ಬಿಗ್‌ಬಾಸ್ ಕನ್ನಡ ಸೀಸನ್‌ 13ರ ಸ್ಪರ್ಧಿಗೆ ವೋಟ್ ಮಾಡುವಂತೆ ಲಾರ್ಡ್ ಪ್ರಥಮ್ ಮನವಿ!

Published : Sep 10, 2026, 11:07 AM IST

ಬಿಗ್‌ಬಾಸ್ ಕನ್ನಡ ಸೀಸನ್ 13 ರ ಸ್ಪರ್ಧಿ ಪರವಾಗಿ ನಟ ಪ್ರಥಮ್ ಮತಯಾಚನೆ ಮಾಡಿದ್ದಾರೆ. ಇದೀಗ ನಾಮಿನೇಟ್ ಆಗಿರುವ ಅವರನ್ನು ಕೈಬಿಡಬೇಡಿ ಎಂದು ಕನ್ನಡಿಗರಲ್ಲಿ ಒಳ್ಳೆ ಹುಡುಗ ಪ್ರಥಮ್ ಮನವಿ ಮಾಡಿದ್ದಾರೆ.

PREV
14
ವೋಟ್ ಮಾಡುವಂತೆ ಪ್ರಥಮ್ ಮನವಿ

ಕನ್ನಡ ಬಿಗ್‌ಬಾಸ್ ಸೀಸನ್ 13 ಆರಂಭವಾಗಿದ್ದು, ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಇದೀಗ ಬಿಗ್‌ಬಾಸ್ ಸೀಸನ್ 4ರ ವಿಜೇತ ನಟ ಪ್ರಥಮ್, ಈ ಬಾರಿಯ ಸ್ಪರ್ಧಿ ಪರವಾಗಿ ಮತಯಾಚನೆ ಮಾಡಿದ್ದಾರೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ 16 ಸ್ಪರ್ಧಿಗಳಿದ್ದು, ಗಗನ್ ಚಿನ್ನಪ್ಪ ಮತ್ತು ಜಗದೀಶ್ ಸೇಫ್ ಆಗಿದ್ದಾರೆ.

24
ಓಂ ಪ್ರಕಾಶ್ ರಾವ್

ಹಿರಿಯ ನಟ ಮತ್ತು ನಿರ್ದೇಶಕರಾಗಿರುವ ಓಂಪ್ರಕಾಶ್ ರಾವ್ ಎರಡನೇ ಬಾರಿ ಬಿಗ್‌ಬಾಸ್ ಆಟಕ್ಕೆ ಬಂದಿದ್ದಾರೆ. ಈ ಹಿಂದೆ ಸೀಸನ್ 4ರಲ್ಲಿದ್ದ ಓಂಪ್ರಕಾಶ್ ರಾವ್, ಅನಾರೋಗ್ಯ ಕಾರಣದಿಂದ ಅರ್ಧಕ್ಕೆ ಶೋನಿಂದ ಹೊರಗೆ ಬಂದಿದ್ದಾರೆ. ಇದೇ ಸೀಸನ್‌ನಲ್ಲಿಯೇ ಪ್ರಥಮ್ ಸಹ ಸ್ಪರ್ಧಿಯಾಗಿದ್ದು, ಟ್ರೋಫಿಯನ್ನು ಎತ್ತಿದ್ದರು. ಈಗ ಓಂಪ್ರಕಾಶ್ ರಾವ್ ಪರವಾಗಿ ಪ್ರಥಮ್ ಪೋಸ್ಟ್ ಮಾಡಿಕೊಂಡಿದ್ದಾರೆ.

34
ಕೈ ಬಿಡಬೇಡಿ: ಪ್ರಥಮ್ ಮನವಿ

ಇವರ ಪರವಾಗಿ ಯಾವ PR team ಕೆಲಸ ಮಾಡುತ್ತಿಲ್ಲ. ಕೈ ಹಿಡಿದು ಕಾಪಾಡೋದು ಕನ್ನಡಿಗರಿಗೆ ಬಿಟ್ಟಿದ್ದು. ನಿನ್ನೆ ಇವರದಲ್ಲದ ತಪ್ಪಿಗೆ nominate ಆಗಿದ್ದಾರೆ. ಇವರು ಯೋಗ್ಯರು ಅನ್ನಿಸಿದ್ರೆ ದಯವಿಟ್ಟು ಕೈಹಿಡಿರಿ. ನಾನು ಬಿಗ್‌ಗಾಸ್ ಗೆಲ್ಲೋದ್ರಲ್ಲೂ ದೊಡ್ಡ ಸಹಾಯ ಮಾಡಿದ್ದು ಇದೇ ಓಂ ಸರ್. ನಮ್‌ ಓಂ ಸರ್ ಕೈಬಿಡಬೇಡಿ ಎಂದು ಪ್ರಥಮ್ ಮನವಿ ಮಾಡಿಕೊಂಡಿದ್ದಾರೆ.

44
ಮಾಡಿದ್ದುಣ್ಣೋ ಮಾರಾಯ

ಬಿಗ್‌ಬಾಸ್ ನೀಡಿದ ಮಾಡಿದ್ದುಣ್ಣೋ ಮಾರಾಯ ಟಾಸ್ಕ್‌ನಲ್ಲಿ ಮನೆಯ ಸದಸ್ಯರು ಸೋತಾಗ ಓಂ ಪ್ರಕಾಶ್ ರಾವ್, ವಿಮಾನ ಪ್ರಯಾಣಕ್ಕೆ ಮರಳಿದ್ದಾರೆ. ಮನೆಯಲ್ಲಿದ್ದ ಸ್ಪರ್ಧಿಗಳು ಜಗದೀಶ್ ಅವರನ್ನು ಟಾರ್ಗೆಟ್ ಮಾಡಿದ್ದರಿಂದ ನಾನು ವಿಮಾನಕ್ಕೆ ಬಂದೆ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ಬಿರುಗಾಳಿ ಎದುರು ಸುಂಟರಗಾಳಿ! ಅಖಾಡಕ್ಕಿಳಿದ ಸೌಂದರ್ಯ ಶೆಟ್ಟಿ, ಟಾಸ್ಕ್‌ಗಾಗಿ ಜಟಾಪಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories