'ಅರ್ಧಕ್ಕೆ ಕೈಕೊಡುವವಳಲ್ಲ' ಅಂದಿದ್ದ ನಟಿ ಸಂಜನಾ ಬುರ್ಲಿ ಸೀರಿಯಲ್​ ಬಿಟ್ಟಿದ್ಯಾಕೆ? ಕುತೂಹಲದ ಪೋಸ್ಟ್​!

Published : Mar 13, 2026, 10:59 PM IST

'ಪುಟ್ಟಕ್ಕನ ಮಕ್ಕಳು' ಸೀರಿಯಲ್​ನಿಂದ ಪೂರ್ವಸೂಚನೆ ನೀಡಿ ಹೊರಬಂದಿದ್ದ ನಟಿ ಸಂಜನಾ ಬುರ್ಲಿ, ಇದೀಗ 'ಗಂಧದ ಗುಡಿ' ಧಾರಾವಾಹಿಯಿಂದ ದಿಢೀರ್ ನಿರ್ಗಮಿಸಿದ್ದಾರೆ. ಅವರ ಮದುವೆ ಕಾರಣ ಎನ್ನಲಾಗುತ್ತಿದ್ದರೂ, ಅವರು ಹಂಚಿಕೊಂಡಿರುವ ಒಂದು ನಿಗೂಢ ಪೋಸ್ಟ್​ನಿಂದಾಗಿ ಅವರ ನಿರ್ಧಾರದ ಬಗ್ಗೆ  ಅನುಮಾನಗಳು ಮೂಡಿವೆ.

PREV
16
ಸ್ನೇಹಾ ಸಾವು

ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸ್ನೇಹಾ ಆಗಿ ಎಲ್ಲರನ್ನೂ ರಂಜಿಸಿದ್ದ ನಟಿ ಸಂಜನಾ ಬುರ್ಲಿ ಪಾತ್ರವನ್ನು ಸಾಯಿಸಿದಾಗ ರೊಚ್ಚಿಗೆದ್ದವರೇ ಹೆಚ್ಚು. ಆದರೆ ಅಸಲಿಗೆ ಸಂಜನಾ ಬುರ್ಲಿ ಆ ಪಾತ್ರದಿಂದ ನಿರ್ಗಮಿಸುವ ಬಗ್ಗೆ ಹೇಳಿದ್ದರಿಂದ, ಆ ಪಾತ್ರಕ್ಕೆ ಬೇರೆಯವರನ್ನು ತಂದರೆ ಚೆನ್ನಾಗಿರಲಿಲ್ಲ ಎಂದು ಪಾತ್ರವನ್ನು ಸಾಯಿಸಲಾಗಿತ್ತು. ಈ ಬಗ್ಗೆ ಖುದ್ದು ನಟಿ ಹಾಗೂ ನಿರ್ದೇಶಕರೂ ಹೇಳಿದ್ದರು.

26
ಸಂಜನಾ ಹೇಳಿದ್ದೇನು?

ಆ ಸಮಯದಲ್ಲಿ ಸಂಜನಾ ಅವರು, ನಾನು ಮೂರು ತಿಂಗಳು ಮೊದಲೇ ಈ ವಿಷಯ ತಿಳಿಸಿದ್ದೆ. ಆದ್ದರಿಂದ ಪಾತ್ರವನ್ನು ಸಾಯಿಸಿದರು. ಇದ್ದಕ್ಕಿದ್ದಂತೆ ಮಾಡಿದ ನಿರ್ಧಾರವಲ್ಲ. ಮಧ್ಯೆ ಕೈಕೊಟ್ಟು ಹೋಗುವವಳು ಅಲ್ಲ. ಹಿಡಿದ ಕಾರ್ಯವನ್ನು, ಒಪ್ಪಿಕೊಂಡ ಸೀರಿಯಲ್​ಗಳನ್ನು ಮುಗಿಸಿಯೇ ಹೋಗುವವಳು ನಾನು. ಇಲ್ಲದಿದ್ದರೆ ಅದು ಇಡೀ ತಂಡಕ್ಕೆ ಎಷ್ಟು ಸಮಸ್ಯೆ ಆಗುತ್ತದೆ ಎನ್ನುವ ಅರಿವು ನನಗೆ ಇದೆ ಎಂದು ಸಂದರ್ಶನದಲ್ಲಿ ಮಾತನಾಡಿದ್ದರು.

36
ಮೊದಲೇ ಗೊತ್ತಿದ್ದರೆ?

