ಬಿಗ್ ಬಾಸ್ ಕನ್ನಡ ಸೀಸನ್ 13ರ ಟಾಸ್ಕ್ ಒಂದರಲ್ಲಿ ಎರಡೂ ತಂಡಗಳು ಒಂದೂ ಅಂಕ ಗಳಿಸಲು ವಿಫಲವಾದವು. ಋಣಾತ್ಮಕ ಅಂಕ ಪಡೆದರೂ, -2 ಅಂಕ ಗಳಿಸಿದ ತಂಡ ವಿಜೇತರೆಂದು ಘೋಷಿಸಲಾಯಿತು. ಈ ತೀರ್ಪನ್ನು 'ಕುರುಡರ ಸಾಮ್ರಾಜ್ಯದಲ್ಲಿ ಒಕ್ಕಣ್ಣನೇ ರಾಜ' ಎಂಬಂತೆ ವಿಶ್ಲೇಷಿಸಲಾಗಿದ್ದು, ವೀಕ್ಷಕರಿಂದ ಟೀಕೆಗೆ ಗುರಿಯಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾಗಿ ಮೂರು ದಿನಗಳು ಮಾತ್ರ ಕಳೆದಿವೆ. ಆದರೆ, ಇಲ್ಲಿರುವ ಎಲ್ಲ ಸ್ಪರ್ಧಿಗಳ ನಡುವೆ ಒಂಚೂರು ಹೊಂದಾಣಿಕೆ ಆರಂಭವಾಗಿಲ್ಲ. ಇದೇ ಮೊದಲ ಬಾರಿಗೆ ಜನ ಸಾಮಾನ್ಯರಿಗೂ (Common People) ಅವಕಾಶ ಮಾಡಿಕೊಡಲಾಗಿದ್ದು, ನಾಲ್ವರು ಸಾಮಾನ್ಯ ಜನರೂ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಆದರೆ, ಇಲ್ಲಿ ನಡೆಸುತ್ತಿರುವ ಟಾಸ್ಕ್ ಹೇಗಿದೆ ಎಂದರೆ ಅಂಧರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ (ಕಣ್ಣು ಕಾಣಿಸದ ಕುರುಡರ ರಾಜ್ಯದಲ್ಲಿ ಒಂದು ಕಣ್ಣು ಕಾಣಿಸುವವನು ರಾಜ) ಎನ್ನುವಂತೆ ಒಂದೂ ಅಂಕವನ್ನು ಪಡೆಯದೇ ಋಣಾತ್ಮಕ-2 ಅಂಕ (ಮೈನಸ್ 2) ಗಳಿಸಿದವರನ್ನೇ ವಿಜೇತರು ಎಂದು ಘೋಷಣೆ ಮಾಡಲಾಗಿದೆ.
26
ನೆಗೆಟಿವ್ ಅಂಕದಲ್ಲಿ ಆಟ ಮುಕ್ತಾಯ
ಬಿಗ್ ಬಾಸ್ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಆಗಿದೆ. ಈ ಕಾರ್ಯಕ್ರಮವನ್ನು ಸುಮಾರು 7 ಕೋಟಿ ಜನರು ವೀಕ್ಷಣೆ ಮಾಡುತ್ತಾರೆ. ಇಷ್ಟೊಂದು ಜನರು ವೀಕ್ಷಣೆ ಮಾಡುವ ರಿಯಾಲಿಟಿ ಶೋದಲ್ಲಿ ಒಂದಷ್ಟು ಬಿಗಿಯಾದ ಮಾನದಂಡಗಳೇ ಇಲ್ಲವೆಂದರೆ ಹೇಗೆ ಎಂಬ ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿವೆ. ಸಣ್ಣ ವಿಚಾರಕ್ಕೆ ಕಿತ್ತಾಟ, ಜಗಳ, ಜೋರು ಧ್ವನಿಯಲ್ಲಿ ಮಾತನಾಡುವುದು, ಟಾಸ್ಕ್‌ಗಾಗಿ ಪೈಪೋಟಿ ಒಂದೆಡೆಯಾದರೆ, ಅಂಕ ಪಡೆಯಲು ಕೊಡಲಾದ ಟಾಸ್ಕ್ ಅನ್ನೇ ನೆಗೆಟಿವ್ ಅಂಕದಲ್ಲಿ ಮುಕ್ತಾಯಗೊಳಿಸಿ ವಿಜೇತರೆಂದು ಘೋಷಣೆ ಮಾಡಲಾಗಿರುವುದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ.
