ಶ್ರೀರಾಮಚಂದ್ರನ ರಾಣಿ ಸೀತೆಯಾಗಿ ಸಾಯಿ ಪಲ್ಲವಿ 3 ಲುಕ್‌ ರಿವೀಲ್; ದೈವಿಕ ಕಳೆ ಎಂದ ಫ್ಯಾನ್ಸ್

Published : Jul 30, 2026, 09:33 AM IST

ಬಹುನಿರೀಕ್ಷಿತ 'ರಾಮಾಯಣ ಭಾಗ-1' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಗಮನ ಸೆಳೆದಿದ್ದಾರೆ. ಟ್ರೈಲರ್‌ನಲ್ಲಿ ಸ್ವಯಂವರ, ವನವಾಸ ಸೇರಿದಂತೆ ಅವರ ಮೂರು ವಿಭಿನ್ನ ನೋಟಗಳನ್ನು ತೋರಿಸಲಾಗಿದ್ದು, ರಾವಣನಾಗಿ ಯಶ್ ಮತ್ತು ರಾಮನಾಗಿ ರಣ್‌ಬೀರ್ ಕಪೂರ್ ಕೂಡ ಮಿಂಚಿದ್ದಾರೆ.

PREV
15
ಸೀತೆಯಾಗಿ ಕಂಗೊಳಿಸಿದ ಸಾಯಿ ಪಲ್ಲವಿ

ದೇಶದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ರಾಮಾಯಣ ಭಾಗ-1ರ ಟ್ರೈಲರ್ ಬಿಡುಗಡೆಯಾಗಿದೆ. ಅದ್ಭುತ ಕಲಾವಿದರ ತಂಡದ ಜೊತೆ ವಿಎಫ್‌ಎಕ್ಸ್ ಮತ್ತು ಸ್ಟ್ರಾಂಗ್ ಮ್ಯೂಸಿಕ್ ಜೊತೆ ಹೊರಬಂದಿರುವ ರಾಮಾಯಣದ ಟ್ರೈಲರ್ ನೋಡುಗರಲ್ಲಿ ರೋಮಾಂಚನವುಂಟು ಮಾಡುತ್ತಿದೆ. ರಾಮಾಯಣದಲ್ಲಿ ರಾಮ ಮತ್ತು ರಾವಣ ಎಷ್ಟು ಮುಖ್ಯವೋ ಅಷ್ಟೇ ಸಾದ್ವಿ ಸೀತೆ ಕಥೆಯೂ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ.

25
ನಾರಿಕುಲಕೆ ಮಾದರಿ ಆಯೋಧ್ಯರಾಣಿ

ಸೀತೆಯನ್ನು ನಾರಿಕುಲಕ್ಕೆ ಮಾದರಿ ಎಂದು ಪರಿಗಣಿಸಲಾಗುತ್ತದೆ. ಈ ಹಿಂದೆ ಸೀತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ದೀಪಿಕಾ ಚಿಖಾಲಿಯಾ ಅವರನ್ನು ಎಷ್ಟೋ ಜನರು ದೇವತೆ ಎಂಬಂತೆ ನಟಿಸಿದ್ದರು. ಇದಾದ ಬಳಿಕ ರಾಮಾಯಣ ಆಧಾರಿತ ಹಲವು ಸಿನಿಮಾ, ಧಾರವಾಹಿಗಳು ಬಂದಿವೆ. ದೀಪಿಕಾ ಚಿಖಾಲಿಯಾ ಬಳಿಕ ಸಾಯಿ ಪಲ್ಲವಿ ಮತ್ತೊಮ್ಮೆ ಆ ಸೀತೆ ಕಥೆಗೆ ಜೀವ ತುಂಬಿದ್ದಾರೆ ಅನ್ನೋದು ಇಂದಿನ ಟ್ರೈಲರ್‌ನಲ್ಲಿ ಸಾಬೀತಾಗಿದೆ.

