ಗಂಗೂಲಿ ಜಿವನಾಧಾರಿತ ಬಯೋಪಿಕ್‌ನ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಈ ಮಧ್ಯೆ ಗಂಗೂಲಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ರಾಜ್‌ಕುಮಾರ್ ರಾವ್ ಅವರ ಆಯ್ಕೆ ಬಗ್ಗೆ ಅನೇಕರು ಚಕಾರ ಎತ್ತಿದ್ದಾರೆ. ಏನಿದು ಹೊಸ ಚರ್ಚೆ? ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಬಹುಶಃ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಅತಿ ಹೆಚ್ಚು ಬಯೋಪಿಕ್ (ಜೀವನಾಧಾರಿತ ಚಿತ್ರ)ಗಳಲ್ಲಿ ನಟಿಸಿದ ನಟ ಎಂಬ ಪ್ರತ್ಯೇಕ ವಿಭಾಗವೇನಾದರೂ ಇದ್ದರೆ ಅದರಲ್ಲಿ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ( Rajkumar Rao) ಅವರ ಹೆಸರು ಖಂಡಿತವಾಗಿಯೂ ಮೊದಲ ಸಾಲಿನಲ್ಲಿ ಇರುತ್ತಿತ್ತು. ಇದೀಗ ಅವರ ಮುಂಬರುವ ಚಿತ್ರ ದಾದಾ (Dada) ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್ ಮಿಂಚಲಿದ್ದಾರೆ.
ಸೌರವ್ ಗಂಗೂಲಿ ಅವರಂತೆ ರಾಜ್‌ಕುಮಾರ್ ಕಾಣುತ್ತಿಲ್ಲ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಆದರೆ ಅವರೊಬ್ಬ ನಟನಾಗಿ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಿಸ್ಸಿಮರು.
26
ಇದು 8ನೇ ಬಯೋಪಿಕ್!
ಮುಂದಿನ ವರ್ಷ ಬಿಡುಗಡೆಯಾಗಲಿರುವ 'ದಾದಾ' ಸಿನಿಮಾ ರಾಜ್‌ಕುಮಾರ್ ರಾವ್ ಅವರ ವೃತ್ತಿಜೀವನದ 8ನೇ ಜೀವನಾಧಾರಿತ ಚಿತ್ರ. ಇದಕ್ಕೂ ಮುನ್ನ ಅಂದರೆ ಆಗಸ್ಟ್ 7, 2026 ರಂದು ಖ್ಯಾತ ವಕೀಲ ಉಜ್ವಲ್ ನಿಕಮ್ ಅವರ ಜೀವನ ಆಧಾರಿತ 'ಪ್ರಹಾರ್ - ದಿ ಉಜ್ವಲ್ ನಿಕಮ್ ಸ್ಟೋರಿ' (Prahaar – The Ujjwal Nikam Story) ತೆರೆಗೆ ಬರಲಿದೆ.
36
ಬಯೋಪಿಕ್‌ಗಳ ಸಕ್ಸಸ್ ಜರ್ನಿ
ಕಳೆದ 15 ವರ್ಷಗಳಲ್ಲಿ ರಾಜ್‌ಕುಮಾರ್ ರಾವ್ ನೈಜ ಘಟನೆಗಳನ್ನು ಮತ್ತು ವ್ಯಕ್ತಿಗಳ ಜೀವನವನ್ನು ಪರದೆಯ ಮೇಲೆ ತರುವಲ್ಲಿ ಸಿದ್ಧಹಸ್ತರೆನಿಸಿಕೊಂಡಿದ್ದಾರೆ. ಅವರ ಈ ಪಯಣ ಶುರುವಾಗಿದ್ದು ಹೀಗೆ..
ಚಿತ್ತಗಾಂಗ್ (2012): ಇದರಲ್ಲಿ ಲೋಕನಾಥ್ ಬಾಲ್ ಎಂಬ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ರಾಜ್‌ಕುಮಾರ್ ರಾವ್ ಮೊದಲ ಬಾರಿಗೆ ಗಮನ ಸೆಳೆದರು.
ಶಾಹಿದ್ (2012): ವಕೀಲ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಶಾಹಿದ್ ಅಜ್ಮಿ ಪಾತ್ರಕ್ಕಾಗಿ ರಾಜ್‌ಕುಮಾರ್ ರಾವ್ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇಲ್ಲಿಯೂ ಅವರ ರೂಪ ಶಾಹಿದ್ ಅಜ್ಮಿಗೆ ಹೋಲಿಕೆಯಾಗದಿದ್ದರೂ, ನಟನೆಯ ಮೂಲಕ ಅವರು ಆ ಪಾತ್ರಕ್ಕೆ ಜೀವ ತುಂಬಿದ್ದರು.
