'ಕರ್ಣ' ಸೀರಿಯಲ್ ಖ್ಯಾತಿಯ ನಟಿ ಭವ್ಯಾ ಗೌಡ ಅವರು 'ದೇವಿ' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ, ತಮ್ಮ ಸೀರಿಯಲ್ ಶೂಟಿಂಗ್ ಒತ್ತಡದಿಂದಾಗಿ 'ದೇವಿ' ಚಿತ್ರದ ಮುಹೂರ್ತಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ, ಇದಕ್ಕಾಗಿ ಅವರು ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.
ಸದ್ಯ ಕರ್ಣ ಸೀರಿಯಲ್ನಲ್ಲಿ ನಿಧಿಯಾಗಿ ಎಲ್ಲರ ಮನಸ್ಸನ್ನು ಕದಿಯುತ್ತಿರುವವರು ನಟಿ ಭವ್ಯಾ ಗೌಡ. ಇದೀಗ ಅವರು ದೇವಿ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಯುವ ರೈತ ಚೇತನ್ ಗೌಡ ಅವರು ನಾಯಕನಾಗಿ ಕಾಣಿಸಿಕೊಳ್ತಿದ್ದರೆ. ಭವ್ಯಾ ಗೌಡ ಹಾಗೂ ಚೇತನ್ ಗೌಡ ಅವರ ಈ ಹೊಸ ಜೋಡಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
26
ಲ್ಯಾಂಡ್ಲಾರ್ಡ್ ಸಿನಿಮಾದಲ್ಲೂ ನಟನೆ
ಹಾಗೆಂದು ಭವ್ಯಾ ಗೌಡ ಅವರಿಗೆ ದೇವಿ ಮೊದಲ ಚಿತ್ರವಲ್ಲ. ಈ ಹಿಂದೆ ಲ್ಯಾಂಡ್ಲಾರ್ಡ್ ಅನ್ನೋದು ಸಿನಿಮಾದಲ್ಲಿ ನಟಿಸಿದ್ದರು. ಇದು ಅವರ ಮೊದಲ ಸಿನಿಮಾ. ‘ಲ್ಯಾಂಡ್ಲಾರ್ಡ್’ ಸಿನಿಮಾಗೆ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡಿದ್ದರು. ಇದೀಗ ದೇವಿ ಮೂಲಕ ನಾಯಕಿಯಾಗಿ ಮೊದಲನೆಯ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ನಟಿ.
36
ಕ್ಷಮೆ ಕೋರಿದ ಭವ್ಯಾ ಗೌಡ
ಇದರ ನಡುವೆಯೇ ನಟಿ ಭವ್ಯಾ ಗೌಡ (Bhavya Gowda) ನೇರಪ್ರಸಾರದಲ್ಲಿ ಬಂದು ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಬಳಿಕ 'ದೇವಿ' ಎನ್ನುವ ಸಿನಿಮಾ ಸೆಟ್ಟೇರಿದೆ. ಆ ಸಿನಿಮಾದ ಮುಹುರ್ತಕ್ಕೆ ಭವ್ಯಾ ಗೌಡ ಭಾಗವಹಿಸಲು ಆಗಿರಲಿಲ್ಲ. ಅದಕ್ಕಾಗಿ ಕ್ಷಮೆ ಕೇಳಿದ್ದಾರೆ. ಅದಕ್ಕೆ ಕಾರಣ, ನಿನ್ನೆ ನಡೆದ ದೇವಿ ಸಿನಿಮಾದ ಮುಹೂರ್ತಕ್ಕೆ ಅವರಿಗೆ ಬರಲು ಆಗದೇ ಇರುವ ಬಗ್ಗೆ ಈ ಕ್ಷಮೆ.
