'ಕರ್ಣ' ಸೀರಿಯಲ್‌ನಿಂದ ಹೊರಬಂದಿರುವ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸೆಲೆಬ್ರಿಟಿಗಳ ಮನೆಯಲ್ಲಿ ಏನೇನು ಆಗತ್ತೆ ಎಂದು ನೋಡಲು ಇಚ್ಛಿಸುವ ತಮ್ಮ ಫ್ಯಾನ್ಸ್ಗಾಗಿ ನಟಿ, ತಮ್ಮ ಬೆಳಗಿನ ದಿನಚರಿಯ ವಿಡಿಯೋ ಹಂಚಿಕೊಂಡಿದ್ದಾರೆ.
ಕರ್ಣ ಸೀರಿಯಲ್ (Karna Serial)ನಲ್ಲಿ ಸದ್ಯ ಸ್ಟೋರಿಯೇ ಫುಲ್ ಬದಲಾಗಿ ಹೋಗಿದೆ. ಆರಂಭದಲ್ಲಿ ನಿಧಿ, ನಿತ್ಯಾ ಮತ್ತು ಕರ್ಣನ ಸುತ್ತಲೂ ಸುತ್ತುತ್ತಿದ್ದ ಸ್ಟೋರಿ ಬೇರೆ ರೂಪ ಪಡೆದು ನಿತ್ಯಾ ಕಣ್ಮರೆಯಾಗಿದ್ದಾಳೆ. ಈಗ ಸ್ಟೋರಿ ಕರ್ಣನ ಕುಟುಂಬದ ಸುತ್ತಲೂ ಸುತ್ತುತ್ತಿದೆ.
26
ನಿತ್ಯಾ ಸ್ಟೋರಿಗೆ ಡಿಮಾಂಡ್
ಆರಂಭದಲ್ಲಿ ನಿತ್ಯಾ ಇದ್ದಾಗ ಆ ಸ್ಟೋರಿಯನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ನಿತ್ಯಾನ್ನು ಕರ್ಣ ಅನಿವಾರ್ಯವಾಗಿ ಮದುವೆಯಾದಾಗ, ಮುಂದೇನು ಎನ್ನುವ ತವಕ ಇತ್ತು. ಕೊನೆಗೆ ಈಗ ನಿತ್ಯಳನ್ನು ಸಂಪೂರ್ಣ ದೂರ ಮಾಡಿದ್ದು, ನಿತ್ಯಾ ಪಾತ್ರಧಾರಿಯಾಗಿದ್ದ ನಮ್ರತಾ ಗೌಡ (Namratha Gowda) ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಆ್ಯಕ್ಟೀವ್ ಆಗಿದ್ದಾರೆ.
36
ಸೆಲೆಬ್ರಿಟಿಗಳ ಮೇಲೆ ಜನರ ಕಣ್ಣು
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ ಅವರ ಅಡುಗೆಗೆ, ಮನೆ ಕೆಲಸಕ್ಕೆ ಎಲ್ಲವೂ ಆಳು-ಕಾಳುಗಳು ಇರುತ್ತಾರೆ ಎಂದು ಅಂದುಕೊಳ್ಳುವುದು ಸಾಮಾನ್ಯ. ಇದರ ಹೊರತಾಗಿಯೂ ಕೆಲವರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಕೊನೆಯ ಪಕ್ಷ ಅಡುಗೆಯನ್ನಾದರೂ ತಾವೇ ಮಾಡುತ್ತಾರೆ.
ಹಾಗೆಯೇ ನಟಿ ನಮ್ರತಾ ಗೌಡ ಅವರು ಇದೀಗ ತಮ್ಮ ಬೆಳಗಿನ ದಿನಚರಿಯ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ಆರಂಭದಲ್ಲಿ ಫ್ರೂಟ್ಸ್ ತಿನ್ನುವ ಮೂಲಕ ದಿನಚರಿ ಆರಂಭಿಸಿರುವ ನಮ್ರತಾ ಅವರು ಕೊನೆಗೆ ಇಡ್ಲಿ ಮಾಡುವುದನ್ನು ತೋರಿಸಿದ್ದಾರೆ. ಇಡ್ಲಿ ಮಾಡಿ ಅದಕ್ಕೆ ಚಟ್ನಿಯನ್ನೂ ಮಾಡಿದ್ದಾರೆ. ಕೊನೆಗೆ ನುಗ್ಗೆಕಾಯಿಯ ಸಾಂಬಾರ್ ಮಾಡಿರುವುದನ್ನು ತೋರಿಸಿದ್ದಾರೆ.
56
ಬ್ರೇಕ್ಫಾಸ್ಟ್ ದಿನಚರಿ
ಅಷ್ಟಕ್ಕೂ ಇವೆಲ್ಲವೂ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಮಾಡುವಂಥದ್ದೇ. ಆದರೆ ಇದನದ್ನು ಬೇರೆ ಸಾಮಾನ್ಯ ಜನರು ಮಾಡಿದರೆ ಯಾರೂ ನೋಡಲ್ಲ. ಆದರೆ ಸೆಲೆಬ್ರಿಟಿಗಳ ಮನೆಯಲ್ಲಿ ಏನೇನು ನಡೆಯುತ್ತದೆ ಎನ್ನುವ ಕುತೂಹಲ ಅವರ ಅಭಿಮಾನಿಗಳಿಗೆ ಇರುವ ಕಾರಣದಿಂದ ತನ್ನ ನೆಚ್ಚಿನ ತಾರೆಯರ ಮನೆಯ ಒಳಗೆ ಇಣುವುದು ಅವರಿಗೆ ಇಷ್ಟವಾಗುತ್ತದೆ.
66
ಸೀರಿಯಲ್ನಲ್ಲಿ ನೋಡೋ ಆಸೆ
ಅದೇ ರೀತಿ, ನಮ್ರತಾ ಗೌಡ ಅವರ ಈ ಬೆಳಗಿನ ಬ್ರೇಕ್ಫಾಸ್ಟ್ ದಿನಚರಿಯನ್ನು ನೋಡಿ ಹಲವರು ಕಮೆಂಟ್ಸ್ ಮಾಡಿದ್ದಾರೆ. ಅದರಲ್ಲಿ ಹಲವರು ನಿಮ್ಮನ್ನು ಸೀರಿಯಲ್ನಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದೇವೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು, ನಮ್ರತಾ ಅವರೇ ಅಡುಗೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.