Bigg Boss Kannada: ಮಂಜನ ಸ್ವಾರ್ಥದ ಆಟದಿಂದ ಬೇಸತ್ತು ಧನುಷ್ ಮತ್ತು ಕಿರಣ್ ಶಾಸ್ತ್ರಿ ದೂರವಾಗಲು ನಿರ್ಧರಿಸಿದ್ದರೆ, ಮತ್ತೊಂದೆಡೆ ಮಂಜ ಮತ್ತು ಲಿಖಿತ್ ವರ್ತನೆಗೆ ವೀಕ್ಷಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹಾಗಾದರೆ ಇಂದು ನಡೆಯಲಿರುವ ಕಿಚ್ಚನ ಪಂಚಾಯಿತಿಯಲ್ಲಿ ಏನಾಗಬಹುದು? ಇಲ್ಲಿದೆ ಸಂಪೂರ್ಣ ವಿವರ.
ಅಂತರ ಕಾಯ್ದುಕೊಳ್ಳಲು ನಿರ್ಧಾರ ಬಿಗ್ ಬಾಸ್ ಕನ್ನಡದ ಮನೆಯಲ್ಲಿ ದಿನಗಳು ಕಳೆದಂತೆ ಸ್ನೇಹ, ವಿಶ್ವಾಸದ ಲೆಕ್ಕಾಚಾರಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿವೆ. ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೊಬ್ಬರು ಬಿಟ್ಟುಕೊಡದೆ ಒಗ್ಗಟ್ಟಿನಿಂದ ಆಡುತ್ತಿದ್ದ ಮಂಜ, ಧನುಷ್, ಲಿಖಿತ್ ಮತ್ತು ಕಿರಣ್ ಶಾಸ್ತ್ರಿ ಅವರ ಮಧ್ಯೆ ಇದೀಗ ಬಿರುಕು ಮೂಡಿದೆ. ಮಂಜನ ಸ್ವಾರ್ಥದ ಆಟವನ್ನು ಸೂಕ್ಷ್ಮವಾಗಿ ಗಮನಿಸಿರುವ ಧನುಷ್ ಮತ್ತು ಕಿರಣ್ ಶಾಸ್ತ್ರಿ, ಆತನಿಂದ ಅಂತರ ಕಾಯ್ದುಕೊಳ್ಳಲು ನಿರ್ಧಾರಕ್ಕೆ ಬಂದಿದ್ದಾರೆ.
24
ನಮ್ಮ ಆಟ ನಾವು ಆಡೋಣ
ನಮ್ಮ ಆಟ ನಾವು ಆಡೋಣ ಮನೆಯ ಒಂದು ಮೂಲೆಯಲ್ಲಿ ರಹಸ್ಯವಾಗಿ ಕುಳಿತು ಮಾತನಾಡಿಕೊಂಡ ಧನುಷ್ ಮತ್ತು ಶಾಸ್ತ್ರಿ, ಮಂಜನ ನಡವಳಿಕೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. "ಮಂಜ ತನ್ನ ಸ್ವಾರ್ಥಕ್ಕಾಗಿ ನಮ್ಮಿಬ್ಬರನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾನೆ. ಆತ ಟಾಸ್ಕ್ ಆಡುವುದಕ್ಕಿಂತ ಹೆಚ್ಚಾಗಿ ಮನೆಯ ಇತರ ಸದಸ್ಯರ ಕಾಲೆಳೆಯುವುದು, ಎಲ್ಲರನ್ನೂ ಕೆಣಕುವುದರಲ್ಲೇ ಕಾಲ ಕಳೆಯುತ್ತಿದ್ದಾನೆ. ಕನಿಷ್ಠ ಪಕ್ಷ ಲಿಖಿತ್ ಆದರೂ ಆಟವಾಡುತ್ತಾನೆ. ಆದರೆ ಮಂಜನಿಗೆ ಸಪೋರ್ಟ್ ಮಾಡುತ್ತಾ, ಆತನ ಮಾತು ಕೇಳಿಕೊಂಡು ಹೋದರೆ ನಮ್ಮ ಆಟವೇ ಹಾಳಾಗುತ್ತದೆ. ಹಾಗಾಗಿ ಇನ್ಮೇಲೆ ನಾವು ಯಾರ ಹಂಗೂ ಇಲ್ಲದೆ ನಮ್ಮ ಆಟ ನಾವು ಆಡೋಣ. ವಾಸ್ತವವಾಗಿ ಮನೆಯಲ್ಲಿರುವ ಉಳಿದವರು ಕೂಡ ನಮ್ಮನ್ನು ಬೆಂಬಲಿಸುತ್ತಲೇ ಬಂದಿದ್ದಾರೆ" ಎಂದು ಇಬ್ಬರೂ ಚರ್ಚಿಸಿ ತಮ್ಮದೇ ಹಾದಿ ಹಿಡಿಯಲು ನಿರ್ಧರಿಸಿದ್ದಾರೆ.
