Rachita Ram Dream House: ಸ್ಟಾರ್ ನಟಿಯಾದ್ರೂ ರಚಿತಾ ರಾಮ್ ಅವರಿಗೆ ದೊಡ್ಡ ಮನೆ ಕೊಳ್ಳುವಷ್ಟು ಕೈಯ್ಯಲ್ಲಿ ಹಣವಿರಲಿಲ್ಲ. ಆಗ ಆರ್.ಆರ್. ನಗರದಲ್ಲೇ ಮನೆ ಖರೀದಿಸಲು ರಚಿತಾ ರಾಮ್ ಮಾಡಿದ್ದೇನು ? ಅಂದು ಅವರ ಆಪ್ತರ ಬಳಿ ರಚಿತಾ ಹಂಚಿಕೊಂಡ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಭಾವುಕರಾಗಿ ಹಂಚಿಕೊಂಡ ದಿನೇಶ್ 'ಬುಲ್ ಬುಲ್' ಸಿನಿಮಾದ ಮೂಲಕ ಜನಪ್ರಿಯರಾದ ರಚಿತಾ ರಾಮ್, ಅತಿ ಕಡಿಮೆ ಸಮಯದಲ್ಲಿ ಬಹುಭಾಷಾ ತಾರೆಯಾಗಿ ಮಿಂಚಿದವರು. ಇಂದು ಅವರು ದೊಡ್ಡ ಮಟ್ಟದ ಯಶಸ್ಸು ಕಂಡಿರಬಹುದು, ಆದರೆ ಈ ಯಶಸ್ಸಿನ ಹಿಂದೆ ಅತಿ ದೊಡ್ಡ ಪರಿಶ್ರಮವೇ ಇದೆ. ಅಂದಹಾಗೆ ರಚಿತಾ ರಾಮ್ ಅವರು ತಮ್ಮ ಕನಸಿನ ಮನೆಯನ್ನು ಖರೀದಿಸಲು ಎದುರಿಸಿದ ಸಂಕಷ್ಟಗಳನ್ನು ಅವರ ಆಪ್ತರಾದ ದಿನೇಶ್ ಕಣ್ಣಾರೆ ಕಂಡಿದ್ದು, ಇದನ್ನು ಸಂದರ್ಶನವೊಂದರಲ್ಲಿ ಭಾವುಕರಾಗಿ ಹಂಚಿಕೊಂಡಿದ್ದಾರೆ.
25
ಚಿನ್ನಾಭರಣ ಅಡವಿಟ್ಟು ಮನೆ ಖರೀದಿಸಿದ ರಚಿತಾ
ಚಿನ್ನಾಭರಣ ಅಡವಿಟ್ಟು ಮನೆ ಖರೀದಿಸಿದ ರಚಿತಾ ನಾವೆಲ್ಲಾ ಸಾಮಾನ್ಯವಾಗಿ ಸ್ಟಾರ್ ನಟಿಯರು ಅಂದಾಕ್ಷಣ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ, ಅವರ ಜೀವನ ಸುಖಮಯವಾಗಿರುತ್ತದೆ ಎಂದು ಭಾವಿಸುತ್ತೇವೆ ಅಲ್ಲವೇ, ಆದರೆ ರಚಿತಾ ರಾಮ್ ವಿಷಯದಲ್ಲಿ ಅದು ಸುಳ್ಳಾಗಿತ್ತು. ಅವರಿಗೆ ಬೆಂಗಳೂರಿನ ಆರ್.ಆರ್ ನಗರದಲ್ಲಿ (ರಾಜರಾಜೇಶ್ವರಿ ನಗರ) ಒಂದು ಮನೆ ತೆಗೆದುಕೊಳ್ಳಬೇಕು ಎಂಬುದು ದೊಡ್ಡ ಕನಸಾಗಿತ್ತು. ಆದರೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರೂ, ಒಂದು ದೊಡ್ಡ ಮನೆ ಖರೀದಿಸುವಷ್ಟು ಹೆಚ್ಚಿನ ಹಣ ಅವರ ಬಳಿ ಇರಲಿಲ್ಲವಂತೆ. ಆಗ ಅವರು ತಮ್ಮಲ್ಲಿದ್ದ ಸಣ್ಣ ಸಣ್ಣ ಓಲೆ, ಮೂಗುಬೊಟ್ಟು ಸೇರಿದಂತೆ ಪ್ರತಿಯೊಂದು ಚಿನ್ನಾಭರಣವನ್ನೂ ಅಡವಿಟ್ಟು ಮನೆ ಖರೀದಿಸಲು ಪ್ಲಾನ್ ಮಾಡಿದ್ದರಂತೆ. ಆ ಸಮಯದಲ್ಲಿ ಅವರು ಅನುಭವಿಸಿದ ಮಾನಸಿಕ ಒತ್ತಡ ಹಾಗೂ ಆರ್ಥಿಕ ಮುಗ್ಗಟ್ಟನ್ನು ಅವರ ಆಪ್ತ ದಿನೇಶ್ ನೆನಪಿಸಿಕೊಂಡಿದ್ದಾರೆ.