36
ಅದೇನು ಟಾಸ್ಕ್ ಅಂತೀರಾ.., ಬಿಗ್ ಬಾಸ್ ಸೀಸನ್‌ನ 3ನೇ ದಿನ ಎಲ್ಲ 16 ಸ್ಪರ್ಧಿಗಳನ್ನು ಎರಡು ತಂಡಗಳಾಗಿ ಮಾಡಿ ಟಾಸ್ಕ್ ಒಂದನ್ನು ಕೊಡಲಾಗುತ್ತದೆ. ಅದರಲ್ಲಿ ಪ್ರತಿ ತಂಡದಿಂದ ತಲಾ 4 ಜನರು ಟಾಸ್ಕ್ ಅನ್ನು ಆಟವಾಡಬೇಕು. ಬಿಗ್ ಬಾಸ್ ನೀಡಿದ 7 ಪ್ರಶ್ನೆಗಳನ್ನು ಉತ್ತರಿಸಿ, ಅದಕ್ಕೆ ತಕ್ಕಂತೆ ಎ,ಬಿ,ಸಿ,ಡಿ ಆಯ್ಕೆಗಳನ್ನು ಒಂದು ಹಲಗೆಯಲ್ಲಿರುವ ರಂಧ್ರಕ್ಕೆ ಬಿಲ್ಲೆಯನ್ನು ಎಸೆಯುವುದು ಟಾಸ್ಕ್ ಆಗಿರುತ್ತದೆ. ಇದರಲ್ಲಿ ಯಾರು ಹೆಚ್ಚು ಅಂಕ ಗಳಿಸುತ್ತಾರೋ ಅವರು ವಿಜೇತರು ಎಂದು ಘೋಷಣೆ ಮಾಡಬೇಕು.
ಆದರೆ, ಈ ಟಾಸ್ಕ್‌ನಲ್ಲಿ ಎರಡೂ ತಂಡಗಳಿಗೆ ಕೇಳಲಾದ 14 ಪ್ರಶ್ನೆಗಳಿಗೆ ಐದಾರು ಪ್ರಶ್ನೆಗಳಿಗೆ ಮಾತ್ರ ಸರಿಯಾದ ಉತ್ತರ ಸಿಗುತ್ತದೆ. ಆ ಉತ್ತರಗಳನ್ನು ಹೇಳಿದ ನಂತರ ಹಲೆಯ ಮೇಲೆ ನಿಂತಿರುವ ಸ್ಪರ್ಧಿ ತನ್ನ ಎದುರಿನ ಎ,ಬಿ,ಸಿ,ಡಿ ಆಯ್ಕೆಯ ರಂಧ್ರಕ್ಕೆ ಬಿಲ್ಲೆಯನ್ನು ಎಸೆಯಬೇಕು. ವಿಮಾನದಲ್ಲಿಯೇ ಇರುವ ಪ್ರಯಾಣಿಕ ತಂಡದವರು ಐದು ಬಿಲ್ಲೆ ರಂಧ್ರದೊಳಗೆ ಎಸೆದರೂ ಉತ್ತರ ತಪ್ಪಾಗಿದ್ದವು. ಮತ್ತೊಂದು ತಂಡವು ಉತ್ತರ ಸರಿಯಾಗಿದ್ದರೂ ರಂಧ್ರದೊಳಗೆ ಬಿಲ್ಲೆ ಎಸೆಯಲಾಗಲಿಲ್ಲ. ಇದರ ನಡುವೆ ಹಲಗೆಯನ್ನು ಎತ್ತಿ ಹಿಡಿಯಬೇಕಾದವರು ಹಾಗೂ ಅದರ ಮೇಲೆ ನಿಂತುಕೊಂಡವರ ತಪ್ಪಿನಿಂದ ಹಲಗೆ ಬಿದ್ದು ಋಣಾತ್ಮಕ ಅಂಕಗಳನ್ನು ಪಡೆಯುತ್ತಾರೆ. ಇಲ್ಲಿ ಎರಡೂ ತಂಡಕ್ಕೆ ಒಂದೇ ಒಂದು ಅಂಕವೂ ಸಿಗುವುದಿಲ್ಲ.
