Lakshmi Baramma Serial ನಟಿ ರಶ್ಮಿ ಪ್ರಭಾಕರ್‌ ಅದ್ದೂರಿ ಸೀಮಂತದಲ್ಲಿ ಭಾಗಿಯಾದ ಸೆಲೆಬ್ರಿಟಿಗಳು; PHOTOS

Published : Aug 22, 2025, 05:21 PM IST

Rashmi Prabhakar Seemantha Photos: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದ ಮೂಲಕ ಜನರಿಗೆ ಹತ್ತಿರ ಆಗಿರೋ ಕನ್ನಡ ನಟಿ ರಶ್ಮಿ ಪ್ರಭಾಕರ್‌ ಅವರು ಸೀಮಂತದ ಖುಷಿಯಲ್ಲಿದ್ದಾರೆ. ಅವರ ಕುಟುಂಬಕ್ಕೆ ಇನ್ನೋರ್ವ ಸದಸ್ಯರ ಆಗಮನವಾಗಲಿದೆ. 

PREV
15

ಬಹಳ ಖುಷಿಯಿಂದ ಗ್ರ್ಯಾಂಡ್‌ ಆಗಿ ರಶ್ಮಿ ಪ್ರಭಾಕರ್‌ ಅವರು ( Rashmi Prabhakar ) ಸೀಮಂತವನ್ನು ಆಚರಿಸಿಕೊಂಡಿದ್ದಾರೆ. ಈ ಸೀಮಂತದಲ್ಲಿ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದ ನಟ-ನಟಿಯರು ಕೂಡ ಆಗಮಿಸಿದ್ದರು.

25

ರಶ್ಮಿ ಪ್ರಭಾಕರ್‌ ಅವರು ಲವ್‌ ಮ್ಯಾರೇಜ್‌ ಆಗಿದ್ದರು. ನಿಖಿಲ್‌ ಅವರ ಜೊತೆ ಇವರ ಮದುವೆ ನಡೆದಿದೆ. ಖಾಸಗಿ ವಾಹಿನಿಯಲ್ಲಿ ನಿಖಿಲ್‌, ರಶ್ಮಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಇವರ ಸ್ನೇಹ ಶುರುವಾಗಿ, ಪ್ರೀತಿಯಾಗಿ ತಿರುಗಿತ್ತು. ಕುಟುಂಬಸ್ಥರ ಒಪ್ಪಿಗೆ ಪಡೆದು ಇವರು ಮದುವೆಯಾಗಿದ್ದರು. 2022ರಲ್ಲಿ ಬೆಂಗಳೂರಿನ ಕಲ್ಯಾಣಮಂಟಪದಲ್ಲಿ ಇವರ ಮದುವೆ ನಡೆದಿತ್ತು.

35

ನಟಿ ಅನುಮಮಾ ಗೌಡ, ಇಷಿತಾ ವರ್ಷ, ಹರ್ಷಿತಾ ವೆಂಕಟೇಶ್‌, ನಯನಾ ಕೆಎಂ, ತನಿಷಾ ಕುಪ್ಪಂಡ ಮುಂತಾದವರು ಕೂಡ ಸೀಮಂತದಲ್ಲಿ ಭಾಗವಹಿಸಿ, ರಶ್ಮಿ ದಂಪತಿಗೆ ಶುಭ ಹಾರೈಸಿದ್ದಾರೆ.

45

ರಶ್ಮಿ ಪ್ರಭಾಕರ್‌ ಅವರು ʼಮನೆಸೆಲ್ಲಾ ನೀನೆʼ, ʼಜೀವನ ಚೈತ್ರʼ, ʼಶುಭ ವಿವಾಹʼ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಶ್ಮಿ ಅವರ ವೈಯಕ್ತಿಕ, ವೃತ್ತಿ ಜೀವನಕ್ಕೆ ನಿಖಿಲ್‌ ಬೆಂಬಲ ನೀಡುತ್ತ ಬಂದಿದ್ದರು. ಆರು ವರ್ಷಗಳಿಗೂ ಅಧಿಕ ಕಾಲ ಪ್ರೀತಿಸಿ ಮದುವೆಯಾಗಿದ್ದರು.

55

ರಶ್ಮಿ ಪ್ರಭಾಕರ್‌ ಅವರು ಕನ್ನಡದ ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಹಾಗೆಯೇ ಭರತನಾಟ್ಯ ತರಗತಿಯನ್ನು ಹೇಳಿಕೊಡುತ್ತಾರೆ. ಒಟ್ಟಿನಲ್ಲಿ ಅವರು ಚಿತ್ರರಂಗದಲ್ಲಿಯೂ ಆಕ್ಟಿವ್‌ ಆಗಿದ್ದಾರೆ.

Read more Photos on
click me!

Recommended Stories