ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕ ಮಿಶ್ರ ಪ್ರತಿಕ್ರಿಯೆ ಬಂದು, ಚಿತ್ರದ ಗಳಿಕೆ ತೃಪ್ತಿದಾಯಕವಷ್ಟೇ ಎಂದಾದ ಬಳಿಕ, ಈ ಚಿತ್ರವು ಕಳಪೆಯಾಗಿ ಮೂಡಿ ಬಂದಿದ್ದಕ್ಕೆ ಯಶ್ ಅವರೇ ಕಾರಣ ಎಂದು ಪ್ರೇಕ್ಷಕರ ಒಂದು ವರ್ಗವು ದೂಷಿಸಲು ಆ ವದಂತಿಗಳೇ ಕಾರಣವಾಗಿದ್ದವು. ಆದರೆ, ಈಗ ಬಂದಿರುವ ಸುದ್ದಿ ಏನು? ನೋಡಿ..
ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ 'ಟಾಕ್ಸಿಕ್' ಸಿನಿಮಾ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದ್ದು ಗೊತ್ತೇ ಇದೆ. ಕೆಜಿಎಫ್-2 ಸಿನಿಮಾದ ಬಳಿಕ ಪ್ರಪಂಚವೇ ಎದುರು ನೋಡುತ್ತಿದ್ದ ಯಶ್ ನಟನೆಯ ಟಾಕ್ಸಿಕ್ (Toxic) ಸಿನಿಮಾ ಅಂದುಕೊಂಡಷ್ಟು ಕ್ಲಿಕ್ ಆಗಿಲ್ಲ ಅನ್ನೋ ಸಂಗತಿ ಈಗ ಗುಟ್ಟೇನೂ ಅಲ್ಲ. ಮೊದಲ ದಿನ ದಾಖಲೆ ಗಳಿಕೆ ಕಂಡಿದ್ದ ಈ ಸಿನಿಮಾ, ಸದ್ಯಕ್ಕೆ ಅಂದಾಜು 347 ಕೋಟಿ ರೂಪಾಯಿ ಗಳಿಸಿದೆ ಎಂಬ ಮಾಹಿತಿ ಇದೆ. ಅದಕ್ಕಿಂತಲೂ ಮುಖ್ಯವಾದ ಸುದ್ದಿ ಬೇರೆಯೇ ಇದೆ..
27
ಅದೇನು ಗೊತ್ತಾ? ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ- 'ನಟ ಹಾಗೂ ನಿರ್ಮಾಕರಾಗಿರುವ ಯಶ್ ಅವರು ನಿರ್ದೇಶಕಿ ಗೀತೂ ಮೋಹನ್‌ದಾಸ್ ಮಾಡಬೇಕಾದ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ' ಎಂಬ ಸುದ್ದಿ. ಹೌದು, ಆ ಸಮಯದಲ್ಲಿ ಇಂತಹ ಸುದ್ದಿಯೊಂದು ಹರಿದಾಡಿ ಹಲವರ ಹುಬ್ಬೇರಿಸಿದ್ದವರು. ಆದರೆ ಆ ಸುದ್ದಿ ಅಂದು ಹಬ್ಬಿ ಅಷ್ಟೇ ವೇಗವಾಗಿ ಮಾಯವಾಗಿತ್ತು. ಆದರೆ, ಇತ್ತೀಚೆಗೆ ಮತ್ತೆ ಆ ಸುದ್ದಿ ಹರಿದಾಡುತ್ತಿತ್ತು. ಅದಕ್ಕೀಗ ಸ್ಪಷ್ಟ ಉತ್ತರ ಸಿಕ್ಕಿದೆ.. ರಿಯಾಲಿಟಿ ಅದೇ ಚಿತ್ರದ ನಟರೊಬ್ಬರ ಮೂಲಕ ಜಗತ್ತಿಗೆ ಅನಾವರಣವಾಗಿದೆ. ಹಾಗಿದ್ದರೆ ಅವರು ಯಾರು? ಆ ನಟ ಹೇಳಿದ್ದೇನು? ಈ ಸ್ಟೋರಿ ನೋಡಿ..
37
ಹೌದು.. ಟಾಕ್ಸಿಕ್' ಚಿತ್ರವು ನಿರ್ಮಾಣ ಹಂತದಲ್ಲಿದ್ದಾಗ, ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕೆಲಸದ ಬಗ್ಗೆ ಯಶ್ ಅಸಮಾಧಾನಗೊಂಡಿದ್ದಾರೆ ಮತ್ತು ಅವರೇ ಸ್ವತಃ ಆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ (ಅಂದರೆ ತೆರೆಮರೆಯಲ್ಲಿ ಯಶ್ ನಿರ್ದೇಶನ ಮಾಡುತ್ತಿದ್ದಾರೆ) ಹಾಗೂ ಕೆಲವು ಪ್ರಮುಖ ದೃಶ್ಯಗಳನ್ನು ಮರುಚಿತ್ರೀಕರಣ ಮಾಡುತ್ತಿದ್ದಾರೆ ಎಂಬಂತಹ ಹಲವು ವದಂತಿಗಳು ಹರಿದಾಡಿದ್ದವು. ಅದನ್ನು ಕೆಲವರು ನಂಬಿದ್ದರು ಕೆಲವರು ತಳ್ಳಿಹಾಕಿದ್ದರು.
