ನಟ ನಾಗ ಚೈತನ್ಯ ಜೊತೆಗಿನ ಮದುವೆಯ ನಂತರ ಎದುರಾದ ಸೈಬರ್ ದಾಳಿ ಮತ್ತು ಟೀಕೆಗಳ ಬಗ್ಗೆ ನಟಿ ಶೋಭಿತಾ ಧೂಳಿಪಾಲ ಮಾತನಾಡಿದ್ದಾರೆ. ಸಮಾಜದ ಅಭಿಪ್ರಾಯಗಳು ಹವಾಮಾನದಂತೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದಿದ್ದಾರೆ.
ನಟ ನಾಗ ಚೈತನ್ಯ ಜೊತೆ ಮದುವೆಯಾದ ನಂತರ ನಟಿ ಶೋಭಿತಾ ಧೂಳಿಪಾಲ ಅವರು ದೊಡ್ಡ ಮಟ್ಟದ ಸೈಬರ್ ದಾಳಿ ಮತ್ತು ನಿಂದನೆಗಳನ್ನು ಎದುರಿಸಬೇಕಾಯ್ತು. ಮೂಲಗಳ ವರದಿ ಪ್ರಕಾರ, 2024ರಲ್ಲಿ ಇವರಿಬ್ಬರ ಮದುವೆ ನಡೆದಿತ್ತು. 'ಸಮಂತಾ ಜೀವನ ಹಾಳು ಮಾಡಿದವಳು', 'ಕುಟುಂಬ ಮುರಿದವಳು' ಹೀಗೆ ನಾನಾ ರೀತಿಯ ನಿಂದನೆಗಳು ಶೋಭಿತಾ ವಿರುದ್ಧ ಕೇಳಿಬಂದಿದ್ದವು.
25
ಜೀವನವನ್ನು ನಡೆಸುತ್ತಿದ್ದೇನೆ
ಕಳೆದ ವರ್ಷ ಸಮಂತಾ ಅವರು ನಿರ್ದೇಶಕ ರಾಜ್ ನಿಧಿಮೋರು ಅವರನ್ನು ಮದುವೆಯಾದ ನಂತರ ಈ ರೀತಿಯ ನಿಂದನೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದವು. ಈಗ, ಈ ಬದಲಾವಣೆಯ ಬಗ್ಗೆ ಶೋಭಿತಾ ಮಾತನಾಡಿದ್ದು, ತಾನು ತನ್ನ ಜೀವನವನ್ನು ನಡೆಸುತ್ತಿದ್ದೇನೆ ಮತ್ತು ಜನರು ತನ್ನಿಂದ ಯಾವ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸಿದ್ದರು ಎಂಬುದು ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಕಾಲ ಕಳೆದಂತೆ, ತಾನು ಯಾರೆಂಬುದರ ಬಗ್ಗೆ ಹೆಚ್ಚು ಸ್ಪಷ್ಟತೆ ಸಿಗುತ್ತಿದೆ ಅಂತಾನೂ ಅವರು ಹೇಳಿದ್ದಾರೆ.
35
ಉತ್ತಮ ಸ್ಥಿತಿಯಲ್ಲಿದ್ದೇನೆ
ಖಂಡಿತ, ಜನರ ಗಮನ ನನ್ನ ಮೇಲಿತ್ತು. ಅವರಿಗೆ ಕುತೂಹಲ ಇತ್ತು ಅಂತ ನನಗೆ ಅನಿಸುತ್ತೆ. ನಾನು ನನ್ನ ಜೀವನವನ್ನು ಬದುಕುತ್ತಿದ್ದೇನೆ. ಜನ ನನ್ನಿಂದ ಯಾವ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದರು ಅಂತ ನನಗೆ ಗೊತ್ತಿಲ್ಲ. ನನ್ನ ಜೀವನದಲ್ಲಿ ನಾನೀಗ ಉತ್ತಮ ಸ್ಥಿತಿಯಲ್ಲಿದ್ದೇನೆ. ಸಮಯ ಕಳೆದಂತೆ, ನಾನು ಯಾರು ಅನ್ನೋದ್ರ ಬಗ್ಗೆ ನನಗೆ ಹೆಚ್ಚು ಖಚಿತತೆ ಸಿಗುತ್ತಿದೆ.
ಈ ತರಹದ ಬೇರೆ ಬೇರೆ ಅಭಿಪ್ರಾಯಗಳ ಮಧ್ಯೆ, ಅದರಿಂದ ಪ್ರಭಾವಿತರಾಗದೆ ಬದುಕುವುದು ಒಂದು ರೀತಿಯಲ್ಲಿ ಆರಾಮದಾಯಕ ಅನುಭವ. ಸಾಮಾನ್ಯವಾಗಿ ಎಲ್ಲ ವಿಚಾರಗಳ ಬಗ್ಗೆಯೂ ಜನರು ಬಿಸಿ ಬಿಸಿಯಾಗಿ ಮಾತನಾಡುತ್ತಾರೆ. ಇದು ವಾತಾವರಣ ಇದ್ದ ಹಾಗೆ. ಸಮಾಜಕ್ಕೂ ಒಂದು ಹವಾಮಾನವಿದೆ. ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬಾರದು. ಯಾಕಂದ್ರೆ ಅದು ಶಾಶ್ವತವಾಗಿ ಇರುವುದಿಲ್ಲ.
55
ತಾನು ಗಮನಹರಿಸಬೇಕು
ಹವಾಮಾನ ಬದಲಾದಂತೆ ಅದೂ ಬದಲಾಗುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು ಒಬ್ಬ ವ್ಯಕ್ತಿ ತನ್ನ ಬಗ್ಗೆ ತಾನು ಗಮನಹರಿಸಬೇಕು ಅಂತ ನನಗನಿಸುತ್ತೆ ಎಂದು ಗಲಾಟ್ಟಾ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಶೋಭಿತಾ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ, ಈ ವರ್ಷ ಶೋಭಿತಾ ನಟನೆಯ 'ಚೀಕಟಿಲೋ' ಎಂಬ ತೆಲುಗು ಚಿತ್ರ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಉತ್ತಮ ಪ್ರೇಕ್ಷಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.