ಸೀನನಿಂದ ಪಿಂಕಿಯನ್ನು ದೂರ ಮಾಡೋದ್ದಕ್ಕೆ ಒಂದೇ ಉಪಾಯ; ಮಾದಪ್ಪ ತೆಗೆದುಕೊಳ್ಳಬೇಕಿದೆ ಗಟ್ಟಿ ನಿರ್ಧಾರ

Published : Sep 17, 2025, 01:12 PM IST

ಮಾದಪ್ಪ ತೆಗೆದುಕೊಳ್ಳಬೇಕಿದೆ ಗಟ್ಟಿ ನಿರ್ಧಾರ: ಸೀನನ ಹುಟ್ಟುಹಬ್ಬದ ದಿನದಂದು, ತಾನು ಗುಂಡಮ್ಮನನ್ನು ಇಷ್ಟಪಟ್ಟು ಮದುವೆಯಾಗಿಲ್ಲ ಎಂಬ ಸತ್ಯವನ್ನು ಪಿಂಕಿ ಮುಂದೆ ಸೀನ ಬಾಯ್ಬಿಟ್ಟಿದ್ದಾನೆ. ಈ ಸತ್ಯವನ್ನು ಕೇಳಿ ಗುಂಡಮ್ಮ ಆಘಾತಕ್ಕೊಳಗಾಗಿದ್ದಾಳೆ.

PREV
15
ಅಣ್ಣಯ್ಯ ಸೀರಿಯಲ್‌

ಅಣ್ಣಯ್ಯ ಸೀರಿಯಲ್‌ನಲ್ಲಿ ಗುಂಡಮ್ಮ-ಸೀನನ ಜೋಡಿ ಅಂದ್ರೆ ಅಭಿಮಾನಿಗಳಿಗೆ ತುಂಬಾ ಇಷ್ಟ. ಮದುವೆ ಬಳಿಕವೂ ಗುಂಡಮ್ಮ ಮತ್ತು ಸೀನ ಕ್ಯೂಟ್‌ ಆಗಿ ಜಗಳ ಮಾಡೋದನ್ನು ನೋಡೋದನ್ನು ವೀಕ್ಷಕರು ಕಾಯುತ್ತಿರುತ್ತಾರೆ. ಮದುವೆಯಾದ್ರೂ ಸೀನ ಮಾತ್ರ ತನ್ನ ಹಳೆ ಪ್ರೀತಿಯನ್ನು ಮರೆತಿಲ್ಲ.

25
ಸೀನನ ಹುಟ್ಟುಹಬ್ಬ

ಸೀನನ ಹುಟ್ಟುಹಬ್ಬವನ್ನು ಪಿಂಕಿ ಮತ್ತು ಲೀಲಾ ಅದ್ಧೂರಿಯಾಗಿ ಆಚರಿಸಿದ್ದಾರೆ. ಸೀನನಿಗೆ ಇಷ್ಟವಾದ ಅಡುಗೆ ಮಾಡಿಕೊಂಡು ಬರಲು ಗುಂಡಮ್ಮ ತವರಿಗೆ ಹೋಗಿದ್ದಳು. ತವರಿನಿಂದ ಬರುತ್ತಲೇ ಪಿಂಕಿ ಮತ್ತು ಸೀನ ನಡುವಿನ ಪ್ರೀತಿಯ ವಿಷಯ ಗುಂಡಮ್ಮಳಿಗೆ ಗೊತ್ತಾಗಿದೆ.