ಆದರೆ, ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕ ಮಿಶ್ರ ಪ್ರತಿಕ್ರಿಯೆ ಬಂದು, ಚಿತ್ರದ ಗಳಿಕೆ ಕೂಡ ಅಷ್ಟೇನೂ ತೃಪ್ತಿದಾಯಕ ಆಗದ ಬಳಿಕ, ಈ ಚಿತ್ರವು ಕಳಪೆಯಾಗಿ ಮೂಡಿ ಬಂದಿದ್ದಕ್ಕೆ ಯಶ್ ಅವರೇ ಕಾರಣ ಎಂದು ಪ್ರೇಕ್ಷಕರ ಒಂದು ವರ್ಗವು ದೂಷಿಸಲು ಆ ವದಂತಿಗಳೇ ಕಾರಣವಾಗಿದ್ದವು. ಆದರೆ, ಆ ವದಂತಿಗೆ, ಹರದಾಡುತ್ತಿದ್ದ ಸುದ್ದಿಗೆ ಈಗ ಒಂದು ಕ್ಲಾರಿಟಿ ಸಿಕ್ಕಿದೆ. ಅದನ್ನು ಕೊಟ್ಟಿದ್ದು ಬೇರೆ ಯಾರೂ ಅಲ್ಲ, ಸ್ವತಃ ಅದೇ ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್!
57
'ನಿರ್ದೇಶಕಿ ಗೀತೂ ಮೋಹನ್‌ದಾಸ್ ಕೆಲಸದಲ್ಲಿ ನಟ-ನಿರ್ಮಾಪಕ ಯಶ್ ಹಸ್ತಕ್ಷೇಪ ಮಾಡಲಿಲ್ಲ. ನಟನ ಕೆಲಸವನ್ನಷ್ಟೇ ಯಶ್ ಮಾಡುತ್ತಿದ್ದರು, ನಿರ್ದೇಶನದ ಕೆಲಸವನ್ನು ನಿರ್ದೇಶಕಿಗೆ ಬಿಟ್ಟಿದ್ದರು' ಎಂದು ನಟ ವಿವೇಕ್ ಒಬೆರಾಯ್ ಹೇಳಿದ್ದಾರೆ ಎಂಬ ಮಾತು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
67
ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹಲವು ಮಂದಿ 'ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ' ಎಂದು ಹಲವರು ಕಾಮೆಂಟ್ಮಾಡುತ್ತಿದ್ದಾರೆ. ಅದಕ್ಕೆ ಕೆಲವರು, 'ಹೌದು' ಕೆಲವಕ್ಕೆ ಕಾಲ ಸ್ವಲ್ಪ ಲೇಟ್ ಆಗಿ ಉತ್ತರ ಕೊಡುತ್ತದೆ' ಎಂದು ಹೇಳಿದ್ದರೆ ಇನ್ನೂ ಕೆಲವರು, 'ಹೌದು ಹೌದು, ಎಲ್ಲ ಸಂಗತಿಗಳಿಗೂ ಕಾಲ ಒಂದಲ್ಲ ಒಂದು ದಿನ ಉತ್ತರ ಕೊಡುತ್ತದೆ, ಕಾಯುತ್ತಿರಿ' ಎಂದು ಪ್ರತ್ಯುತ್ತರ ಕೊಡುತ್ತಿದ್ದಾರೆ.
77
ಅಂದಹಾಗೆ, ಬಾಕ್ಸ್ ಆಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯ ಪ್ರಕಾರ, 26 ಆಗಸ್ಟ್ 2026 ರಂದು ತೆರೆಕಂಡ ಟಾಕ್ಸಿಕ್ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಈವರೆಗೆ ₹333.45 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಆದರೆ, ಕೆಲವು ವರದಿಗಳು ಟಾಕ್ಸಿಕ್ ಸಿನಿಮಾದ ಗಳಿಕೆ 341.39 ಕೋಟಿ ರೂ. ಎನ್ನುತ್ತಿವೆ.
ಟಾಕ್ಸಿಕ್ ಸಿನಿಮಾ ಸದ್ಯ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ಸೆಪ್ಟೆಂಬರ್ 25ರಂದು ಜೀ5 (ZEE5) ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ನಿರ್ಮಾಪಕರ ಕಡೆಯಿಂದ ಇನ್ನೂ ಈ ಚಿತ್ರದ ಗಳಿಕೆ ಬಗ್ಗೆ ಯಾವುದೇ ಅಧಿಕೃತ ಬಹಿರಂಗ ಹೇಳಿಕೆ ಬಂದಿಲ್ಲ ಎಂಬುದನ್ನು ಗಮನಿಸಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.