35
ಸಂಭಾವನೆ ವಿಚಾರವನ್ನು ಶೇರ್ ಮಾಡಿದ್ದ ರಚಿತಾ
ಸಂಭಾವನೆ ವಿಚಾರವನ್ನು ಶೇರ್ ಮಾಡಿದ್ದ ರಚಿತಾ ಕೊನೆಗೂ ಕಷ್ಟಪಟ್ಟು ಮನೆ ಕೊಂಡುಕೊಂಡ ದಿನ, ರಚಿತಾ ರಾಮ್ ಅವರು ತಮ್ಮ ಆಪ್ತರೆಲ್ಲರನ್ನೂ ಕರೆದಿದ್ದರು. ಅಂದು ತಮ್ಮ ನೋವನ್ನೆಲ್ಲಾ ಹೊರಹಾಕುತ್ತಾ, "ಈ ಮನೆ ತೆಗೆದುಕೊಳ್ಳಲು ನಾನು ಎಷ್ಟು ಒದ್ದಾಡಿದ್ದೇನೆ ಎಂಬುದು ನನಗೆ ಗೊತ್ತು" ಎಂದು ಅತ್ತುಬಿಟ್ಟಿದ್ದರಂತೆ. ನಟಿಯರಿಗೆ ಸಿಗುವ ಅಸಲಿ ಸಂಭಾವನೆ ಎಷ್ಟು ಎಂಬ ಸತ್ಯವನ್ನು ಕೂಡ ಅವರು ಅಂದು ಆಪ್ತರ ಬಳಿ ಹಂಚಿಕೊಂಡಿದ್ದರು.
ಕೊನೆಗೂ ದೊಡ್ಡ ಕಾರಿನ ಒಡತಿಯಾದ ರಚ್ಚು ಚಿಕ್ಕವರಿದ್ದಾಗ ರಚಿತಾ ರಾಮ್ ಅವರಿಗೆ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಮಾಡಿಕೊಳ್ಳುವ (Motion Sickness) ಅಭ್ಯಾಸವಿತ್ತು. ಇದೇ ಕಾರಣಕ್ಕೆ ಅವರ ಸಂಬಂಧಿಕರು ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಳ್ಳದೆ, ಬಸ್ಸಿನಲ್ಲಿ ಕಳುಹಿಸುತ್ತಿದ್ದರಂತೆ. ಈ ಅವಮಾನ ರಚಿತಾ ಅವರ ಮನಸ್ಸಿಗೆ ತೀವ್ರವಾಗಿ ತಟ್ಟಿತ್ತು. ಅಂದು ಅಮ್ಮನ ಬಳಿ ಅವರು ಶಪಥ ಮಾಡಿದ್ದರಂತೆ, "ಮುಂದೊಂದು ದಿನ ನಾನು ದೊಡ್ಡ ಕಾರ್ ತಗೋಬೇಕು, ಅದರಲ್ಲಿ ಯಾರು ಬೇಕಾದರೂ ವಾಂತಿ ಮಾಡಿಕೊಳ್ಳಲಿ, ನಾನು ಯಾರನ್ನೂ ಇಳಿಸುವುದಿಲ್ಲ" ಎಂದು. ಇಂದು ಅವರು ದೊಡ್ಡ ಕಾರಿನಲ್ಲೇ ಓಡಾಡುತ್ತಿದ್ದಾರೆ ಎಂದರೆ ಅದಕ್ಕೆ ಅಂದಿನ ಆ ಅವಮಾನವೇ ಸ್ಫೂರ್ತಿ.
55
ಗಾಸಿಪ್‌ಗಳಿಗೆ ತಲೆಕೆಡಿಸಿಕೊಳ್ಳದ ನಟಿ
ಗಾಸಿಪ್‌ಗಳಿಗೆ ತಲೆಕೆಡಿಸಿಕೊಳ್ಳದ ನಟಿ ರಚಿತಾ ರಾಮ್ ಇಷ್ಟು ದೊಡ್ಡ ಮನೆ ಕಟ್ಟಿಸಿದಾಗ, "ಇದನ್ನು ಯಾರೋ ಕೊಡಿಸಿದ್ದು" ಎಂಬ ಕೆಟ್ಟ ಮಾತುಗಳು ಕೇಳಿಬಂದಿದ್ದವಂತೆ. ಆಗ ಅವರ ತಾಯಿ ನೀಡಿದ ಧೈರ್ಯವೇ ಅವರಿಗೆ ಪ್ರೇರಣೆಯಂತೆ. "ಹೆಣ್ಣುಮಕ್ಕಳು ಕಷ್ಟಪಟ್ಟು ಮೇಲೆ ಬಂದರೆ ಸಮಾಜ ಹೀಗೆಯೇ ಮಾತನಾಡುತ್ತದೆ, ಅದಕ್ಕೆ ತಲೆಕೆಡಿಸಿಕೊಳ್ಳಬೇಡ" ಎಂದು ತಾಯಿ ಹೇಳಿಕೊಟ್ಟ ಮಾತುಗಳನ್ನು ರಚಿತಾ ಇಂದಿಗೂ ಪಾಲಿಸುತ್ತಿದ್ದಾರೆ. ಪ್ರತಿಭೆ ಮತ್ತು ಛಲದಿಂದ ಇಂದು ರಚಿತಾ ರಾಮ್ ಅವರು ಈ ಎತ್ತರಕ್ಕೆ ಬೆಳೆದು ನಿಂತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.