ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಮೊದಲ ಬಾಲಿವುಡ್ ಸಿನಿಮಾಗೆ ‘ಒರಿಜಿನಲ್ ಮಾನ್‌ಸ್ಟರ್’ ಎಂದು ಟೈಟಲ್ ಇಡಲಾಗಿದೆ. ಆರ್. ಚಂದ್ರು ನಿರ್ದೇಶನದ ಈ ಚಿತ್ರಕ್ಕೆ ‘ಓಎಂ’ ಎಂಬ ಶಾರ್ಟ್ ಟೈಟಲ್ ಬಳಸಲಾಗುತ್ತಿದೆ.
ಕನ್ನಡ ಹಾಗೂ ಹಿಂದಿಯಲ್ಲಿ ಸೆಟ್ಟೇರುತ್ತಿರುವ, ಶಿವರಾಜ್‌ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ‘ಒರಿಜಿನಲ್ ಮಾನ್‌ಸ್ಟರ್’ ಎಂದು ಹೆಸರಿಡಲಾಗಿದೆ. ಈ ಹೆಸರನ್ನು ಎಲ್ಲಾ ಭಾಷೆಗಳಿಗೂ ಹೊಂದಾಣಿಕೆ ಆಗುವಂತೆ ‘ಓಎಂ’ ಎಂದು ಹೆಸರಿಡಲಾಗಿದೆ.
25
ಬಾಲಿವುಡ್‌ಗೆ ಎಂಟ್ರಿ
ಯಮುನಾ ಚಂದ್ರು ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಬಾಲಿವುಡ್‌ನ ಆನಂದ್ ಪಂಡಿತ್ ಅವರು ಚಿತ್ರವನ್ನು ಪ್ರಸೆಂಟ್ ಮಾಡುವ ಮೂಲಕ ನಿರ್ಮಾಣಕ್ಕೆ ಜೊತೆಗೂಡಿದ್ದಾರೆ. ಇನ್ನೂ ಈ ಸಿನಿಮಾ ಮೂಲಕ ಶಿವಣ್ಣರನ್ನು ಬಾಲಿವುಡ್‌ಗೆ ಕರೆದೊಯ್ಯುತ್ತಿರುವುದು ಕನ್ನಡದ ಮತ್ತೊಬ್ಬ ಮಹತ್ವಾಕಾಂಕ್ಷಿ ನಿರ್ದೇಶಕರಾದ ಆರ್. ಚಂದ್ರು.
35
ತೆಲುಗಿನಲ್ಲಿ ಸುನೀಲ್ ಹೀರೋ
ಅಂದಹಾಗೆ ಈ ಚಿತ್ರಕ್ಕೆ ಕನ್ನಡದಲ್ಲಿ ಶಿವಣ್ಣ ನಾಯಕನಾಗಿ ನಟಿಸಿದರೆ, ತೆಲುಗಿನಲ್ಲಿ ಸುನೀಲ್ ಹೀರೋ ಆಗುತ್ತಿದ್ದಾರೆ. ಅದೇ ರೀತಿ ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಬೇರೆ ಬೇರೆ ಸ್ಟಾರ್ ನಟರು ಹೀರೋಗಳಾಗಿ ನಟಿಸಲಿದ್ದಾರೆ.
ಏಕಕಾಲದಲ್ಲಿ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರಲಿರುವ ಈ ಚಿತ್ರವು ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಆಗಸ್ಟ್ 28ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಟೈಟಲ್ ಜೊತೆಗೆ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ.
55
ಮೊದಲ ಬಾಲಿವುಡ್ ಸಿನಿಮಾ
‘ಒರಿಜಿನಲ್ ಮಾನ್‌ಸ್ಟರ್’ ಶಿವಣ್ಣ ಹೀರೋ ಆಗಿ ನಟಿಸುತ್ತಿರುವ ಮೊದಲ ಬಾಲಿವುಡ್ ಸಿನಿಮಾ ಆಗಲಿದೆ. ಸಂಭಾಷಣೆ ಬರೆಯಲು ಆರ್. ಚಂದ್ರು ಹಾಗೂ ಮಾಸ್ತಿ ಜೊತೆಯಾಗಿದ್ದಾರೆ. ಚಿತ್ರಕ್ಕೆ ಎ.ಜೆ. ಶೆಟ್ಟಿ ಕ್ಯಾಮೆರಾ, ಅಂಜನೀಶ್ ಲೋಕನಾಥ್ ಸಂಗೀತ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.