ಜೂ.ಎನ್‌ಟಿಆರ್‌ ಡ್ರ್ಯಾಗನ್‌ನಲ್ಲಿ ರಿಷಬ್‌ ಶೆಟ್ಟಿ ಅತಿಥಿ ಪಾತ್ರ: ಏನಿದು ಸರ್ಪ್ರೈಸ್‌ ನ್ಯೂಸ್!

Published : Sep 17, 2025, 10:28 AM IST

ಜೂ.ಎನ್‌ಟಿಆರ್‌ ‘ಡ್ರ್ಯಾಗನ್‌’ ಸಿನಿಮಾ ಈಗಾಗಲೇ ಬಹಳ ನಿರೀಕ್ಷೆ ಹುಟ್ಟಿಸಿದ್ದು, ರಿಷಬ್‌ ಶೆಟ್ಟಿ ಸೇರ್ಪಡೆಯಿಂದ ಈ ನಿರೀಕ್ಷೆ ದುಪ್ಪಟ್ಟಾಗಲಿದೆ. ಸದ್ಯ ರಿಷಬ್‌ ಶೆಟ್ಟಿ ಅಕ್ಟೋಬರ್‌ 2ರಂದು ಬಿಡುಗಡೆಯಾಗಲಿರುವ ‘ಕಾಂತಾರ 1’ ಬಿಡುಗಡೆ ಕೆಲಸದಲ್ಲಿ ಮಗ್ನರಾಗಿದ್ದಾರೆ.

PREV
15
ಅತಿಥಿ ಪಾತ್ರದಲ್ಲಿ ರಿಷಬ್‌ ಶೆಟ್ಟಿ

ಪ್ರಶಾಂತ್‌ ನೀಲ್‌ ನಿರ್ದೇಶನದ, ಜೂ.ಎನ್‌ಟಿಆರ್‌ ನಟಿಸುತ್ತಿರುವ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ಡ್ರ್ಯಾಗನ್‌’ನಲ್ಲಿ ಕಾಂತಾರ ಸ್ಟಾರ್‌ ರಿಷಬ್‌ ಶೆಟ್ಟಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

25
ಹೈದರಾಬಾದ್‌ನಲ್ಲಿ ಚಿತ್ರೀಕರಣ

ಈಗಾಗಲೇ ಈ ಚಿತ್ರಕ್ಕಾಗಿ ಹೈದರಾಬಾದ್‌ನಲ್ಲಿ ರಿಷಬ್‌ ಶೆಟ್ಟಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಈ ಸುದ್ದಿಯನ್ನು ಚಿತ್ರತಂಡ ಇನ್ನೂ ಅಧಿಕೃತಗೊಳಿಸಿಲ್ಲ ಮತ್ತು ಅಲ್ಲಗಳೆದಿಲ್ಲ.

35
ಮೈತ್ರಿ ಮೂವೀ ಮೇಕರ್ಸ್‌ ನಿರ್ಮಾಣ

ರಿಷಬ್‌ ಶೆಟ್ಟಿಯವರು ಪ್ರಶಾಂತ್‌ ನೀಲ್‌ ಮತ್ತು ಜೂ.ಎನ್‌ಟಿಆರ್‌ ಇಬ್ಬರಿಗೂ ಆಪ್ತರಾಗಿದ್ದಾರೆ. ಜೊತೆಗೆ ರಿಷಬ್‌ ಶೆಟ್ಟಿ ನಟಿಸಲಿರುವ ‘ಜೈ ಹನುಮಾನ್‌’ ಚಿತ್ರವನ್ನು ‘ಡ್ರ್ಯಾಗನ್‌’ ಸಿನಿಮಾದ ನಿರ್ಮಾಪಕರಾದ ಮೈತ್ರಿ ಮೂವೀ ಮೇಕರ್ಸ್‌ ಅವರೇ ನಿರ್ಮಿಸುತ್ತಿದ್ದಾರೆ.

45
ರುಕ್ಮಿಣಿ ವಸಂತ್‌ ನಾಯಕಿ

ಹೀಗಾಗಿ ಆತ್ಮೀಯ ವಲಯವೇ ಇರುವುದರಿಂದ ರಿಷಬ್‌ ಶೆಟ್ಟಿ ಕ್ಯಾಮಿಯೋ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ‘ಕಾಂತಾರ 1’ ಚಿತ್ರದ ನಾಯಕಿ ರುಕ್ಮಿಣಿ ವಸಂತ್‌ ಅವರೇ ‘ಡ್ರ್ಯಾಗನ್‌’ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ.

55
ನಿರೀಕ್ಷೆ ದುಪ್ಪಟ್ಟು

‘ಡ್ರ್ಯಾಗನ್‌’ ಸಿನಿಮಾ ಈಗಾಗಲೇ ಬಹಳ ನಿರೀಕ್ಷೆ ಹುಟ್ಟಿಸಿದ್ದು, ರಿಷಬ್‌ ಶೆಟ್ಟಿ ಸೇರ್ಪಡೆಯಿಂದ ಈ ನಿರೀಕ್ಷೆ ದುಪ್ಪಟ್ಟಾಗಲಿದೆ. ಸದ್ಯ ರಿಷಬ್‌ ಶೆಟ್ಟಿ ಅಕ್ಟೋಬರ್‌ 2ರಂದು ಬಿಡುಗಡೆಯಾಗಲಿರುವ ‘ಕಾಂತಾರ 1’ ಬಿಡುಗಡೆ ಕೆಲಸದಲ್ಲಿ ಮಗ್ನರಾಗಿದ್ದಾರೆ.

Read more Photos on
click me!

Recommended Stories