ಒಡಿಶಾದ ರೂರ್ಕೆಲಾ ಸರ್ಕ್ಯೂಟ್ ಹೌಸ್‌ನಲ್ಲಿ ವಯಸ್ಕ ಚಿತ್ರಗಳ ತಾರೆ ಟೀನಾ ನಂದಿಗೆ ವಿಐಪಿ ಸೌಲಭ್ಯ ನೀಡಿರುವ ವಿಡಿಯೋ ವೈರಲ್ ಆಗಿದ್ದು, ಭಾರಿ ವಿವಾದ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಪಿ ಶ್ರೇಣಿಯ ಅಧಿಕಾರಿಯ ಮಗ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಒಡಿಶಾದ ರೂರ್ಕೆಲಾದ ಸರ್ಕ್ಯೂಟ್ ಹೌಸ್ ಈಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಕಳೆದ ಆಗಸ್ಟ್ನಲ್ಲಿ ರೂರ್ಕೆಲಾ ಪೊಲೀಸರು ಸರ್ಕ್ಯೂಟ್ ಹೌಸ್‌ನಲ್ಲಿ ಶೋಧ ನಡೆಸಿದ್ದಾಗ, ಅಲ್ಲಿ ಬಂದೂಕುಗಳು ಇದ್ದವು. ಆದರೆ ಇದೀಗ ಈ ಬಾರಿ ವಯಸ್ಕ ಅರ್ಥಾತ್ ನೀಲಿ ತಾರೆಯೊಬ್ಬರ ವಿಡಿಯೋ ಸಂಚಲನ ಮೂಡಿಸಿದೆ. ಕಳೆದ ವರ್ಷ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಸರ್ಕ್ಯೂಟ್ ಹೌಸ್ ಅನ್ನು ಉದ್ಘಾಟಿಸಿದ್ದರು. ಆದರೆ ಇದಾಗಲೇ ಇದು ವಿವಾದಗಳ ಕೇಂದ್ರಬಿಂದುವಾಗಿದೆ. ಈ ವೈರಲ್ ವಿಡಿಯೋದ ಪ್ರಕಾರ, ವಯಸ್ಕ ಚಲನಚಿತ್ರ ತಾರೆಗೆ ಸರ್ಕ್ಯೂಟ್ ಹೌಸ್‌ನಲ್ಲಿ ವಿಐಪಿ ಟ್ರೀಟ್ಮೆಂಟ್ ನೀಡಲಾಗಿದೆ. ಸರ್ಕಾರ ಈಗ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದೆ.
26
ಯಾರೀ ನೀಲಿ ತಾರೆ?
ಅಂದಹಾಗೆ ಈ ನಟಿ ಟೀನಾ ನಂದಿ. ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ 5 ನಿಮಿಷಗಳ ವಿಡಿಯೋ ಹಂಚಿಕೊಂಡ ಬಳಿಕ ಗಲಾಟೆ ಶುರುವಾಗಿದೆ. ಅದರಲ್ಲಿ, ಅವರು ಡಿಸೆಂಬರ್ 1, 2025 ರಂದು ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿದ್ದರು ಮತ್ತು ತನಗಾಗಿ ಐಷಾರಾಮಿ ಆಡಿಯನ್ನು ವ್ಯವಸ್ಥೆ ಮಾಡಲಾಗಿತ್ತು ಮತ್ತು ತನ್ನ ಸೌಕರ್ಯಗಳನ್ನು ನೋಡಿಕೊಳ್ಳಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.
36
ಯಾರಿಗೆಲ್ಲಾ ಅವಕಾಶ
ಸರ್ಕ್ಯೂಟ್ ಹೌಸ್‌ನಲ್ಲಿ ಸಾಮಾನ್ಯವಾಗಿ ಹಿರಿಯ ಸರ್ಕಾರಿ ಅಧಿಕಾರಿಗಳು, ಸಚಿವರು, ಶಾಸಕರು, ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಇತರ ಗಣ್ಯರು ವಾಸ್ತವ್ಯ ಹೂಡಲು ಅವಕಾಶವಿದೆ. ನಿಯಮದಂತೆ ಸಂಬಂಧಿತ ಅಧಿಕಾರಿಗಳ ಅನುಮತಿ ಇದ್ದರಷ್ಟೇ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಆದರೆ, ಇವರಿಗೆ ಸಿಕ್ಕಿದ್ದು ಹೇಗೆ ಎನ್ನುವ ಚರ್ಚೆ ಶುರುವಾಗಿದೆ.
