80-90ರ ದಶಕದ ಜನಪ್ರಿಯ ನಟಿ ಮಂದಾಕಿನಿ ಅವರ ವೃತ್ತಿಜೀವನವು ದಾವೂದ್ ಇಬ್ರಾಹಿಂ ಜೊತೆಗಿನ ಒಂದು ಫೋಟೋದಿಂದಾಗಿ ಹೇಗೆ ಕುಸಿಯಿತು ಎಂಬುದನ್ನು ವಿವರಿಸಲಾಗಿದೆ. 63ನೇ ವಯಸ್ಸಿನಲ್ಲಿ ಆ ವಿವಾದಾತ್ಮಕ ಫೋಟೋ ಮತ್ತು 'ರಾಮ್ ತೇರಿ ಗಂಗಾ ಮೈಲಿ' ಚಿತ್ರದ ದೃಶ್ಯಗಳ ಹಿಂದಿನ ನೈಜ ಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ.
80-90ರ ದಶಕದ ಹಾಟ್ ನಟಿ ಮಂದಾಕಿನಿ, ಬಾಲಿವುಡ್‌ನ ಒಂದು ಕಾಲದ ಬಹು ಬೇಡಿಕೆಯ ನಟಿ. ಈಕೆಯ ಕಾಲ್‌ಶೀಟ್‌ಗಾಗಿ ಹೀರೋಗಳು, ನಿರ್ಮಾಪಕರು, ನಿರ್ದೇಶಕರು ಕೂಡ ಕಾದು ನಿಲ್ಲುತ್ತಿದ್ದರು. ಆಮೇಲೆ ವಿಧಿ ಹಾಗೂ ಕಾಲ ಈಕೆಯನ್ನು ಎಲ್ಲೆಲ್ಲಿಗೋ ಒಯ್ದು ಬಿಟ್ಟಿತು. ಈಕೆಯ ಜೀವನದಲ್ಲಿ ನಡೆದ ಪರಿವರ್ತನೆಗಳನ್ನು ನೋಡುವುದು ಕುತೂಹಲಕಾರಿ. ಮಂದಾಕಿನಿ ತನ್ನ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಒಮ್ಮೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಗೆ ಕಾಣಿಸಿಕೊಂಡರು. ಮುಂದೆ ಅದೇ ಆಕೆಯ ಕರಿಯರ್‌ಗೆ ಮುಳುವಾಯಿತು.
26
ದಾವೂದ್ ಇಬ್ರಾಹಿಂನೊಂದಿಗೆ ಥಳಕು
1994ರಲ್ಲಿ ನಡೆದ ಘಟನೆಯ ಬಳಿಕ ಮಂದಾಕಿನಿಯ ಹೆಸರು ದಾವೂದ್ ಇಬ್ರಾಹಿಂನೊಂದಿಗೆ ಸೇರಿಕೊಳ್ಳಲಾರಂಭಿಸಿತು. ಆಕೆಯ ಚಲನಚಿತ್ರ ಕರಿಯರ್ ಇಳಿಮುಖವಾಗಲು ಪ್ರಾರಂಭಿಸಿತು. ದುಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ದಾವೂದ್ ಇಬ್ರಾಹಿಂ ಜೊತೆಗಿದ್ದ ಮಂದಾಕಿನಿಯ ಚಿತ್ರಗಳು ಕಾಣಿಸಿಕೊಂಡಾಗ ಎಲ್ಲೆಡೆ ಸಂಚಲನ ಉಂಟಾಯಿತು. ದಾವೂದ್ ಜೊತೆ ಮಂದಾಕಿನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಮಾತುಗಳು ಇಂಡಸ್ಟ್ರಿಯಲ್ಲಿ ಹರಿದಾಡಿದವು. ದಾವೂದ್ ಜೊತೆ ಮಂದಾಕಿನಿ ಇರುವ ಈ ಚಿತ್ರಗಳು ಆಗ ವೈರಲ್ ಆಗಿದ್ದವು.