ಆದರೆ, ಇದೀಗ ದಿಢೀರ್​ ಎಂದು ನಟಿ, ಗಂಧದ ಗುಡಿ ಸೀರಿಯಲ್​ನಲ್ಲಿ ಹೊರಕ್ಕೆ ಬಂದಿದ್ದಾರೆ. ಅದು ಕೂಡ ಲೀಡ್​ ರೋಲ್​. ಅವರ ಮದುವೆ ನಿಶ್ಚಯವಾಗಿದ್ದರಿಂದ ಹೀಗೆ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಒಂದು ವೇಳೆ ಹಿಂದೆ ಹೇಳಿದಂತೆ ಶಿಕ್ಷಣದ ಕಾರಣವೇ ಆಗಿದ್ದರೆ ನಟಿ, ಈ ಸೀರಿಯಲ್​​ ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ಮದುವೆಯ ವಿಷಯವೂ ಆಗಿದ್ದರೆ ಅದು ಕೂಡ ಮೊದಲೇ ಗೊತ್ತಿರುವಂತಿದೆ. ಒಂದು ವೇಳೆ ಅಕಸ್ಮಾತ್​ ಮದುವೆ ನಿಶ್ಚಯ ಆಗಿದ್ದರೂ, ಎಷ್ಟೋ ಮಂದಿ ಸೀರಿಯಲ್​ ನಡುವೆ ಮದುವೆ ಮಾಡಿಕೊಂಡೇ ಅದನ್ನು ಮುಂದುವರೆಸಿದ್ದಾರೆ.

46
ಏಕೀ ನಿರ್ಧಾರ?

ಹಾಗಿದ್ದರೆ ನಟಿ ಈ ನಿರ್ಧಾರ ತೆಗೆದುಕೊಂಡಿದ್ಯಾಕೆ ಎನ್ನುವ ಬಗ್ಗೆ ಇನ್ನೂ ಕುತೂಹಲ ಇದ್ದದ್ದೇ. ಈ ಬಗ್ಗೆ ಮದುವೆ, ಶಿಕ್ಷಣ ಏನೇ ಇದ್ದರೂ ಸಂಜನಾ ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಆದರೂ ಬಹಿರಂಗಪಡಿಸುತ್ತಿದ್ದರು. ಆದರೆ ಹಾಗೆ ಮಾಡಿಲ್ಲದ್ದಕ್ಕೆ ಕಾರಣ ಏನು ಎನ್ನುವ ಬಗ್ಗೆ ಅವರ ಫ್ಯಾನ್ಸ್​ ಸಿಕ್ಕಾಪಟ್ಟೆ ಬೇಸರ ಪಟ್ಟುಕೊಂಡಿದ್ದಾರೆ.

56
ಕುತೂಹಲದ ಪೋಸ್ಟ್​

ಅದರ ನಡುವೆಯೇ ಇದೀಗ ಕುತೂಹಲ ಎನ್ನುವ ಪೋಸ್ಟ್​ ಒಂದನ್ನು ಸಂಜನಾ ಬುರ್ಲಿ (Sanjana Burli) ಶೇರ್​ ಮಾಡಿದ್ದಾರೆ. ಅದರಲ್ಲಿ ಅವರು, Biggest lesson I’ve learnt- “Accept what is, as it is.” Life becomes so much simpler and beautiful ಎಂದು ಇಂಗ್ಲಿಷ್​ನಲ್ಲಿಯೂ, ನಾನು ಕಲಿತ ದೊಡ್ಡ ಪಾಠ- “ಇರುವುದನ್ನು ಹಾಗೆಯೇ ಸ್ವೀಕರಿಸಿ. ಜೀವನವು ತುಂಬಾ ಸರಳ ಮತ್ತು ಸುಂದರವಾಗುತ್ತದೆ ಎಂದು ಕನ್ನಡದಲ್ಲಿಯೂ ಬರೆದುಕೊಂಡಿದ್ದಾರೆ.

66
ಫ್ಯಾನ್ಸ್​ಗೆ ಸಂದೇಹ

ಇದು ಹಲವಾರು ಅರ್ಥಗಳನ್ನು ನೀಡುತ್ತದೆ. ಈ ಕ್ಯಾಪ್ಷನ್​ ಓದಿದ ಮೇಲೆ ಅವರ ಅಭಿಮಾನಿಗಳಿಗೆ ಸೀರಿಯಲ್​ ಸೆಟ್​ನಲ್ಲಿ ಏನಾದರೂ ಸಂಭವಿಸಿತಾ ಎನ್ನುವ ಸಂದೇಹ ಕಾಡುತ್ತಿದೆ. ಒಟ್ಟಿನಲ್ಲಿ ನಟಿ ಬಾಯಿಯಿಂದ ಇದು ಬರುವವರೆಗೂ ಅಭಿಮಾನಿಗಳು ತಮ್ಮದೇ ಊಹೆಗಳನ್ನು ಹೊರಹಾಕುತ್ತಲೇ ಇರುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories