ಭೂಮಿಕಾ ಜೊತೆ ಮಲ್ಲಿ! ಅಪ್ಪ-ಮಗನ ಸಮ್ಮಿಲನ: ಒಂದೇ ಸಲಕ್ಕೆ ಅಬ್ಬಬ್ಬಾ Amruthadhaare ಎಷ್ಟೊಂದು ಟ್ವಿಸ್ಟ್​?

Published : Sep 12, 2025, 01:25 PM IST

ಶಕುಂತಲಾ ಮಾಡಿರುವ ಮೋಸ ತಿಳಿದು ಗೌತಮ್​ ಮನೆ ಬಿಟ್ಟು ಹೋಗಿದ್ದಾನೆ. ಭೂಮಿಕಾ ಕೊಡಗಿನಲ್ಲಿ ಟೀಚರ್​ ಆಗಿ ಕೆಲಸ ಮಾಡುತ್ತಿದ್ದಾಳೆ. ಆದರೆ ಭೂಮಿಕಾ ಮನೆಯಲ್ಲಿ ಮಲ್ಲಿ ಇರುವುದು ಕುತೂಹಲ ಮೂಡಿಸಿದೆ. ಅಪ್ಪ-ಮಗನ ಮಿಲನವೂ ಆಗಿದೆ. 

PREV
17
ಊಹಿಸಲಾಗದ ತಿರುವು

ಸಾಮಾನ್ಯವಾಗಿ ಸೀರಿಯಲ್​ ಎಂದರೆ ಹೀಗೆಯೇ ಆಗುತ್ತದೆ ಎಂದು ಊಹಿಸಿಕೊಂಡು ಬಿಡಬಹುದು. ಒಂದಿಷ್ಟು ಎಪಿಸೋಡ್​ ಆಗುತ್ತಿದ್ದಂತೆಯೇ ಮುಂದೆ ಹೀಗೆಯೇ ಆಗುತ್ತದೆ ಎಂದು ವೀಕ್ಷಕರು ಅಂದುಕೊಳ್ಳುತ್ತಾರೆ. 80% ಅದು ಹಾಗೆಯೇ ಆಗಿರುತ್ತದೆ. ವಿಲನ್​ ಬಂಡವಾಳ ಗೊತ್ತಾಗುತ್ತಿದ್ದಂತೆಯೇ ಅಲ್ಲಿ ಸೀರಿಯಲ್​ ದಿ ಎಂಡ್​! ಆದರೆ ಅಮೃತಧಾರೆ (Amruthadhaare) ಮಾತ್ರ ಯಾವ ವೀಕ್ಷಕರು ಅಂದುಕೊಳ್ಳದ ರೀತಿಯಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ.

27
ಮನೆ ಬಿಟ್ಟು ಹೋದ ಭೂಮಿಕಾ

ಶಕುಂತಲಾ ಮಾಡಿರುವ ಮೋಸ ತಿಳಿದು ಗೌತಮ್​ ಪತ್ನಿಯನ್ನು ಅರಸಿ ಮನೆ ಬಿಟ್ಟು ಹೋಗಿದ್ದಾಳೆ. ಅತ್ತ ಮಗುವಿನ ಬಗ್ಗೆ ಸುಳ್ಳು ಹೇಳಿದ ಕಾರಣ ಮನನೊಂದ ಭೂಮಿಕಾ ಕೊಡಗಿನಲ್ಲಿ ಟೀಚರ್​ ಆಗಿ ಕೆಲಸಕ್ಕೆ ಸೇರಿದ್ದಾಳೆ. ಆದರೆ ಇನ್ನೊಂದು ಕುತೂಹಲ ಎಂದರೆ ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಭೂಮಿಕಾ ಮನೆಯಲ್ಲಿಯೇ ಮಲ್ಲಿ ಇರುವುದನ್ನು ನೋಡಬಹುದು. ಅಲ್ಲಿಗೆ ಮಲ್ಲಿ ಕೂಡ ಭೂಮಿಕಾಳನ್ನು ಹುಡುಕಿ ಅವರ ಮನೆಯಲ್ಲಿ ಇರುವುದು ತಿಳಿದಿದೆ. ಇದನ್ನು ನೋಡಿ ಸೋಷಿಯಲ್​ ಮೀಡಿಯಾದಲ್ಲಿ ಖುಷಿಯ ಸುರಿಮಳೆಯೇ ಆಗುತ್ತಿದೆ.

