ಅಚ್ಚ ಕನ್ನಡತಿ, ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಅವರು ರಿಷಬ್ ಶೆಟ್ಟಿ ಅವರ ಮುಂಬರುವ ‘ಕಾಂತಾರ ಪ್ರೀಕ್ವೆಲ್’ನಲ್ಲಿ ನಟಿಸುತ್ತಿರುವುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಇದೀಗ ಈ ಬ್ಯೂಟಿ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗಿದೆ.
ಇಂದು ನಟಿ ರುಕ್ಮಿಣಿ ವಸಂತ್ ಅವರ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಕಾರಣ, ಕನ್ನಡತಿ ರುಕ್ಮಿಣಿ ವಸಂತ್ ಇಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕೇಳಿಬರುತ್ತಿರುವ ಹೆಸರು ಎನ್ನಬಹುದು. ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಮುಂದೆ ನೋಡಿ..
28
ನಟಿ ರುಕ್ಮಿಣಿ ವಸಂತ್ ಬ್ಯೂಟಿಫುಲ್ ಫೋಟೋಸ್
ಕನ್ನಡ ನಟಿ ರುಕ್ಮಿಣಿ ವಸಂತ್ ಅವರು ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಮೂಲಕ ಕನ್ನಡದಲ್ಲಿ ಖ್ಯಾತಿ ಪಡೆದರು. ಬಳಿಕ ಅವರು ತೆಲುಗು ಹಾಗೂ ತಮಿಳು ಚಿತ್ರರಂಗದ ಮೂಲಕ ಇದೀಗ ಪ್ಯಾನ್ ಇಂಡಿಯಾ ಖ್ಯಾತಿ ಪಡೆದಿದ್ದಾರೆ.
38
ನಟಿ ರುಕ್ಮಿಣಿ ವಸಂತ್ ಬ್ಯೂಟಿಫುಲ್ ಫೋಟೋಸ್
ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನಟಿ ರುಕ್ಮಿಣಿ ವಸಂತ್ ಅವರಿಗೆ ಅದೃಷ್ಟ ಹಾಗೂ ಪ್ರಸಿದ್ಧಿ ತಂದುಕೊಟ್ಟಿದೆ. ಈ ಚಿತ್ರದ ಬಳಿಕ ಅವರು ಹಲವು ಚಾನ್ಸ್ ಪಡೆಯಲು ಸಾರ್ರ್ಧಯವಾಯ್ತು.
ರುಕ್ಮಿಣಿ ವಸಂತ್ ಅವರು ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಮುಂದೆ ತೆರೆಗೆ ಬರಲಿರುವ ‘ಕಾಂತಾರ ಪ್ರೀಕ್ವೆಲ್’ನಲ್ಲಿ ಸಹ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸದ್ಯಕ್ಕೆ ಅವರು ತೆಲುಗು ಚಿತ್ರರಂಗದಲ್ಲಿ ಕೂಡ ಬ್ಯುಸಿ ಆಗುತ್ತಿದ್ದಾರೆ.
58
ನಟಿ ರುಕ್ಮಿಣಿ ವಸಂತ್ ಬ್ಯೂಟಿಫುಲ್ ಫೋಟೋಸ್
ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ಶ್ರೀಲೀಲಾ ಅವರಂತೆ, ನಟಿ ರುಕ್ಮಿಣಿ ವಸಂತ್ ಕೂಡ ಕನ್ನಡ ಬಿಟ್ಟು ಪರಭಾಷೆಗಳಲ್ಲಿ ಹೆಚ್ಚಾಗಿ ಮಿಂಚತೊಡಗಿದ್ದಾರೆ. ಇದೇನು ಹೊಸ ಸಂಗತಿಯಲ್ಲ, ಎಲ್ಲಿ ಅವಕಾಶ ಸಿಗುತ್ತೋ ಅಲ್ಲಿ ನಟಿಸುವುದು ಕಲಾವಿದರ ಕರ್ತವ್ಯ ಎನ್ನಬಹುದು.
68
ನಟಿ ರುಕ್ಮಿಣಿ ವಸಂತ್ ಬ್ಯೂಟಿಫುಲ್ ಫೋಟೋಸ್
ಸದ್ಯ ನಟಿ ರುಕ್ಮಿಣಿ ವಸಂತ್ ಹೆಸರು ಯಶ್ ಅಭಿನಯದಲ್ಲಿ ಮುಂದೆ ತೆರೆಗೆ ಬರಲಿರುವ ‘ಟಾಕ್ಸಿಕ್’ ಸಿನಿಮಾದಲ್ಲೂ ಕೇಳಿ ಬರುತ್ತಿದೆ. ಆದರೆ ಈ ಸಂಗತಿಯನ್ನು ಟಾಕ್ಸಿಕ್ ಸಿನಿಮಾ ತಂಡವಾಗಲೀ ಅಥವಾ ರುಕ್ಮಿಣಿ ವಸಂತ್ ಆಗಲೀ ಇನ್ನೂ ಅಧೀಕೃತ ಮಾಡಿಲ್ಲ.
78
ನಟಿ ರುಕ್ಮಿಣಿ ವಸಂತ್ ಬ್ಯೂಟಿಫುಲ್ ಫೋಟೋಸ್
ಭವಿಷ್ಯದಲ್ಲಿ ನಟಿ ರುಕ್ಮಿಣಿ ವಸಂತ್ ಅವರು ರಶ್ಮಿಕಾ ಮಂದಣ್ಣಾ ಅವರಂತೆ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ಭವಿಷ್ಯವನ್ನು ಬಲ್ಲವರು ಯಾರೂ ಇಲ್ಲವಾದರೂ ಅಂತಹ ಹಾದಿಯಲ್ಲಿ ನಟಿ ರುಕ್ಮಿಣಿ ವಸಂತ್ ಇದ್ದಾರೆ ಎನ್ನಬಹುದು.
88
ನಟಿ ರುಕ್ಮಿಣಿ ವಸಂತ್ ಬ್ಯೂಟಿಫುಲ್ ಫೋಟೋಸ್
ಕಾಂತಾರ ಪ್ರೀಕ್ವೆಲ್‌ನಲ್ಲಿ ನಟಿ ರುಕ್ಮಿಣಿ ವಸಂತ್ ಅವರ ಪೋರ್ಶನ್ ಈಗಾಗಲೇ ಶೂಟ್ ಆಗಿದೆ ಎನ್ನಲಾಗುತ್ತಿದೆ. ಈ ಸಂಗತಿಯನ್ಜು ಕಾಂತಾರ ಚಿತ್ರತಂಡ ಅಧೀಕೃತವಾಗಿ ಎಲ್ಲೂ ಹೇಳಿಲ್ಲ. ಆದರೆ, ಟಾಕ್ಸಿಕ್‌ನಲ್ಲಿ ಇನ್ನೂ ಕೂಡ ರುಕ್ಮಿಣಿ ವಸಂತ್ ಅವರು ಶೂಟಿಂಶ್‌ಗೆ ಕಾಲಿಟ್ಟಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ, ಕನ್ನಡತಿ ರುಕ್ಮಿಣಿ ವಸಂತ್ ಸದ್ಯ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿದ್ದಾರೆ.