36
ಫೋಟೋ ಕುರಿತು ಸ್ಪಷ್ಟನೆ
ಇದೀಗ ಮಂದಾಕಿನಿ ಅವರಿಗೆ 63 ವರ್ಷ ವಯಸ್ಸು. ಇದೀಗ 1990ರ ದಶಕದಲ್ಲಿ ಸೆರೆಯಾಗಿದ್ದ ದಾವೂದ್ ಇಬ್ರಾಹಿಂ ಜೊತೆಗಿನ ಫೋಟೋ ಕುರಿತು ANI ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕ್ರಿಕೆಟ್ ಪಂದ್ಯ ವೀಕ್ಷಿಸಲು ತಮಗೆ ದಾವೂದ್ ಇಬ್ರಾಹಿಂ ಯಾವುದೇ ವೈಯಕ್ತಿಕ ಆಹ್ವಾನ ನೀಡಿರಲಿಲ್ಲ, ಬದಲಿಗೆ ತಾವು ಶೋಗೆ ದುಬೈಗೆ ತೆರಳಿದ್ದಾಗಿ ಮಂದಾಕಿನಿ ಹೇಳಿದ್ದಾರೆ. ಅಲ್ಲಿ ಅವರೂ ಬಂದಿದ್ದರು, ನಾನೂ ಹೋಗಿದ್ದೆ ವಿನಾ, ಈ ಕುರಿತು ಮೊದಲೇ ತಿಳಿದಿರಲಿಲ್ಲ. ಜನರು ಏನೆಲ್ಲಾ ಮಾತನಾಡಿಕೊಳ್ಳುತ್ತಾರೆ ಅಥವಾ ಬರೆಯುತ್ತಾರೆ ಎಂಬುದನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ. ಒಬ್ಬ ಕಲಾವಿದೆಯಾಗಿ ನಾವು ಸಾರ್ವಜನಿಕವಾಗಿ ಅನೇಕ ಜನರನ್ನು ಭೇಟಿಯಾಗಬೇಕಾಗುತ್ತದೆ ಎಂದಿದ್ದಾರೆ.
ಆ ವಿವಾದದಿಂದ ನನ್ನ ಸಿನಿಮಾರಂಗದ ಹಾದಿಗೆ ಸಾಕಷ್ಟು ಹಾನಿಯಾಯಿತು. ಅಂತಹ ಸಂದರ್ಭಗಳಲ್ಲಿ ನಮ್ಮನ್ನು ರಕ್ಷಿಸಿಕೊಳ್ಳಲು ಅಥವಾ ವದಂತಿಗಳನ್ನು ಎದುರಿಸಲು ಒಂದು ಸರಿಯಾದ ಮ್ಯಾನೇಜ್‌ಮೆಂಟ್ ತಂಡವಿರಬೇಕು ಎಂಬುದು ನನಗೆ ತಡವಾಗಿ ಅರಿವಾಯಿತು. ನಾನು ಆ ಸಮಯದಲ್ಲಿ ಎಲ್ಲೆಡೆ ಆ ವದಂತಿಗಳನ್ನು ನಿರಾಕರಿಸುತ್ತಲೇ ಇದ್ದೆ, ಎಂದು ಅವರು ನೆನಪಿಸಿಕೊಂಡಿದ್ದಾರೆ.
56
ಹಣಕಾಸಿನ ಸುಳಿವು
80ರ ದಶಕದಲ್ಲಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದ್ದ ಭೂಗತ ಲೋಕದ ಪ್ರಭಾವ ಅಥವಾ ಹಣಕಾಸಿನ ನೆರವಿನ ಬಗ್ಗೆ ತಮಗೆ ಯಾವುದೇ ಸುಳಿವಿರಲಿಲ್ಲ ಎಂದ ನಟಿ, ನಂತರ ಬಂದ ಸಿನಿಮಾಗಳನ್ನು ನೋಡಿಯೇ ನನಗೆ ಈ ವಿಷಯಗಳ ಅರಿವಾಯಿತು ಎಂದಿದ್ದಾರೆ.
66
ರಾಮ್ ತೇರಿ ಗಂಗಾ ಮೈಲಿ ವಿವಾದ
1985ರಲ್ಲಿ ರಾಜ್ ಕಪೂರ್ ನಿರ್ದೇಶನದ 'ರಾಮ್ ತೇರಿ ಗಂಗಾ ಮೈಲಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಮಂದಾಕಿನಿ, ಆ ಕಾಲದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ರಾಜ್ ಕಪೂರ್ ನಿರ್ದೇಶನದ ಈ ಚಿತ್ರವು ಭಾರಿ ಹಿಟ್ ಆಗಿತ್ತು. ಆದಾಗ್ಯೂ, ಚಿತ್ರದ ಹಲವಾರು ದೃಶ್ಯಗಳು ನಂತರ ಚರ್ಚೆ ಮತ್ತು ವಿವಾದದ ವಿಷಯವಾಯಿತು. ಮಂದಾಕಿನಿ ಅವರು ಬಿಳಿ ಸೀರೆಯಲ್ಲಿ ಚಿತ್ರೀಕರಿಸಲಾದ "ತುಜೆ ಬುಲಾಯೆನ್ ಯೇ ಮೇರಿ ಬೆಹೆನೇನ್" ಹಾಡಿನಲ್ಲಿ ಜಲಪಾತದ ದೃಶ್ಯ ಮತ್ತು ವಿವಾದಾತ್ಮಕ ಹಾಲುಣಿಸುವ ದೃಶ್ಯದ ಬಗ್ಗೆ ಮಾತನಾಡಿದರು. ಈ ದೃಶ್ಯಗಳ ಉದ್ದೇಶ ಚಿತ್ರದಲ್ಲಿ ಮುಗ್ಧತೆ ಮತ್ತು ಶುದ್ಧತೆಯನ್ನು ಚಿತ್ರಿಸುವುದು ಎಂದು ಅವರು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.