ಅಲಿಗಢ್ (2015): ಪತ್ರಕರ್ತ ದೀಪು ಸೆಬಾಸ್ಟಿಯನ್ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡರು.
ಬೋಸ್: ಡೆಡ್/ಅಲೈವ್ (2017): ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪಾತ್ರಕ್ಕಾಗಿ ರಾಜ್‌ಕುಮಾರ್ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡು, ಸಂಪೂರ್ಣವಾಗಿ ರೂಪಾಂತರಗೊಂಡು ಪ್ರೇಕ್ಷಕರನ್ನು ಚಕಿತಗೊಳಿಸಿದ್ದರು.
ಓಮರ್ಟಾ (2018): ಭಯೋತ್ಪಾದಕ ಅಹ್ಮದ್ ಒಮರ್ ಸಯೀದ್ ಶೇಖ್ ಎಂಬ ನಕಾರಾತ್ಮಕ ಛಾಯೆಯ ಬಯೋಪಿಕ್‌ನಲ್ಲಿ ನಟಿಸಿ ತಮ್ಮ ನಟನಾ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟರು.
ಶ್ರೀಕಾಂತ್ (2024): ದೃಷ್ಟಿಹೀನ ಉದ್ಯಮಿ ಶ್ರೀಕಾಂತ್ ಬೋಲ್ಲಾ ಅವರ ಸ್ಫೂರ್ತಿದಾಯಕ ಕಥೆಯಲ್ಲಿ ರಾಜ್‌ಕುಮಾರ್ ನಟನೆಗೆ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು.
ರಾಜ್‌ಕುಮಾರ್ ರಾವ್ ಅವರ ವಿಶೇಷತೆಯೆಂದರೆ ಅವರು ಕೇವಲ ಆ ವ್ಯಕ್ತಿಯಂತೆ ಕಾಣಲು ಪ್ರಯತ್ನಿಸುವುದಿಲ್ಲ. ಬದಲಾಗಿ ಆ ವ್ಯಕ್ತಿಯ ಗುಣಲಕ್ಷಣ, ಹಾವಭಾವ ಮತ್ತು ಆತ್ಮವನ್ನು ಅರ್ಥೈಸಿಕೊಂಡು ನಟಿಸುತ್ತಾರೆ. 'ದಾದಾ' ಚಿತ್ರದಲ್ಲೂ ಅವರು ಕ್ರಿಕೆಟ್ ಲೋಕದ ದಾದಾ ಸೌರವ್ ಗಂಗೂಲಿ ಅವರ ವ್ಯಕ್ತಿತ್ವವನ್ನು ಹೇಗೆ ಕಟ್ಟಿಕೊಡಲಿದ್ದಾರೆ ಎಂಬ ಕುತೂಹಲ ಮೂಡಿದೆ.
56
ಸಿಕ್ಸರ್ ಬಾರಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳು
ಬಾಲಿವುಡ್‌ನ ಬಹುತೇಕ ಸ್ಟಾರ್ ನಟರು ಕಮರ್ಷಿಯಲ್ ಚಿತ್ರಗಳ ಹಿಂದೆ ಬಿದ್ದರೆ, ರಾಜ್‌ಕುಮಾರ್ ರಾವ್ ಮಾತ್ರ ಮಣ್ಣಿನ ಮಕ್ಕಳ ಮತ್ತು ಇತಿಹಾಸದ ವ್ಯಕ್ತಿಗಳ ಕಥೆಗಳನ್ನು ಹೇಳಲು ಹೊರಟಿದ್ದಾರೆ. ಸೌರವ್ ಗಂಗೂಲಿ ಬಯೋಪಿಕ್ ಅವರ ವೃತ್ತಿಜೀವನದ ಅತಿ ದೊಡ್ಡ ಪರೀಕ್ಷೆಯಾಗಲಿದ್ದು, ಸಿಕ್ಸರ್ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.
66
ಅಪ್ರತಿಮ ನಟನೆ
ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅತಿ ಹೆಚ್ಚು ಬಯೋಪಿಕ್‌ಗಳಲ್ಲಿ (ಜೀವನಾಧಾರಿತ ಚಿತ್ರ) ನಟಿಸಿದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ. ಸೌರವ್ ಗಂಗೂಲಿ ಅವರ ಜೀವನ ಆಧಾರಿತ 'ದಾದಾ' ಇವರ 8ನೇ ಬಯೋಪಿಕ್ ಚಿತ್ರವಾಗಿದ್ದು, ಇದಕ್ಕೂ ಮುನ್ನ ಶಾಹಿದ್, ಬೋಸ್, ಶ್ರೀಕಾಂತ್ ಅಂತಹ ನೈಜ ಪಾತ್ರಗಳ ಮೂಲಕ ಇವರು ಅಪ್ರತಿಮ ನಟನೆ ತೋರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.