56
ಈ ಟಾಸ್ಕ್ ಮುಕ್ತಾಯಗೊಂಡ ನಂತರ ಬಿಗ್ ಬಾಸ್ ಮನೆಯೊಳಗಿರುವ ತಂಡಕ್ಕೆ ಋಣಾತ್ಮಕ ಎರಡು (-2) ಅಂಕ ಹಾಗೂ ವಿಮಾನದಲ್ಲಿರುವ ಪ್ರಯಾಣಿಕ ತಂಡಕ್ಕೆ ಋಣಾತ್ಮಕ ಮೂರು (-3) ಅಂಕ ಸಿಗುತ್ತದೆ. ಆದರೆ, ಯಾವುದೇ ಅಂಕಗಳನ್ನು ಪಡೆಯದ ಹಾಗೂ ಸೋತಿರುವ ಎರಡು ತಂಡಗಳ ಪೈಕಿ ಒಂದನ್ನು ವಿಜೇತ ಎಂದು ಘೋಷಣೆ ಮಾಡಲಾಗುತ್ತದೆ. ಇದಕ್ಕೆ ಬಿಗ್ ಬಾಸ್ ಕೂಡ ಶಭಾಶ್‌ಗಿರಿ ಕೊಟ್ಟು ಸಂಭ್ರಮಾಚರಣೆ ಮಾಡುವುದಕ್ಕೆ ಅನುಮತಿ ಕೊಡುತ್ತಾರೆ. 7 ಕೋಟಿ ಜನರು ನೋಡುವಂತಹ ಈರಿಯಾಲಿಟಿ ಶೋನಲ್ಲಿ ಒಂದೂ ಅಂಕ ಪಡೆಯದ ತಂಡಗಳನ್ನ ವಿಜೇತರೆಂದು ಘೋಷಣೆ ಮಾಡಿರುವುದನ್ನು ನೋಡಿ ಕ್ರೀಡಾಪಟುಗಳು ಬಿದ್ದು ಬಿದ್ದು ನಗಾಡಿದ್ದಾರೆ.
66
ವೀಕ್ಷಕರನ್ನು ಗಮನದಲ್ಲಿಟ್ಟು ಟಾಸ್ಕ್ ಕೊಡಿ
ಇನ್ನು ಸಾಮಾನ್ಯ ಹಳ್ಳಿಯ ಜನರು ಈ ಟಾಸ್ಕ್ ಅನ್ನು 'ಕುರುಡರ ಸಾಮ್ರಾಜ್ಯದಲ್ಲಿ ಒಕ್ಕಣ್ಣನೇ ರಾಜ' ಎಂದು ವಿಶ್ಲೇಷಣೆ ಮಾಡಿದ್ದಾರೆ. ಇಲ್ಲಿ ಎರಡೂ ತಂಡಗಳು ಸೋತರೂ ಆ ಟಾಸ್ಕ್ ಅನ್ನು ರದ್ದುಗೊಳಿಸದೇ ಒಂದು ತಂಡವನ್ನು ಅನಿವಾರ್ಯವಾಗಿ ವಿಜೇತರೆಂದು ಆಯ್ಕೆ ಮಾಡಲಾಗಿದೆ. ಇನ್ನುಳಿದ ಟಾಸ್ಕ್‌ಗಳನ್ನು ಆಡಿಸುವಾಗಲಾದರೂ ಸ್ವಲ್ಪ ಮುತುವರ್ಜಿ ವಹಿಸುವುದು ಆಯೋಜಕರು ರಿಯಾಲಿಟಿ ಶೋ ನೋಡುವ ವೀಕ್ಷಕರಿಗೆ ನೀಡುವ ಗೌರವವಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.