37
ಆಕಾಶ್​ ನೋಡಿಕೊಳ್ತಿರೋ ಮಲ್ಲಿ

ಅದೇ ಇನ್ನೊಂದೆಡೆ ಮಲ್ಲಿ ಭೂಮಿಕಾ ಮತ್ತು ಗೌತಮ್​ ಪುತ್ರ ಆಕಾಶ್​ನನ್ನು ನೋಡಿಕೊಳ್ಳುತ್ತಿರುವುದು ತಿಳಿಯುತ್ತದೆ. ಆಕಾಶ್​ ಈಗ ಐದು ವರ್ಷದ ಬಾಲಕನಾಗಿದ್ದಾನೆ. (ಈ ಬಾಲಕನ ಪಾತ್ರ ಮಾಡ್ತಿರೋದು ಅಮೃತಧಾರೆ ಆನಂದ್​ ರಿಯಲ್​ ಪುತ್ರ). ಮಲ್ಲಿ ಮತ್ತು ಆಕಾಶ್​ ಸೇರಿ ಭೂಮಿಕಾಳನ್ನು ಫೂಲ್​ ಮಾಡುವ ತಮಾಷೆಯನ್ನೂ ಈ ಪ್ರೊಮೋದಲ್ಲಿ ನೋಡಬಹುದಾಗಿದೆ.

47
ಚಾಲಕನಾದ ಗೌತಮ್​

ಅದೇ ಇನ್ನೊಂದೆಡೆ, ಎಲ್ಲಾ ಆಸ್ತಿಯನ್ನೂ ಶಕುಂತಲಾ, ಜೈದೇವ್​ಗೆ ಬಿಟ್ಟುಕೊಟ್ಟ ಗೌತಮ್​ ಚಾಲಕನಾಗಿ ಕೆಲಸಕ್ಕೆ ಸೇರಿದ್ದಾನೆ. ಅವನ ಕಾರಿಗೆ ಆಕಾಶ್​ ಅಡ್ಡ ಬಂದಿದ್ದಾನೆ. ಗೌತಮ್​ ಅವನನ್ನು ಗದರಿದಾಗ, ಆಕಾಶ್​ ನಾನೇನೋ ಚಿಕ್ಕ ಬಾಲಕ, ನೀವು ನೋಡಿ ಗಾಡಿ ಓಡಿಸಬಾರದೆ ಎಂದು ಪ್ರಶ್ನಿಸಿದ್ದಾನೆ.

57
ಅಪ್ಪ-ಮಗ ಮೀಟ್​

ಹೀಗೆ ಅಪ್ಪ-ಮಗನ ಮಿಲನ ಆಗಿದೆ. ಗೌತಮ್​ ತನ್ನ ಮಗ ಎನ್ನುವುದನ್ನು ಅರಿಯದೇ ಆತನನ್ನು ಕಾರಿನಲ್ಲಿ ಕುಳ್ಳರಿಸಿಕೊಂಡು ಹೋಗುವಾಗ ಹೆಸರು ಕೇಳಿದ್ದಾನೆ. ಆಗ ಆಕಾಶ್​, ತನ್ನ ಹೆಸರನ್ನು ಹೇಳದೇ ಮನೆಯಲ್ಲಿ ನನ್ನನ್ನು ಅಪ್ಪು ಎಂದು ಕರೆಯುತ್ತಾರೆ ಎಂದಿದ್ದಾನೆ. ಅಸಲಿ ಹೆಸರನ್ನೂ ಗೌತಮ್​ ಕೇಳಲ್ಲ. ಏಕೆಂದ್ರೆ ಸೀರಿಯಲ್​ ಮುಂದೆ ಹೋಗಬೇಕಲ್ಲ!

67
ವೀಕ್ಷಕರ ಆಸೆ

ಅಲ್ಲಿಗೆ ಅಪ್ಪ-ಮಗನ ಮಿಲನ ಆಗಿದೆ. ಆದರೆ ಇವರಿಬ್ಬರೂ ಯಾರು ಎನ್ನುವುದು ಬೇಗ ಗೊತ್ತಾಗಲಿ ಎನ್ನುವ ಆಸೆ ವೀಕ್ಷಕರದ್ದು.

77
ಮುಂದೇನಾಗುತ್ತೆ?

ಅದೇ ವೇಳೆ ಎಲ್ಲಾ ಆಸ್ತಿಯನ್ನು ಶಕುಂತಲಾ ಮತ್ತು ಜೈದೇವ್​ಗೆ ಬರೆದುಕೊಟ್ಟು ಬಂದಿರೋದಕ್ಕೂ ನೆಟ್ಟಿಗರು ಗೌತಮ್​ನನ್ನು ಬೈಯುತ್ತಿದ್ದಾರೆ. ಅವರನ್ನು ಬೀದಿಗೆ ಅಟ್ಟಬೇಕಿತ್ತು ಎನ್ನುತ್ತಿದ್ದಾರೆ. ಅದೇ ಇನ್ನೊಂದೆಡೆ, ಹೆತ್ತ ಅಮ್ಮ, ತಂಗಿಯನ್ನು ಬಿಟ್ಟುಬಂದಿರುವ ಬಗ್ಗೆಯೂ ಬೇಸರವಿದೆ. ಮುಂದೇನಾಗುತ್ತೋ ನೋಡಬೇಕಿದೆ.

Read more Photos on
click me!

Recommended Stories