Lakshmi Nivasa ಸಿದ್ದೇಗೌಡ್ರಿಗೆ ಹುಟ್ಟುಹಬ್ಬ: ಹೆಸರು ಬದಲಾಯಿಸಿಕೊಂಡ ನಟನ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ...

Published : Sep 17, 2025, 02:12 PM IST

'ಲಕ್ಷ್ಮೀ ನಿವಾಸ' ಸೀರಿಯಲ್‌ನ ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ್ ಅವರ ಹುಟ್ಟುಹಬ್ಬದ ವಿಶೇಷ ಲೇಖನವಿದು. ರಂಗಭೂಮಿ ಹಿನ್ನೆಲೆಯುಳ್ಳ, 80ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿರುವ ಇವರು, ಅಲ್ಲು ಅರ್ಜುನ್ ಸಿನಿಮಾದಿಂದ ಪ್ರೇರಿತರಾಗಿ ತಮ್ಮ ಹೆಸರನ್ನು 'ಡಿಜೆ' ಎಂದು ಬದಲಿಸಿಕೊಂಡರು. 

PREV
17
ಸಿದ್ದೇಗೌಡ್ರು ಪಾತ್ರದಲ್ಲಿ ಎಲ್ಲರ ಮನಸ್ಸನ್ನು ಕದ್ದವರು ಧನಂಜಯ್

ಲಕ್ಷ್ಮೀ ನಿವಾಸ ಸೀರಿಯಲ್​ (Lakshmi Nivasa Serial)ನಲ್ಲಿ ಸಿದ್ದೇಗೌಡ್ರು ಪಾತ್ರದಲ್ಲಿ ಎಲ್ಲರ ಮನಸ್ಸನ್ನು ಕದ್ದವರು ಧನಂಜಯ್. ಪತ್ನಿಯನ್ನು ಮೇಡಮ್​ ಅವ್ರೇ ಎಂದು ಸಂಬೋಧಿಸುತ್ತಲೇ ಸೀರಿಯಲ್​ನಲ್ಲಿ ಪತ್ನಿಯ ಮನಸ್ಸನ್ನೂ ಕದಿಯುತ್ತಿದ್ದಾರೆ. ಇಂದು ಧನಂಜಯ್​ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ರಿಲೀಸ್​ ಮಾಡುವ ಮೂಲಕ ಅವರಿಗೆ ವಿಷ್​ ಮಾಡಿದೆ. ಈ ಸಂದರ್ಭದಲ್ಲಿ ಅವರ ಹೆಸರಿನ ಹಿಂದಿರುವ ರೋಚಕ ಸ್ಟೋರಿ ಇಲ್ಲಿದೆ.

27
ಡಿಜೆ ಎಂದೇ ಫೇಮಸ್ಸು

ಸಿದ್ದೇಗೌಡ್ರು ಪಾತ್ರಧಾರಿಯ ರಿಯಲ್​ ಹೆಸರು ಧನಂಜಯ. ಆದರೆ ಅವರು ಡಿಜೆ ಎಂದೇ ಫೇಮಸ್ಸು. ಇವರು ಇದಾಗಲೇ ಕೆಲವು ಸಿನಿಮಾಗಳಲ್ಲಿ ಪೋಷಕರಾಗಿ ನಟಿಸಿದ್ದಾರೆ. ‘ಜಿಲ್‌ ಜಿಲ್‌’, ‘ವಾಸಂತಿ ನಲಿದಾಗ’ ಸೇರಿದಂತೆ ಐದಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕೊನೆಗೆ, ಈರಣ್ಣಯ್ಯ ಎನ್‌ ಮಧುಗಿರಿ ನಿರ್ದೇಶನದ ‘ಕನಕ ಪುಷ್ಪ’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದಾರೆ.

37
ರಂಗಭೂಮಿ ನಟ

ರಂಗಭೂಮಿ ಹಿನ್ನೆಯವರಾಗಿರುವ ಇವರು, 80ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ನೆಚ್ಚಿನ ನಾಯಕ ಚಿರಂಜೀವಿ ಅವರನ್ನು ನೋಡಿ, ಸಿನಿಮಾ ನಾಯಕನಾಗಬೇಕೆಂಬ ಆಸೆ ಚಿಗುರೊಡೆದಿತ್ತು. ಅವರೇ ನನ್ನ ರೋಲ್‌ ಮಾಡೆಲ್‌ ಎಂದು ಹಿಂದೊಮ್ಮೆ ಧನಂಜಯ್​ ಹೇಳಿದ್ದರು. 350ಕ್ಕೂ ಹೆಚ್ಚು ಸಿನಿಮಾಗಳಿಗೆ ಡಬ್ಬಿಂಗ್‌ ಕಲಾವಿದನಾಗಿ ಕಾರ್ಯ ನಿರ್ವಹಿಸಿದ್ದಾರೆ.

47
ಧನಂಜಯ ಡಿಜೆ ಆಗಿದ್ದು ಹೇಗೆ?