34
ಲಿಖಿತ್ ಕೂಡ ಅದೇ ಹಾದಿಯಲ್ಲಿ
ಲಿಖಿತ್ ಕೂಡ ಅದೇ ಹಾದಿಯಲ್ಲಿ ವಿಶೇಷವೆಂದರೆ, ಈ ವಾರ ಮಂಜನ ವರ್ತನೆ ಮನೆಯೊಳಗಷ್ಟೇ ಅಲ್ಲದೆ, ಹೊರಗಿರುವ ವೀಕ್ಷಕರಿಗೂ ತೀವ್ರ ಅಸಮಾಧಾನ ತಂದಿದೆ. ಬೇರೆಯವರನ್ನು ಸದಾ ಗೋಳುಹೊಯ್ದುಕೊಳ್ಳುವ ಮಂಜನ ಆಟದ ಶೈಲಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ‘ಅಗ್ನಿ ಪರೀಕ್ಷೆ’ಯಲ್ಲಿ ಗೆದ್ದು ಕಾಮನ್ ಮ್ಯಾನ್ ಸ್ಪರ್ಧಿಯಾಗಿ ಭರವಸೆ ಮೂಡಿಸಿದ್ದ ಲಿಖಿತ್ ಸಹ, ಇತ್ತೀಚೆಗೆ ನಡೆದುಕೊಳ್ಳುತ್ತಿರುವ ರೀತಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಆರಂಭದಲ್ಲಿ ಸಿಕ್ಕ ಬೆಂಬಲವನ್ನು ಲಿಖಿತ್ ತಮ್ಮ ಅತಿಯಾದ ಆತ್ಮವಿಶ್ವಾಸದಿಂದ ಕಳೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ.
ಇಂದಿನ ಸಂಚಿಕೆಯಲ್ಲಿ ಏನಾಗುತ್ತೆ? ಇಂದು ಬಹುನಿರೀಕ್ಷಿತ 'ಕಿಚ್ಚನ ಪಂಚಾಯಿತಿ' ಪ್ರಸಾರವಾಗಲಿದ್ದು, ಈ ಹೊತ್ತಿನಲ್ಲೇ ಧನುಷ್ ಮತ್ತು ಶಾಸ್ತ್ರಿ ಇಂತಹ ನಿರ್ಧಾರಕ್ಕೆ ಬಂದಿರುವುದು ಆಟಕ್ಕೆ ಹೊಸ ತಿರುವು ನೀಡಿದೆ. ಇಡೀ ವಾರ ಮನೆಯಲ್ಲಿ ಅಶಾಂತಿ ಸೃಷ್ಟಿಸಿದ ಮಂಜನಿಗೆ ಕಿಚ್ಚ ಸುದೀಪ್ ಚಾಟಿ ಬೀಸಲಿದ್ದಾರಾ? ಲಿಖಿತ್ ವರ್ತನೆಯ ಬಗ್ಗೆ ವೀಕ್ಷಕರ ಅಸಮಾಧಾನವನ್ನು ಸುದೀಪ್ ಪ್ರಸ್ತಾಪಿಸಲಿದ್ದಾರಾ? ಮತ್ತು ಒಡೆದುಹೋದ ಈ ಗೆಳೆಯರ ಬಳಗಕ್ಕೆ ಪಂಚಾಯಿತಿಯಲ್ಲಿ ಸಿಗುವ ತೀರ್ಪು ಏನು ಎಂಬುದನ್ನು ತಿಳಿಯಲು ಇಂದಿನ ಸಂಚಿಕೆಯನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.