"ಎಲ್ಲರಿಗೂ ಕ್ಷಮೆ ಕೇಳುತ್ತೇನೆ" ಎಂದು ವಿಡಿಯೋದಲ್ಲಿ ಹೇಳಿರುವ ನಟಿ ಭವ್ಯಾ ಗೌಡ, "ಹಾಯ್ ಎಲ್ಲರಿಗೂ ನಮಸ್ಕಾರ. ಮೊದಲನೆಯದಾಗಿ ನಿಮ್ಮೆಲ್ಲರಿಗೂ ನಾನು ಕ್ಷಮೆ ಕೇಳುತ್ತೇನೆ. ಯಾಕಂದ್ರೆ, ಇವತ್ತು ನಮ್ಮ ದೇವಿ ಸಿನಿಮಾದ ಮುಹೂರ್ತ ಹಾಗೂ ಪ್ರೆಸ್ ಮೀಟ್ ಇತ್ತು. ನಾನು ಎರಡಕ್ಕೂ ಬರುವುದಕ್ಕೆ ಆಗಲಿಲ್ಲ ಎಂದಿದ್ದಾರೆ..
56
ಕರ್ಣ ಎಪಿಸೋಡ್
ಅದಕ್ಕೆ ಕಾರಣ ಕೊಟ್ಟಿರುವ ನಟಿ, ಕರ್ಣ ಸೀರಿಯಲ್ ನೆಕ್ ಟು ನೆಕ್ ಎಪಿಸೋಡ್ ಇದೆ. ಈಗ ನಾವು ಶೂಟ್ ಮಾಡುತ್ತಿರೋದು ಸಂಜೆ ಟೆಲಿಕಾಸ್ಟ್ ಆಗುತ್ತಿದೆ. ಹಾಗಾಗಿ ನನಗೆ ಬರಲು ತುಂಬಾ ಕಷ್ಟವಾಯ್ತು. ಮುಹೂರ್ತಕ್ಕೆ ಬರಲು ಆಗಿಲಿಲ್ಲ. ಆದಷ್ಟು ಬೇಗ ನಾನು ಎಲ್ಲರನ್ನೂ ಭೇಟಿ ಮಾಡುತ್ತೇನೆ. ಇಲ್ಲಿವರೆಗೂ ನನಗೆ ಹೇಗೆ ಬೆಂಬಲ ನೀಡುತ್ತಾ ಬಂದಿದ್ದೀರೋ ಹಾಗೇ ನಿಮ್ಮೆಲ್ಲರ ಆಶೀರ್ವಾದ ಹಾಗೂ ಬೆಂಬಲ ಬೇಕು ಎಂದಿದ್ದಾರೆ.
66
ದಯವಿಟ್ಟು ಕ್ಷಮಿಸಿ
ಹೀರೋಯಿನ್ ಆಗಿ ಮೊದಲ ಸಿನಿಮಾ "ನಾಯಕಿ ಆಗಿ ಇದು ನನ್ನ ಮೊದಲ ಸಿನಿಮಾ. ತುಂಬಾ ಖುಷಿ ಆಗುತ್ತಿದೆ. ಅವಕಾಶ ಕೊಟ್ಟಿರುವ ಸಿಆರ್ ಪ್ರೊಡಕ್ಷನ್‌ಗೆ ಈ ಮೂಲಕ ಧನ್ಯವಾದಗಳನ್ನು ಹೇಳುತ್ತೇನೆ. ಇಡೀ ತಂಡ ತುಂಬಾನೇ ಚೆನ್ನಾಗಿದೆ. ಒಬ್ಬೊಬ್ಬರ ಪಾತ್ರ ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತುಂಬಾನೇ ಖುಷಿಯಾಗುತ್ತಿದೆ. ಬರುವುದಕ್ಕೆ ಆಗಲಿಲ್ಲ ಅಂತ ಅಷ್ಟೇ ಬೇಜಾರಾಗುತ್ತಿದೆ, ದಯವಿಟ್ಟು ಕ್ಷಮಿಸಿ ಎಂದು ಭವ್ಯಾ ಗೌಡ ಹೇಳಿದ್ದಾರೆ. ಕರ್ಣ ಸೀರಿಯಲ್ನಲ್ಲಿ ಸದ್ಯ ಕರ್ಣ ಮತ್ತು ನಿಧಿಯ ಮೊದಲ ರಾತ್ರಿ ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.