35
ಗುಂಡಮ್ಮ ಶಾಕ್

ತನ್ನ ಮದುವೆಯಾಗಿದ್ದು, ಇಷ್ಟದಿಂದಲ್ಲ. ಅಪ್ಪನ ಬೆದರಿಕೆಯಿಂದಾಗಿ ನಾನು ಗುಂಡಮ್ಮಗೆ ತಾಳಿ ಕಟ್ಟಿದೆ ಎಂದು ಪಿಂಕಿ ಮುಂದೆ ಸೀನ ಹೇಳಿಕೊಂಡಿದ್ದಾನೆ. ಈ ವಿಷಯ ಕೇಳಿ ಗುಂಡಮ್ಮ ಶಾಕ್ ಆಗಿ ಕಣ್ಣೀರು ಹಾಕಿದ್ದಾಳೆ. ಅತ್ತೆ ಜೊತೆ ಸೇರಿಕೊಂಡು ಸೀನ ತನಗೆ ಮೋಸ ಮಾಡಿರುವ ವಿಷಯ ತಿಳಿದು ಗುಂಡಮ್ಮ ಅಘಾತಕ್ಕೊಳಗಾಗಿದ್ದಾಳೆ.

45
ಪಿಂಕಿ ಪ್ಲಾನ್

ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕೃಷಿ ಜಮೀನು ಇದೆ ಎಂದು ಸೀನನ ಹಿಂದೆ ಪಿಂಕಿ ಬಿದ್ದಿದ್ದಾಳೆ. ಮಾದಪ್ಪನ ಕುಟುಂಬ ಆರ್ಥಿಕವಾಗಿ ಉತ್ತಮವಾಗಿದ್ದು, ಸೀನನ ಮದುವೆಯಾದ್ರೆ ಜೀವನ ಸುಂದರವಾಗಿರುತ್ತೆ ಎಂದು ಪಿಂಕಿ ಪ್ಲಾನ್ ಮಾಡಿಕೊಂಡಿದ್ದಾಳೆ. ಸೀನನ ಜೀವನದಿಂದ ಪಿಂಕಿ ದೂರವಾದ್ರೆ ಮಾತ್ರ ಗುಂಡಮ್ಮ ಸಂತೋಷವಾಗಿರುತ್ತಾಳೆ.

ಇದನ್ನೂ ಓದಿ: Annayya Serial ಶಿವು-ಪಾರು ರಿಯಲ್‌ ಲೈಫ್‌ನಲ್ಲೂ ಒಂದಾಗ್ತಾ ಇದ್ದಾರಾ? ಮದುವೆ ಬಗ್ಗೆ ನಟಿ ಹೇಳಿದ್ದೇನು?

55
ಮಾದಪ್ಪ ಮಾಡಬೇಕಿದೆ ಗಟ್ಟಿ ನಿರ್ಧಾರ

ಮಗ ಮತ್ತು ಸೊಸೆ ಸಂತೋಷವಾಗಿರಬೇಕಾದ್ರೆ ಮಾದಪ್ಪ ತನ್ನ ಎಲ್ಲಾ ಆಸ್ತಿಯನ್ನು ರಶ್ಮಿ (ಗುಂಡಮ್ಮ) ಹೆಸರಿಗೆ ಬರೆಯಬೇಕು. ಆಗ ಪಿಂಕಿ ತಾನೇ ಸೀನನಿಂದ ದೂರ ಹೋಗುತ್ತಾಳೆ. ಈಗಾಗಲೇ ಪಿಂಕಿಗೆ ಶಿವಣ್ಣ ಎಚ್ಚರಿಕೆ ನೀಡಿದ್ದಾಳೆ. ಪಾರು ಸಹ ಪರೋಕ್ಷವಾಗಿ ಸೀನ ಮತ್ತು ಪಿಂಕಿಗೆ ವಾರ್ನ್ ಮಾಡಿದ್ದಳು.

ಇದನ್ನೂ ಓದಿ:Annayya Serial : ಶಿವಣ್ಣನ ಇಬ್ಬರು ತಂಗಿಯರ ಜೀವನದಲ್ಲಿ ಬಿರುಗಾಳಿ... ಸರಿಪಡಿಸಲು ಮಾಂಕಾಳವ್ವನೇ ಬರಬೇಕೆ?

Read more Photos on
click me!

Recommended Stories