Naa Ninna Bidalaare ದುರ್ಗಾಗೆ ಇದೇನಾಯ್ತು? ರಕ್ತಸಿಕ್ತ ನಟಿ ರಿಷಿಕಾ ನೋಡಿ ಫ್ಯಾನ್ಸ್​ ಶಾಕ್​...

Published : Aug 22, 2025, 05:55 PM IST

ನಾ ನಿನ್ನ ಬಿಡಲಾರೆ ಸೀರಿಯಲ್​ ದುರ್ಗಾಗೆ ಇದೇನಾಯ್ತು? ಆಸ್ಪತ್ರೆ ವಿಡಿಯೋ ಶೇರ್​ ಮಾಡಿ ಶಾಕ್​ ಕೊಟ್ಟ ನಟಿ, ನಿಜಕ್ಕೂ ಆಗಿದ್ದೇನು, ಇಲ್ಲಿದೆ ಡಿಟೇಲ್ಸ್​.... 

PREV
17
ಎಡವಟ್ಟು ದುರ್ಗಾ ಈಕೆ...

ಎಡವಟ್ಟು ದುರ್ಗಾ ಎಂದರೆ, ಸೀರಿಯಲ್​ ಪ್ರೇಮಿಗಳಿಗೆ ಮೊದಲು ನೆನಪಾಗೋದು ನಾನಿನ್ನ ಬಿಡಲಾರೆಯ ದುರ್ಗಾ. ಹೌದು. ಈಕೆ ಮಾಡೊದೆಲ್ಲಾ ಎಡವಟ್ಟೇ. ಆದರೂ ಸೌಮ್ಯ ಸ್ವಭಾವ ಇನ್ನೂ ಚಿಕ್ಕಮಕ್ಕಳ ಮುಗ್ಧತೆ ಇರುವ ಯುವತಿ ದುರ್ಗಾ. ಆತ್ಮದ ಜೊತೆ ಮಾತನಾಡುವ ಶಕ್ತಿ ಇರುವ ಏಕೈಕ ನಟಿ ಈಕೆ!

27
ಆತ್ಮಗಳ ಜೊತೆ ಮಾತನಾಡಲ್ಲ ನಟಿ

ಅಂದಹಾಗೆ, ಈಕೆ ನಿಜ ಜೀವನದಲ್ಲಿ ಆತ್ಮಗಳ ಜೊತೆ ಮಾತನಾಡಲ್ಲ, ಬದಲಿಗೆ ನಾನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ಸತ್ತುಹೋಗಿರೋ ಅಂಬಿಕಾ ಇವಳಿಗೆ ಕಾಣಿಸುತ್ತಿದ್ದಾಳೆ. ಆಕೆ ಸತ್ತು ಹೋಗಿದ್ದಾಳೆ ಎನ್ನುವುದು ದುರ್ಗಾಗೆ ಗೊತ್ತಿಲ್ಲ. ಅಷ್ಟಕ್ಕೂ ಅವಳು ಯಾರು ಎನ್ನೋದೇ ಗೊತ್ತಿಲ್ಲ. ಆದರೂ ಇಬ್ಬರೂ ಫ್ರೆಂಡ್ಸ್​ ಆಗಿದ್ದಾರೆ. ಅಂಬಿಕಾಗೋ ದುರ್ಗಾ ಮೇಲೆ ಇನ್ನಿಲ್ಲದ ಪ್ರೀತಿ. ತನ್ನ ಗಂಡನನ್ನೇ ದುರ್ಗಾಗೆ ಮದ್ವೆ ಮಾಡಿಸೋ ಪ್ಲ್ಯಾನ್​ ಈ ಅಂಬಿಕಾ ಎನ್ನೋ ಆತ್ಮದ್ದು. ಇದು ಕ್ಯೂಟ್​ ಆತ್ಮ ಎಂದೇ ಫೇಮಸ್ಸು.

37
ಆಸ್ಪತ್ರೆಗೆ ಅಡ್ಮಿಟ್​ ಆಗಿರೋ ಪೋಸ್ಟ್​

ಇದೀಗ ನಟಿ ಸೋಷಿಯಲ್​ ಮೀಡಿಯಾದಲ್ಲಿ ಆಸ್ಪತ್ರೆಗೆ ಅಡ್ಮಿಟ್​ ಆಗಿರೋ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ಅವರು ರ*ಕ್ತಸಿಕ್ತ ಆಗಿರೋದನ್ನು ನೋಡಬಹುದು. ಇದನ್ನು ನೋಡಿ ಫ್ಯಾನ್ಸ್​ ಅರೆಕ್ಷಣ ಶಾಕ್​ಗೆ ಒಳಗಾಗುವುದಂತೂ ಗ್ಯಾರೆಂಟಿ.

