ಯಶ್, ರಣ್‌ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಚಿತ್ರದ ಟ್ರೈಲರ್ ಬ್ರಾಹ್ಮೀ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ರಾವಣನಾಗಿ ಯಶ್, ರಾಮನಾಗಿ ರಣ್‌ಬೀರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದು, ಈ ಟ್ರೈಲರ್ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ರಾಕಿಂಗ್ ಸ್ಟಾರ್ ಯಶ್, ರಣ್‌ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ಜುಲೈ 24 ಕ್ಕೆ ರಿಲೀಸ್ ಆಗಬೇಕಿದ್ದ ರಾಮಾಯಣ ಟ್ರೈಲರ್ ದಿನಾಂಕವನ್ನು ಚಿತ್ರತಂಡ ಕೊನೆ ಗಳಿಗೆಯಲ್ಲಿ ಮುಂದೂಡಿಕೆ ಮಾಡಲಾಗಿತ್ತು.
25
ಬ್ರಾಹ್ಮೀ ಮುಹೂರ್ತದಲ್ಲಿ ಬಿಡುಗಡೆ
ಇಂದು ಬೆಳಗ್ಗೆ 4.15ರ ಬ್ರಾಹ್ಮೀ ಮುಹೂರ್ತದಲ್ಲಿ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದೆ. ಸಿನಿಮಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಳಗಿನ ಜಾವ ಟ್ರೈಲರ್ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಸಿನಿಪ್ರಿಯರು ನಸುಕಿನಲ್ಲೇ ಇದನ್ನು ಕಣ್ತುಂಬಿಕೊಂಡಿದ್ದಾರೆ. ಬಿಡುಗಡೆಯಾದ ಕ್ಷಣದಿಂದಲೇ ರಾಮಾಯಾಣ ಟ್ರೈಲರ್ ಸಂಚಲನ ಮೂಡಿಸಿದ್ದು, ನಾಲ್ಕು ನಿಮಿಷದ ಕ್ಲಿಪ್ ನೋಡುಗರಿಗೆ ಅದ್ಭುತವಾದ ಅನುಭವ ನೀಡುತ್ತಿದೆ
35
ರಾವಣನಾಗಿ ಯಶ್ ಆರ್ಭಟ
ಈ ಚಿತ್ರದಲ್ಲಿ ಕನ್ನಡದ ನಟ ಯಶ್ ರಾವಣನಾಗಿ ಆರ್ಭಟಿಸಿದ್ದು, ನಮಿತ್ ಮಲ್ಹೋತ್ರಾ ಜೊತೆಗೆ ಚಿತ್ರಕ್ಕೆ ಸ್ವತಃ ಬಂಡವಾಳವನ್ನೂ ಹೂಡಿದ್ದಾರೆ. ರಾವಣನಾಗಿ ನಟ ಯಶ್ ಅಕ್ಷರಶಃ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ಸೌಮ್ಯ ಮತ್ತು ಮಂದಸ್ಮಿತನಾಗಿ ರಣ್‌ಬೀರ್ ಕಪೂರ್ ಕಾಣಿಸಿಕೊಂಡಿದ್ರೆ, ತಾಯಿ ಸೀತಾದೇವಿ ರೂಪದಲ್ಲಿ ನಟಿ ಸಾಯಿ ಪಲ್ಲವಿಯನ್ನು ನೋಡುವುದೇ ಚೆಂದ.
ಎಆರ್ ರೆಹಮಾನ್ ಸಂಗೀತ ಚಿತ್ರದ ಪ್ರತಿಯೊಂದು ದೃಶ್ಯದ ಭಾವನೆಯನ್ನು ನೋಡುಗರಲ್ಲಿ ಜಾಗೃತಗೊಳಿಸುವಂತಿದೆ. ಯಶ್ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಾವಣ ಅಂದ್ರೆ ಹೀಗೆಯೇ ಇದ್ರಾ ಎಂಬಂತೆ ನಟಿಸಿದ್ದಾರೆ. ಇನ್ನುಳಿದಂತೆ ಚಿತ್ರದ ಬಹುತೇಕ ಪಾತ್ರಗಳ ಪರಿಚಯವನ್ನ ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಈ ಹಿಂದೆ ಬಂದಂತಹ ರಾಮಯಾಣ ಕಥೆ ಆಧರಿತ ಚಿತ್ರಗಳಿಗಿಂತಲೂ ಇದು ಸಂಪೂರ್ಣ ಭಿನ್ನ ಎಂಬುದನ್ನು ಟ್ರೈಲರ್ ಹೇಳುತ್ತಿದೆ.
55
4 ಸಾವಿರ ಕೋಟಿ ಬಜೆಟ್
ಲಕ್ಷ್ಮಣನಾಗಿ ರವಿ ದುಬೆ, ಹನುಮನಾಗಿ ಸನ್ನಿ ದಿಯೋಲ್, ಶೂರ್ಪನಕಿಯಾಗಿ ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಹಲವು ಕಲಾವಿದರನ್ನು ಟ್ರೈಲರ್‌ನಲ್ಲಿ ನೋಡಬಹುದಾಗಿದೆ. ನಿತೀಶ್ ತಿವಾರಿ ನಿರ್ದೇಶನದ ಈ ಬೃಹತ್ ರಾಮಾಯಣ ಚಿತ್ರವು ಬರೋಬ್ಬರಿ 4 ಸಾವಿರ ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ.'ರಾಮಾಯಣ ಪಾರ್ಟ್ 1' ಮುಂಬರುವ ದೀಪಾವಳಿ ಹಬ್ಬದ ಶುಭಸಮಯದಲ್ಲಿ ಬೆಳ್ಳಿಪರದೆಗೆ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.