ಮೊದಲೇ ಹೇಳಿದಂತೆ ಅವರನ್ನು ಹತ್ತಿರದವರೆಲ್ಲರೂ ಡಿಜೆ ಎಂದೇ ಕರೆಯುವುದು. ಈ ಬಗ್ಗೆ ಖುದ್ದು ನಟನೇ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 'ನನಗೆ ಡಿಜೆ ಎಂದು ಪರಿಚಯಿಸಿಕೊಳ್ಳಲು ಬಹಳ ಖುಷಿ. ನಿಜ ಹೇಳುವುದಾದ್ರೆ, ವೈಯಕ್ತಿಕವಾಗಿ ನನಗೆ ನನ್ನ ಧನಂಜಯ ಹೆಸರು ಇಷ್ಟವಿರಲಿಲ್ಲ. ಸ್ನೇಹಿತರೆಲ್ಲರ ಹೆಸರು ತುಂಬಾ ಸ್ಟೈಲಿಶ್‌ ಆಗಿತ್ತು. ನನ್ನ ಹೆಸರನ್ನು ಮಾಡರ್ನ್‌ ಆಗಿ ಬದಲಾಯಿಸಬೇಕೆಂದು ಯೋಚಿಸುತ್ತಿದ್ದೆ. ಆಗ ಅಲ್ಲುಅರ್ಜುನ್‌ ಅಭಿನಯದ ‘ಡಿಜೆ’ ಸಿನಿಮಾ ಬಿಡುಗಡೆಯಾಯಿತು. ನನ್ನ ಹೆಸರನ್ನು ಡಿಜೆ ಎಂದು ಬದಲಾಯಿಸಲು ಈ ಸಿನಿಮಾ ಪ್ರೇರಣೆಯಾಯಿತು’ ಎನ್ನುತ್ತಾರೆ ನಟ ಧನಂಜಯ

57
80ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ

ಅಷ್ಟಕ್ಕೂ ಡಿಜೆ ಅವರು, 80ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ರಂಗವೇದಿಕೆಯಲ್ಲೂ ಜನಪ್ರಿಯರಾಗಿದ್ದಾರೆ. ಈ ಕುರಿತು ಅವರು ಹೇಳುವುದು ಏನೆಂದರೆ, ‘ಚಿಕ್ಕ ವಯಸ್ಸಿನಲ್ಲಿ ನನ್ನ ತಾಯಿ ನನ್ನನ್ನು ನೃತ್ಯಕ್ಕೆ ಸೇರಿಸಿದರು. ಆಗ ನನ್ನ ಮುಖದ ಮೇಲೆ ಕಲೆಗಳಿದ್ದವು. ಕೆಲವರು ನನ್ನ ಮುಖ ನೋಡಲೂ ಇಷ್ಟಪಡುತ್ತಿರಲಿಲ್ಲ. ಆದರೆ ಅವರೇ ವೇದಿಕೆ ಮೇಲೆ ನನ್ನ ನೃತ್ಯವನ್ನು ಬಹಳ ಇಷ್ಟಪಟ್ಟು ಚಪ್ಪಾಳೆ ತಟ್ಟಿ ದುಡ್ಡನ್ನು ನನ್ನ ಶರ್ಟ್‌ಗೆ ಪಿನ್‌ ಮಾಡುತ್ತಿದ್ದರು. ಕಲೆಗಿರುವ ಬೆಲೆ ನನಗೆ ಆಗ ಅರ್ಥವಾಯಿತು' ಎಂದಿದ್ದಾರೆ..

67
ನಟನಾಗುವ ಆಸೆ

ತಾವು ನಟನಾಗುವ ಆಸೆ ಚಿಕ್ಕ ವಯಸ್ಸಿನಲ್ಲಿಯೇ ಚಿಗುರಿತ್ತು ಎನ್ನುವ ಬಗ್ಗೆಯೂ ಅವರ ಮಾತನಾಡಿದ್ದಾರೆ. 'ಚಿರಂಜೀವಿ ನನ್ನ ನೆಚ್ಚಿನ ನಟ. ಅವರ ಸಾಕಷ್ಟು ಸಿನಿಮಾಗಳನ್ನು ನೋಡುತ್ತಿದ್ದೆ. ಸಿನಿಮಾ ನಾಯಕನಾಗಬೇಕೆಂಬ ಆಸೆ ಚಿಗುರೊಡೆದಿದ್ದೇ ಅವರಿಂದ. ಅವರೇ ನನ್ನ ರೋಲ್‌ ಮಾಡೆಲ್‌ ಎನ್ನುತ್ತಾರೆ ನಟ.

77
ಅಮ್ಮನಿಂದ ರಂಗಭೂಮಿ ಪ್ರವೇಶ

ನನ್ನ ನಟನಾ ಆಸಕ್ತಿ ನೋಡಿ ನನ್ನ ತಾಯಿ ನನ್ನನ್ನು ರಂಗಭೂಮಿಗೆ ಸೇರಿಸಿದರು. ಎಂಬತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದೇನೆ. ಮುನ್ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಡಬ್ಬಿಂಗ್‌ ಕಲಾವಿದನಾಗಿ ಕಾರ್ಯ ನಿರ್ವಹಿಸಿದ್ದೇನೆ. ನನ್ನ ಕಿರುತೆರೆ ಮತ್ತು ಸಿನಿಮಾ ನಟನೆಯ ಮೆಟ್ಟಿಲಿಗೆ ರಂಗಭೂಮಿಯೇ ದೊಡ್ಡ ಅಡಿಪಾಯ’ ಎನ್ನುತ್ತಾರೆ ಧನಂಜಯ.

Read more Photos on
click me!

Recommended Stories