ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆಯ ಕ್ಷಣವನ್ನು ರಾಳ ಕಲಾವಿದೆ ಹರ್ಷಿತಾ ಅವರು ಒಂದು ಸುಂದರ ಕಲಾಕೃತಿಯಲ್ಲಿ ಸೆರೆಹಿಡಿದಿದ್ದಾರೆ. ಈ ಚಿತ್ರದಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಅನುಶ್ರೀ ಮತ್ತು ರೋಷನ್ ದಂಪತಿಗೆ ಆಶೀರ್ವಾದಿಸುತ್ತಿರುವಂತೆ ಚಿತ್ರಿಸಲಾಗಿದೆ.
ಕನ್ನಡ ಕಿರುತೆರೆ ಲೋಕದ ನಂಬರ್ ಒನ್ ನಿರೂಪಕಿ ಅಂತಾನೇ ಕರೆಸಿಕೊಳ್ಳುವ ಅನುಶ್ರೀ ಅವರ ಮದುವೆಯ ಕ್ಷಣವನ್ನು ಕಲಾವಿದೆ ಹರ್ಷಿತಾ ಎಂಬವರು ಮತ್ತಷ್ಟು ಸುಂದರವಾಗಿಸಿದ್ದಾರೆ. ಹರ್ಷಿತಾ ಅವರ ಕಲೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕಲೆಯನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸಹ ಕೊಂಡಾಡುತ್ತಿದ್ದಾರೆ.
25
Resin ಕಲಾವಿದೆ
ಹರ್ಷಿತಾ ಎಂಬವರು Resin ಕಲಾವಿದೆಯಾಗಿ (ರಾಳ ಕಲೆ) ಗುರುತಿಸಿಕೊಂಡಿದ್ದಾರೆ. ಕಾರ್ಯಕ್ರಮ ನಿಮಿತ್ ತಿಪಟೂರಿಗೆ ಆಗಮಿಸಿರುವ ನಿರೂಪಕಿ ಅನುಶ್ರೀ ಅವರಿಗೆ ಸುಂದರವಾದ ಚಿತ್ರವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ದೊಡ್ಮನೆಯ ರಾಜಕುಮಾರ ಪುನೀತ್ ಅವರನ್ನು ಜೀವಂತವಾಗಿ ತರುವ ಪ್ರಯತ್ನವನ್ನು ಹರ್ಷಿತಾ ಮಾಡಿದ್ದಾರೆ.
35
ರೋಷನ್ ಜೊತೆಯಲ್ಲಿ ಅನುಶ್ರೀ ಮದುವೆ
ಆಗಸ್ಟ್ 28, 2025 ರಂದು ಕುಶಾಲನಗರ ಮೂಲದ ಉದ್ಯಮಿ ರೋಷನ್ ಜೊತೆಯಲ್ಲಿ ಅನುಶ್ರೀ ಮದುವೆ ನಡೆದಿತ್ತು. ಮಾಂಗಲ್ಯಧಾರಣೆ ವೇಳೆ ಪುನೀತ್ ರಾಜಕುಮಾರ್ ಜೋಡಿಗೆ ಪುಷ್ಟಮಳೆ ಸುರಿಸಿರುವಂತೆ ಚಿತ್ರವನ್ನು ಬರೆಯಲಾಗಿದೆ. ಈ ಪಟವನ್ನು ಸ್ವೀಕರಿಸುವ ಅನುಶ್ರೀ, ಮದುವೆಯಲ್ಲಿ ತುಂಬಾ ಕಾಣಿಕೆಗಳು ಬಂದಿವೆ. ಆದ್ರೆ ಈ ಗಿಫ್ಟ್ ತುಂಬಾ ವಿಶೇಷವಾಗಿದೆ ಎಂದು ಹೇಳಿದ್ದಾರೆ.
ಅನುಶ್ರೀ ಅವರಿಗೆ ರೋಷನ್ ಮಾಂಗಲ್ಯಧಾರಣೆ ಮಾಡುತ್ತಿದ್ರೆ ಜೋಡಿ ಹಿಂದೆ ನಿಂತ ಪುನೀತ್ ರಾಜ್‌ಕುಮಾರ್ ಇಬ್ಬರ ಮೇಲೆ ಹೂವು ಹಾಕುವ ಮೂಲಕ ಹಾರೈಸಿದ್ದಾರೆ. ಈ ಚಿತ್ರ ಬಿಡಿಸುತ್ತಿರುವ ವಿಡಿಯೋವನ್ನು ಕಲಾವಿದೆ ಹರ್ಷಿತಾ ತಮ್ಮ ಇನ್‌ಸ್ಟಗ್ರಾಂನಲ್ಲಿ ಹಂಚಿಕೊಂಡು ಅನುಶ್ರೀ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಅನುಶ್ರೀ ಸಹ ಪ್ರತಿಕ್ರಿಯೆ ನೀಡಿದ್ದಾರೆ.
ವರು ಕನಸೂ ಕಾಣದಷ್ಟು ವಿಶೇಷ ಕ್ಷಣ ಬಂತು. ಅಪ್ಪು ಸರ್ ಅವರ ಆಶೀರ್ವಾದದ ಮಾತುಗಳು. ಮದುವೆ ಮಂದಿರದೊಳೇ ಒಂದು ತಂಪು ಗಾಳಿಯಂತೆ ಹರಡಿದವು . ಅವರ ಸ್ಮೈಲ್, ಅವರ ಶುದ್ಧ ಹೃದಯ, ಆ ಕ್ಷಣವನ್ನೇ ಮತ್ತಷ್ಟು ಮಧುರವನ್ನಾದವು. ಅವರ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಾಗ, ಪಕ್ಕದಲ್ಲೇ ದೈವದಂತೆ ಅಪ್ಪು ಸರ್ ನಿಂತಿದ್ದರು.
ಇದು ಕೇವಲ ಒಂದು ವಿಶ್ ಅಲ್ಲ. ಜೀವನ ಪೂರ್ತಿ ಮರೆತಿರಲಾರದ ಒಂಥರಾ ಹೃದಯದ ನೆನಪು. ಅಪ್ಪು ಸರ್ ಅವರ ಪ್ರೀತಿ, ಆಶೀರ್ವಾದ, ಅನುಶ್ರಿಯವರ ಮದುವೆಯ ದಿನದ ಅತ್ಯಂತ ಅಮೂಲ್ಯ ಉಡುಗೊರೆ ಎಂದು ಹರ್ಷಿತಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.