47
ಸೀರಿಯಲ್​​ ಶೂಟಿಂಗ್

ಆದರೆ, ನಟಿ ನಗುಮೊಗದಿಂದಲೇ ಇದ್ದಾರೆ. ಅದನ್ನು ಕ್ಲಿಕ್​ ಮಾಡಿದರೆ ತಿಳಿಯುತ್ತದೆ, ಇದು ಸೀರಿಯಲ್​​ ಶೂಟಿಂಗ್​ ಎನ್ನುವುದು. ನಾ ನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ದುರ್ಗಾಗೆ ಅಪಘಾತವಾಗಿದ್ದ ಸಂದರ್ಭದಲ್ಲಿ ನಡೆದ ಶೂಟಿಂಗ್​ ಇದು. ಅದರ ಮೇಕಿಂಗ್​ ವಿಡಿಯೋ ಅನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ.

57
ದುರ್ಗಾ ಅರ್ಥಾತ್​ ರಿಷಿಕಾ

ಇನ್ನು ದುರ್ಗಾ ಅರ್ಥಾತ್​ ರಿಷಿಕಾ ಕುರಿತು ಹೇಳುವುದಾದರೆ, ರಿಷಿಕಾಗೆ ನಾ ನಿನ್ನ ಬಿಡಲಾರೆ ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಮೊದಲ ಸೀರಿಯಲ್​ನಲ್ಲಿ ಸೈಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾದಾನ' ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.

67
ನಾ ನಿನ್ನ ಬಿಡಲಾರೆ ಸೀರಿಯಲ್​

ನಾ ನಿನ್ನ ಬಿಡಲಾರೆ ಸೀರಿಯಲ್​ ಕುರಿತು ಹೇಳುವುದಾದರೆ, ಶರತ್​ ಕಂಪೆನಿಯಲ್ಲಿ ಕೆಲಸ ಮಾಡುವ ಎಡವಟ್ಟು ದುರ್ಗಾ ತುಂಬಾ ಒಳ್ಳೆಯ ಸ್ವಭಾವದವಳಾಗಿದ್ದು, ಆಕೆಯನ್ನು ತನ್ನ ಪತಿಯ ಜೊತೆ ಮದ್ವೆ ಮಾಡಿಸಬೇಕು ಎನ್ನುವ ಆಸೆ ಅಂಬಿಕಾಗೆ. ಅವಳು ತಾನು ಯಾರೆಂದು ಹೇಳದೇ ದುರ್ಗಾಗೆ ಮಾತ್ರ ಕಾಣಿಸಿಕೊಂಡು ಫ್ರೆಂಡ್​ ಆಗಿದ್ದಾಳೆ. ಆದರೆ ಆಕೆಯ ಎಡವಟ್ಟಿನಿಂದ ಶರತ್​ಗೆ ಆಕೆಯನ್ನು ಕಂಡ್ರೆ ಇನ್ನಿಲ್ಲದ ಕೋಪ. ಆದರೆ ಅದೇ ಕೋಪ ಇದೀಗ ಗೊತ್ತಿಲ್ಲದೇ ಪ್ರೀತಿಯಾಗಿಯೂ ತಿರುಗಿದೆ.

77
ಶರತ್​ ಮದುವೆ ಮಾಯಾ ಜೊತೆ ಫಿಕ್ಸ್​ ಆ

ಆದರೆ ಅದು ಪ್ರೀತಿ ಎನ್ನುವುದು ಇಬ್ಬರಿಗೂ ತಿಳಿದಿಲ್ಲ. ಶರತ್​ ಮದುವೆ ಮಾಯಾ ಜೊತೆ ಫಿಕ್ಸ್​ ಆಗಿದೆ. ಆದರೆ ಅದನ್ನು ತಪ್ಪಿಸಲು ಶರತ್​ ಮಗಳು ಹಿತಾ, ಅಂಬಿಕಾ ಸೇರಿದಂತೆ ಹಲವರು ಪ್ರಯತ್ನಿಸುತ್ತಿದ್ದಾರೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ. ನಾಯಕ ಶರತ್​ ಪಾತ್ರದಲ್ಲಿ ಶರತ್ ಪದ್ಮನಾಭ್ ಕಾಣಿಸಿಕೊಂಡಿದ್ದರೆ, ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿದ್ದ ನೀತಾ ಅಶೋಕ್, ಅಂಬಿಕಾ ಪಾತ್ರದಲ್ಲಿದ್ದಾರೆ. ದುರ್ಗಾಗಳಾಗಿ ರಿಷಿಕಾ ಹಾಗೂ ವಿಲನ್​ ಆಗಿ ರುಹಾನಿ ಶೆಟ್ಟಿ ನಟಿಸುತ್ತಿದ್ದಾರೆ.

Read more Photos on
click me!

Recommended Stories