35
ಟ್ರೈಲರ್‌

ನಾಲ್ಕು ನಿಮಿಷದ ಟ್ರೈಲರ್‌ನಲ್ಲಿ ಕೆಲವೇ ಸೆಕೆಂಡ್‌ಗಳು ಮಾತ್ರ ಸೂರ್ಯಕುಲದ ಜ್ಯೋತಿ, ಜನಕರಾಯನ ಪುತ್ರಿಯನ್ನು ನೋಡಬಹುದಾಗಿದೆ. ಸ್ವಯಂವರದ ಮುಗ್ದೆ, ರಾಮ ಹೃದಯನಿವಾಸಿನಿಯಾಗಿ, ವನವಾಸಕ್ಕೆ ಹೊರಟ ಪತಿ ಜೊತೆ ದಟ್ಟಡವಿಯಲ್ಲಿ ಹೊರಟ ಜಾನಕಿಯನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಹಾಗೆಯೇ ಪತಿ ರಾಮಚಂದ್ರನ ಮೇಲೆ ವ್ಯಾಮೋಹಗೊಂಡ ಶೂರ್ಪನಕಿ ಕುರಿತ ರಾಮವಲಭೆಯ ಸಹನೆಯ ಮಾತು ನೋಡುಗರಲ್ಲಿ ಪುಳುಕವನ್ನುಂಟು ಮಾಡುತ್ತದೆ.

45
ಮೂರು ಲುಕ್‌ನಲ್ಲಿ ಸಾಯಿ ಪಲ್ಲವಿ

ಜನಕರಾಯನ ಪುತ್ರಿ ಜಾನಕಿಯಾಗಿ ಸಾಯಿ ಪಲ್ಲವಿ ಅವರ ಮೊದಲ ಲುಕ್ ಅನಾವರಣಗೊಳ್ಳುತ್ತದೆ. ನಂತರ ಶ್ರೀರಾಮಚಂದ್ರನ ಅರಸಿಯಾಗಿ ಸಾಯಿ ಪಲ್ಲವಿ ಕಾಣಿಸುತ್ತಾರೆ. ಬಳಿಕ ವನವಾಸದ ಲುಕ್‌ ಸಹ ತೋರಿಸಲಾಗಿದೆ. ಇದೇ ಟ್ರೈಲರ್‌ನಲ್ಲಿ ಲಕ್ಷ್ಮಣ ರೇಖೆ, ಪುಷ್ಪಕವಿಮಾನದಲ್ಲಿ ಸೀತಾಪಹರಣದ ಸಣ್ಣದಾದ ಝಲಕ್ ನೋಡಬಹುದಾಗಿದೆ. ಆದ್ರೆ ಅಶೋಕವನದಲ್ಲಿರುವ ಸೀತೆಯ ನೋಟವನ್ನು ಇನ್ನು ಚಿತ್ರತಂಡ ರಿವೀಲ್ ಮಾಡಿಲ್ಲ.

55
ಅಬ್ಬರಿಸಿದ ರಾವಣ

ಇನ್ನು ಈ ಚಿತ್ರದಲ್ಲಿ ರಾವಣನಾಗಿ ಕನ್ನಡದ ನಟ ಯಶ್ ನಟಿಸಿದ್ದರು. ಟ್ರೈಲರ್ ಆರಂಭ ಮತ್ತು ಕೊನೆ ಯುಶ್ ಅವರಿಂದಲೇ ಕೊನೆಯಾಗುತ್ತದೆ. ಘರ್ಜಿಸುತ್ತಿರುವ ಸಿಂಹವನ್ನ ಪಳಗಿಸುತ್ತಿರುವ ದೃಶ್ಯ ಅದ್ಭುತವಾಗಿ ಮೂಡಿಬಂದಿದೆ. ಇನ್ನುಳಿದಂತೆ ರಾಮನಾಗಿ ರಣ್‌ಬೀರ್ ಕಪೂರ್ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories