ಆ್ಯಂಕರ್ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯ ನಂತರವೂ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮದುಮಗಳ ರೂಪದಲ್ಲಿ ಕಾಣಿಸಿಕೊಂಡು ವೀಕ್ಷಕರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದ್ದಾರೆ ಆ್ಯಂಕರ್ ಅನುಶ್ರೀ. ಅವರು ಹೇಳಿರೋದನ್ನು ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಆ್ಯಂಕರ್ ಅನುಶ್ರೀ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೆಲವೇ ದಿನಗಳಾಗಿವೆ. 38 ವರ್ಷದ ಅನುಶ್ರೀ ಅವರು ಕೊಡಗು ಮೂಲದ ರೋಷನ್ ಜೊತೆ ಹಣೆಮಣೆ ಏರಿದ್ದಾರೆ. ಅನುಶ್ರೀ ಮದುವೆ ಯಾವಾಗ ಯಾವಾಗ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದರೂ ಈ ಬಗ್ಗೆ ಸಾಕಷ್ಟು ರಹಸ್ಯವಾಗಿಯೇ ಇಟ್ಟಿದ್ದ ನಟಿ, ಕೊನೆಗೂ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಅಷ್ಟಕ್ಕೂ ಆ್ಯಂಕರ್ ಅನುಶ್ರೀ(Anchor Anushree) ಅವರಿಗೆ ಕಿರುತೆರೆಯಲ್ಲಿ ಭಾರಿ ಡಿಮಾಂಡ್ ಇರುವುದು ಗೊತ್ತೇ ಇದೆ.
28
ಎಲ್ಲರಿಗೂ ಅನುಶ್ರೀನೇ ಬೇಕು
ಜೀ ಟಿವಿ, ಕಲರ್ಸ್ ಕನ್ನಡ ಸೇರಿದಂತೆ ಕೆಲವು ಚಾನೆಲ್ಗಳಲ್ಲಿ ಇವರು ಆ್ಯಂಕರಿಂಗ್ ಮಾಡಿದ್ದಾರೆ. ಯಾವ ರಿಯಾಲಿಟಿ ಷೋ ನೋಡಿದರೂ ಅದರಲ್ಲಿ ಅನುಶ್ರೀ ಅವರೇ ಇರುತ್ತಾರೆ. ಇಂಥ ರಿಯಾಲಿಟಿ ಷೋ ಎಂದರೆ ಸಾಕು, ಅದರ ಬಗ್ಗೆ ಗಂಟೆಗಟ್ಟಲೆ ನಿರರ್ಗಳವಾಗಿ ಯಾವುದೇ ಪೂರ್ವ ತಯಾರಿ ಇಲ್ಲದೇ ಮಾತನಾಡಬಲ್ಲೆ, ಇದಕ್ಕೇ ತಮಗೆ ಅಷ್ಟು ಡಿಮಾಂಡ್ ಇರುವುದು ಎಂದು ಕೂಡ ಅನುಶ್ರೀ ಅವರು ಹೇಳಿದ್ದಾರೆ. ಈ ಮೂಲಕ ಇವರಿಗೆ ಅಷ್ಟು ಬೇಡಿಕೆ ಯಾಕೆ ಎನ್ನುವುದು ಗೊತ್ತಾಗುತ್ತದೆ.
38
ಪ್ರಶ್ನೆಗೆ ಉತ್ತರಿಸಿದ್ದ ನಟಿ
ಕಿರುತೆರೆಯ ನಟ-ನಟಿಯರ ಮದುವೆಯೆಂದರೆ, ಸಾಮಾನ್ಯವಾಗಿ ಅವರ ಪಾತ್ರ ಇರುವ ದೃಶ್ಯಗಳನ್ನು ಮೊದಲೇ ಶೂಟಿಂಗ್ ಮಾಡಿ ಮುಗಿಸುತ್ತಾರೆ. ಅವರು ವಾಪಸಾಗುವವರೆಗೂ ಅವರು ಸೀರಿಯಲ್ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ರಿಯಾಲಿಟಿ ಷೋಗಳು ಹಾಗಾಗುವುದಿಲ್ಲ. ಮೊದಲೇ ರಿಕಾರ್ಡಿಂಗ್ ಮಾಡಿದರೂ 3-4 ಕಂತುಗಳ ರಿಕಾರ್ಡಿಂಗ್ ಮಾಡುವುದು ಸುಲಭವಲ್ಲ. ಆದ್ದರಿಂದ ಆ್ಯಂಕರ್ ಅನುಶ್ರೀ ಅವರು ಇದಾಗಲೇ ಆ್ಯಂಕರಿಂಗ್ ಮಾಡ್ತಿರೋ ರಿಯಾಲಿಟಿ ಷೋಗಳ ಗತಿಯೇನು ಎನ್ನುವ ಪ್ರಶ್ನೆಗೆ ಮದುವೆಯ ದಿನವೇ ನಟಿ ಉತ್ತರಿಸಿದ್ದರು. ನಾಡಿದ್ದೇ ನಾನು ಡ್ಯೂಟಿಗೆ ಜಾಯಿನ್ ಆಗುತ್ತಿದ್ದೇನೆ ಎಂದಿದ್ದರು.
ಅದೇ ರೀತಿ ಇದೀಗ ನಟಿ ಈಗ ಲಕ್ಷಣವಾಗಿ ಸೀರೆಯುಟ್ಟು ಮದುಮಗಳ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ವೀಕ್ಷಕರಿಗೆ ಅವರು ಭರ್ಜರಿ ಗುಡ್ನ್ಯೂಸ್ ಕೂಡ ಕೊಟ್ಟಿದ್ದಾರೆ.
58
ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು
ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ಆಡಿಷನ್ ಕುರಿತು ಅವರು ಮಾತನಾಡಿದ್ದಾರೆ. ರಾಜ್ಯದ 31 ಜಿಲ್ಲೆಗಳಲ್ಲಿ DKD & Comedy Kiladigalu ಕಾಮಿಡಿ ಕಿಲಾಡಿಗಳು ಸೀಸನ್-5ರ ಆಡಿಷನ್ ನಡೆಯುತ್ತಿದೆ. ಬೆಳಿಗ್ಗೆ 9 ಗಂಟೆಯಿಂದ ಇದು ಶುರುವಾಗಲಿದೆ ಎನ್ನುವ ಮಾಹಿತಿ ಕೊಟ್ಟಿದ್ದಾರೆ. ಆಸಕ್ತರು ಭಾಗವಹಿಸುವಂತೆ ಅವರು ಕೋರಿದ್ದಾರೆ.
68
ಹೊಸ ಕಳೆ ನೋಡಿ ಫುಲ್ ಖುಷ್
ಆ್ಯಂಕರ್ ಅನುಶ್ರೀ ಅವರಿಗೆ ಬಂದಿರುವ ಹೊಸ ಕಳೆಯನ್ನು ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯಾದ ಬಳಿಕ ಬಹುತೇಕ ಮಂದಿಯ ಕಣ್ಣು ಹೋಗುವುದು ಅವರ ತಾಳಿಯತ್ತ. ಮಂಗಳಸೂತ್ರವನ್ನು ಅವರು ಹಾಕಿದ್ದಾರೋ, ಇಲ್ಲವೋ ಎನ್ನುವುದೇ ಹೈಲೈಟ್ ಆಗಿಬಿಡುತ್ತದೆ.
78
ಮದುಮಗಳಂತೆ ಮಿಂಚಿಂಗ್
ಆದರೆ ಅನುಶ್ರೀ ಅವರು ಲಕ್ಷಣವಾಗಿ ಸೀರೆಯುಟ್ಟು ಮದುಮಗಳಂತೆ ಕಂಗೊಳಿಸುತ್ತಿರುವುದು ಮಾತ್ರವಲ್ಲದೇ ಮದುವೆಯ ದಿನ ಹಾಕಿರುವ ಮಂಗಳಸೂತ್ರವನ್ನೂ ಹೊರಗಡೆಯೇ ಹಾಕಿಕೊಂಡಿರುವುದನ್ನು ನೋಡಿ ಅವರ ಅಭಿಮಾನಿಗಳು ಖುಷಿಯಿಂದ ಕಮೆಂಟ್ ಹಾಕುತ್ತಿದ್ದಾರೆ. ಸದಾ ನಗುತ್ತಿರಿ, ಹೀಗೆಯೇ ಭಾರತೀಯ ನಾರಿಯಂತೆ ಕಂಗೊಳಿಸುತ್ತಿರಿ ಎಂದೆಲ್ಲಾ ಆಶೀರ್ವಾದ ಮಾಡಿದ್ದಾರೆ.
88
ವೀಕ್ಷಕರಿಂದ ಪ್ರಶ್ನೆ
ಮತ್ತೆ ಕೆಲವರು ಇಷ್ಟು ಬೇಗ ಕೆಲಸಕ್ಕೆ ಯಾಕೆ ಬಂದ್ರಿ? ಹನಿಮೂನ್ (Honeymoon) ಹೋಗಲ್ವಾ ಎಂದು ಪ್ರಶ್ನಿಸಿದ್ದಾರೆ. ಮದುವೆಯ ಲೈಫ್ ಎಂಜಾಯ್ ಮಾಡಿ, ಈ ಕೆಲಸವೆಲ್ಲಾ ಇರುವುದೇ, ಬಿಡುವು ತೆಗೆದುಕೊಳ್ಳಿ ಎಂದು ಸಲಹೆಗಳನ್ನೂ ಕೊಟ್ಟಿದ್ದಾರೆ.