ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಟಿಯಾಗಿ ಹಾಗೂ ನಿರೂಪಕಿಯಾಗಿ ಜನಪ್ರಿಯತೆ ಪಡೆದ ಕೊಡಗಿನ ಸುಂದರಿ ಶ್ವೇತಾ ಚಂಗಪ್ಪ. ಆದರೆ ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ನಟಿ ಕಾಣಿಸಿಕೊಂಡೇ ಇಲ್ಲ.
28
ಆರಂಭದಲ್ಲಿ ನಟಿಯಾಗಿ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಶ್ವೇತಾ ಚಂಗಪ್ಪ ಸುಮತಿ, ಕಾದಂಬರಿ, ಅರುಂಧತಿ, ಸುಕನ್ಯಾ, ಸೌಂದರ್ಯ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ನಂತರ ವರ್ಷ, ತಂಗಿಗಾಗಿ ಸಿನಿಮಾದಲ್ಲೂ ನಟಿಸಿದ್ದರು. ನಂತರ ಸಿನಿಮಾದಿಂದ ದೂರ ಉಳಿದು ನಿರೂಪಣೆಯಲ್ಲಿ ಬ್ಯುಸಿಯಾಗಿದ್ದರು ಶ್ವೇತಾ.
38
ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ ಮೂಲಕ ನಿರೂಪಣೆ ಶುರುಮಾಡಿದ ಶ್ವೇತಾ, ನಂತರ ಹಿಂದಿರುಗಿ ನೋಡಿಯೇ ಇಲ್ಲ. ಅಲ್ಲಿಂದ ಮುಂದೆ, ಕುಣಿಯೋಣ ಬಾರಾ, ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ನ್, ಜೋಡಿ ನಂ 1, ಛೋಟಾ ಚಾಂಪಿಯನ್, ಸೂಪರ್ ಕ್ವೀನ್ ವರೆಗೂ ಹಲವಾರು ರಿಯಾಲಿಟಿ ಶೋಗಳಿಗೆ ನಿರೂಪಣೆ ಮಾಡಿದ್ದಾರೆ.
ಶ್ವೇತಾ ಕೊನೆಯದಾಗಿ ಝೀ ಕನ್ನಡದ ಕಾಮಿಡಿ ಕಿಲಾಡೀಗಳು ಪ್ರೀಮಿಯರ್ ಲೀಗ್ ನಲ್ಲಿ ಒಂದು ತಂಡದ ಮೆಂಟರ್ ಆಗಿ ಕಾಣಿಸಿಕೊಂಡಿದ್ದರು. ಆದಾದ ಬಳಿಕ ಶ್ವೇತಾ ಕನ್ನಡ ಕಿರುತೆರೆಯಲಿ ಕಾಣಿಸಿಕೊಳ್ಳಲೇ ಇಲ್ಲ. ಯಾಕೆ ನಿರೂಪಣೆಯಿಂದ ದೂರ ಸರೆದರು ಶ್ವೇತಾ.
58
ಶ್ವೇತಾ ಚೆಂಗಪ್ಪ ಇದುವರೆಗೆ ಆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶ್ವೇತಾ, ತಮ್ಮ ಊರು, ಮನೆ, ವರಮಹಾಲಕ್ಷ್ಮೀ ಪೂಜೆ ಹಾಗೂ ಟ್ರಾವೆಲ್ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
68
ಇದೀಗ ಹೊಸದಾಗಿ ಥೈಲ್ಯಾಂಡ್ ಫೋಟೊಗಳನ್ನು ಶೇರ್ ಮಾಡಿರುವ ಶ್ವೇತಾ, ಅಲ್ಲಿ ಬೋಟಿಂಗ್ ಎಂಜಾಯ್ ಮಾಡ್ತಿರೋದು ಕಾಣಬಹುದು. ಬ್ಲೂ ಟ್ಯೂಬ್ ಟಾಪ್ ಮತ್ತು ಪ್ಯಾಂಟ್ ಧರಿಸಿರುವ ನಟಿಯನ್ನು ನೋಡಿದ್ರೆ ಒಂದು ಮಗುವಿನ ಅಮ್ಮ ಎಂದು ಯಾರೂ ಹೇಳೊದಕ್ಕೆ ಸಾಧ್ಯ ಇಲ್ಲ.
78
ಸಂತೂರ್ ಮಮ್ಮಿ ಅಂತಾನೆ ಫೇಮಸ್ ಆಗಿರುವ ಶ್ವೇತಾ ಚಂಗಪ್ಪ ತಮ್ಮ ಫೋಟೊಗಳ ಜೊತೆಗೆ ಬ್ಯೂಟಿಫುಲ್ ತಾಣ, ಬ್ಯೂಟಿಫುಲ್ ಫೋಟೊಗಳು, ಬ್ಯೂಟಿಫುಲ್ ಮಿ ಮತ್ತು ಹ್ಯಾಪಿ ಮಿ ಎನ್ನುತ್ತಾ, ಇದಕ್ಕೆ ಕಾರಣ ಏನು ಎಂದು ತಿಳಿಯಲು ಬಯಸುತ್ತೀರಾ? ಗೆಸ್ ಮಾಡಿ… ಸದ್ಯದಲ್ಲಿ ಖುಷಿ ವಿಚಾರ ತಿಳಿಸುತ್ತೇನೆ ಎಂದಿದ್ದಾರೆ.
88
ಜನ ಕ್ಯಾಪ್ಶನ್ ನೋಡಿದ್ದಾರೋ ಗೊತ್ತಿಲ್ಲ ಆದರೆ, ಶ್ವೇತಾ ಚಂಗಪ್ಪ ಫೋಟೊ ನೋಡಿ ಎವರ್ ಗ್ರೀನ್ ಬ್ಯೂಟಿ, ಸುಂದರಿ, ಸಂತೂರ್ ಮಮ್ಮಿ, ನಿಮ್ಮ ಸೌಂದರ್ಯದ ರಹಸ್ಯ ಹೇಳಿ ಎಂದೆಲ್ಲಾ ಕಾಮೆಂಟ್ ಮಾಡಿ ನಟಿಯ ಅಂದವನ್ನು ಹೊಗಳಿದ್ದಾರೆ.