1.ಲಕ್ಕಿ ಭಾಸ್ಕರ್ Lucky Bhaskar
ದುಲ್ಕರ್ ಸಲ್ಮಾನ್ ನಟನೆಯ ಲಕ್ಕಿ ಭಾಸ್ಕರ್ ಸಿನಿಮಾ ದೊಡ್ಡಮಟ್ಟದ ಹಿಟ್ ಆಗಿತ್ತು. ಬ್ಯಾಂಕ್ ಅಧಿಕಾರಿಯೋರ್ವ ಹೇಗೆ ಮೋಸ ಮಾಡಿ ಕೋಟ್ಯಂತರ ರೂಪಾಯಿ ಹಣ ದೋಚಿಕೊಂಡು ಹೇಗೆ ವಿದೇಶದಲ್ಲಿ ಸೆಟೆಲ್ ಆಗುತ್ತಾನೆ ಎಂಬುವುದು ಸಿನಿಮಾದ ಒನ್ ಲೈನ್ ಕಥೆ. ನಿಯಮಗಳ ಉಲ್ಲಂಘನೆ ಮಾಡಿ ಹಣ ದೋಚಿ ಸರ್ಕಾರಕ್ಕೆ ಮೋಸ ಮಾಡುವ ಅಧಿಕಾರಿಯೇ ಇಲ್ಲಿ ಹೀರೋ
ಬಿಡುಗಡೆ: 2024
ಬಜೆಟ್: 56 ಕೋಟಿ ರೂಪಾಯಿ
ಬಾಕ್ಸ್ ಆಫಿಸ್ ಕಲೆಕ್ಷನ್: 111 ಕೋಟಿ ರೂಪಾಯಿ
36
2.ಟೂರಿಸ್ಟ್ ಫ್ಯಾಮಿಲಿ Tourist Family
ಎಂ ಸಸಿಕುಮಾರ್ ಮತ್ತು ಸಿಮ್ರನ್ ಅಭಿನಯದ ತಮಿಳು ಸಿನಿಮಾ, OTTಯಲ್ಲಿ ಬಿಡುಗಡೆಯಾದ ಬಳಿಕ ಕಥೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದರು. ಶ್ರೀಲಂಕಾದ ವ್ಯಕ್ತಿ ತನ್ನ ಇಡೀ ಕುಟುಂಬದೊಂದಿಗೆ ಅಕ್ರಮವಾಗಿ ಭಾರತಕ್ಕೆ ಬರುತ್ತಾನೆ. ನಕಲಿ ದಾಖಲೆಗಳನ್ನು ನೀಡುವ ಮೂಲಕ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾರೆ. ಹೀರೋ ಒಳ್ಳೆಯವನು ಎಂಬ ಕಾರಣಕ್ಕೆ ಸುತ್ತಲಿನ ಜನತೆಯೂ ಆತನಿಗೆ ಸಾಥ್ ನೀಡ್ತಾರೆ. ನುಸುಳುಕೋರರು ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಸಿನಿಮಾದಲ್ಲಿ ಮರೆ ಮಾಡಲಾಗಿದೆ.
ಇದು ತಮಿಳಿನ ಸಿನಿಮಾ ಆಗಿದ್ದು, ಮೃಗರೂಪ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯೇ ಇಲ್ಲಿ ಹೀರೋ ಆಗ್ತಾನೆ. ಕಲನಿತಿ ಮರನ್, ಲೋಕೇಶ್ ಕನಗರಾಜ, ವಮಿಕಾ ಗಬ್ಬಿ, ಸಂಜನಾ ಕೃಷ್ಣಮೂರ್ತಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಪೊಲೀಸರನ್ನು ಅಡ್ಡಗಟ್ಟಿ ಅವರಲ್ಲಿ ಶಸ್ತ್ರಾಸ್ತ್ರಗಳನ್ನು ಕದಿಯುತ್ತಾರೆ. ನಂತರ ಇಲ್ಲಿಯ ಹೀರೋ, ತನಗೆ ಹೊಳೆದಂತೆ ಎಲ್ಲರನ್ನು ಕೊಲ್ಲುತ್ತಾನೆ. ಇಷ್ಟೆಲ್ಲಾ ಮಾಡಿದ್ರೂ ಹೀರೋ ಸುಲಭವಾಗಿ ಎಸ್ಕೇಪ್ ಆಗುತ್ತಾನೆ.
ಬಿಡುಗಡೆ: 2026
ಬಜೆಟ್: 25 ಕೋಟಿ ರೂಪಾಯಿ
ಬಾಕ್ಸ್ ಆಫಿಸ್ ಕಲೆಕ್ಷನ್: 100 ಕೋಟಿ ರೂಪಾಯಿ
56
4.ಎನಿಮಲ್ Animal
ರಣ್‌ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಹಿಂದಿಯ ಹಿಂಸಾತ್ಮಕ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಹಲವು ದಾಖಲೆಗಳು ಬರೆಯಿತು. ಇಲ್ಲಿ ಹೀರೋ ಹುಚ್ಚನಂತೆ ಎಲ್ಲರನ್ನೂ ಕೊಲ್ಲುತ್ತಾನೆ. ಈ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನೆಗೆಟಿವ್ ರಿವ್ಯೂವ್ ಸಹ ಕೇಳಿ ಬಂದಿವೆ.
ಬಿಡುಗಡೆ: 2023
ಬಜೆಟ್: 100 ಕೋಟಿ ರೂಪಾಯಿ
ಬಾಕ್ಸ್ ಆಫಿಸ್ ಕಲೆಕ್ಷನ್: 917 ಕೋಟಿ ರೂಪಾಯಿ
66
5.ಪುಷ್ಪಾ Pushpa
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪಾ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಅನ್ನಿಸಿಕೊಂಡಿದೆ. ಚಿತ್ರದ ಒಟ್ಟಾರೆ ಕಥೆ ಶ್ರೀಗಂಧ ಮರಗಳ್ಳತನ ಸುತ್ತ ಸಾಗುತ್ತದೆ. ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯುಗ ಧಗಾಕೋರನೇ ಇಲ್ಲಿ ನೋಡುಗರಿಗೆ ಹೀರೋ ಆಗಿ ಕಾಣಿಸಿಕೊಳ್ಳುತ್ತಾನೆ. ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಬಿಡುಗಡೆ: 2021
ಬಜೆಟ್: 200-250 ಕೋಟಿ ರೂಪಾಯಿ
ಬಾಕ್ಸ್ ಆಫಿಸ್ ಕಲೆಕ್ಷನ್: 300-350 ಕೋಟಿ ರೂಪಾಯಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.