Published : Mar 14, 2026, 07:47 AM ISTUpdated : Mar 14, 2026, 12:29 PM IST
Gilli Nata And Yash: ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟನ ಹೊಸ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಬೆಂಬಲ ನೀಡಿದ್ದಾರೆ. ಹಳ್ಳಿ ಹಿನ್ನೆಲೆಯ ಕಥೆಗೆ ಗಿಲ್ಲಿ ನಟ ನಾಯಕ ನಟನಾಗ್ತಾರೆ ಎಂದು ಮೂಲಗಳು ತಿಳಿಸಿವೆ.
ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟ ಅಭಿನಯದಲ್ಲಿ ಹೊಸ ಸಿನಿಮಾ ಮೂಡಿಬರುವ ಸಮಯ ಸನ್ನಿಹಿತವಾಗಿದೆ. ಖುದ್ದು ರಾಕಿಂಗ್ ಸ್ಟಾರ್ ಯಶ್ ಗಿಲ್ಲಿ ನಟನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಮೂಲಗಳು ತಿಳಿಸಿವೆ.
25
ಕಿರಾತಕ 2’
ಎಲ್ಲವೂ ಅಂದುಕೊಂಡಂತೆ ಆದರೆ ಗಿಲ್ಲಿ ನಟನ ಅಭಿನಯದಲ್ಲಿ ಸಿನಿಮಾವೊಂದು ಮೂಡಿಬರಲಿದೆ. ಆದರೆ ಶೀರ್ಷಿಕೆ ಬೇರೆ ಸಂಸ್ಥೆಯ ಅಡಿಯಲ್ಲಿ ನೋಂದಣಿ ಆಗಿರುವುದರಿಂದ ಶೀರ್ಷಿಕೆ ಲಭ್ಯವಾಗುವುದೋ ಇಲ್ಲವೋ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.
35
ಮಂಡ್ಯ ಪ್ರತಿಭೆ
ಗಿಲ್ಲಿ ನಟ ಬಹಳ ಶ್ರಮದಿಂದ ಮೇಲೆ ಬಂದಿರುವುದರಿಂದ ಮತ್ತು ಮಂಡ್ಯ ಹಿನ್ನೆಲೆ ಇರುವುದರಿಂದ ರಾಕಿಂಗ್ ಸ್ಟಾರ್ ಯಶ್ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಇದರ ಹಿಂದೆ ಹೊಸ ತಲೆಮಾರಿನ ನಾಯಕ ನಟರನ್ನು ಹುಟ್ಟುಹಾಕುವ ಉದ್ದೇಶವೂ ಅವರಿಗಿದೆ ಎನ್ನಲಾಗಿದೆ. ಅದಕ್ಕಾಗಿ ಗಿಲ್ಲಿ ನಟನ ಸಿನಿಮಾ ಆಗಲು ಅವರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರಂತೆ
ಹಾಸ್ಯಕಲಾವಿದನಾಗಿ ಗುರುತಿಸಿಕೊಂಡಿದ್ದ ಗಿಲ್ಲಿ ನಟ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್‌ಬಾಸ್‌ನಲ್ಲಿ ಭಾಗಿಯಾಗಿದ್ದರು. ತಮ್ಮ ಹಳ್ಳಿ ಶೈಲಿಯ ಮಾತುಗಳಿಂದಲೇ ಜನಪ್ರಿಯತೆ ಪಡೆದುಕೊಂಡ ಗಿಲ್ಲಿ ನಟ, ಬಿಗ್‌ಬಾಸ್ ಟ್ರೋಫಿ ತಮ್ಮದಾಗಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.