ಟೀನಾ ನಂದಿ ಜಾರ್ಸುಗುಡಾ ವಿಮಾನ ನಿಲ್ದಾಣದಿಂದ ರೂರ್ಕೆಲಾಕ್ಕೆ ಐಷಾರಾಮಿ ಆಡಿ ಕಾರಿನಲ್ಲಿ ಪ್ರಯಾಣಿಸಿದ್ದರು. ರೂರ್ಕೆಲಾದ ಖಾಸಗಿ ಕಂಪನಿಯೊಂದರ ಸಿಇಒ ತಮ್ಮನ್ನ ರಿಸೀವ್ ಮಾಡಲು ಬರುತ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಕಂಪೆನಿಯ ಪ್ರಚಾರ ಕಾರ್ಯಕ್ರಮಕ್ಕಾಗಿ ನಗರಕ್ಕೆ ಬಂದಿದ್ದಾಗಿ ರೀಲ್ಸ್‌ನಲ್ಲಿ ಹೇಳಿದ್ದಾರೆ. ನನಗೆ ವಿಐಪಿಯ ರೀತಿ ಟ್ರೀಟ್ಮೆಂಟ್ ಸಿಕ್ಕಿದೆ. ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರ ಮಗನನ್ನು ಭೇಟಿಯಾಗಲಿದ್ದೇನೆ ಎಂದಿದ್ದಾರೆ.
56
ಎಸ್‌ಪಿ ಮಗನ ಬಂಧನ!
ಈ ಪ್ರಕರಣದಲ್ಲಿ ರೂರ್ಕೆಲಾ ಪೊಲೀಸರು ಮೂವರನ್ನು ಪ್ರಶ್ನಿಸಿದ್ದಾರೆ. ಮೊದಲನೆಯದಾಗಿ, ಕೊಠಡಿ ಕಾಯ್ದಿರಿಸಲು ಕಾರಣರಾದ ವ್ಯಕ್ತಿ ಏಕೆ ಹಾಗೆ ಮಾಡಿದನೆಂದು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಪೊಲೀಸರು ಎಸ್‌ಪಿ ಶ್ರೇಣಿಯ ಅಧಿಕಾರಿಯ ಮಗನನ್ನು ಸಹ ಬಂಧಿಸಿದ್ದಾರೆ. ಇದರೊಂದಿಗೆ, ಖಾಸಗಿ ಕಂಪನಿಯ ಮಾಲೀಕರು ಮತ್ತು ಟ್ರಾವೆಲ್ ಆಪರೇಟರ್‌ನನ್ನು ಸಹ ಬಂಧಿಸಲಾಗಿದೆ. ಈ ವಿಷಯದಲ್ಲಿ ತನಿಖೆ ಮುಂದುವರೆದಿದೆ ಎಂದು ಪಶ್ಚಿಮ ವಲಯದ ಡಿಐಜಿ ಹೇಳಿದರು.
66
ವಾಹನ ವ್ಯವಸ್ಥೆಯ ಬಗ್ಗೆಯೂ ತನಿಖೆ
ವಾಹನ ವ್ಯವಸ್ಥೆಯ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಸ್ಥಳೀಯ ಟ್ರಾವೆಲ್ ಆಪರೇಟರ್‌ವೊಬ್ಬರು ಖಾಸಗಿ ಕಂಪನಿಯ ಹಿರಿಯ ಅಧಿಕಾರಿಯ ಮನವಿಯ ಮೇರೆಗೆ ಕಾರು ಒದಗಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಟೀನಾ ವಾಸ್ತವ್ಯ ಮತ್ತು ಸಾರಿಗೆ ವ್ಯವಸ್ಥೆಯ ನಡುವೆ ಯಾವುದೇ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.