ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವು ಶಾಪಗ್ರಸ್ಥ ಅರಣ್ಯದಲ್ಲಿ ನಡೆಯುವ ನಿಗೂಢ ಕಥೆಯನ್ನು ಹೊಂದಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುವ ಈ ಸಿನಿಮಾವು ಪ್ರತಿಯೊಂದು ದೃಶ್ಯದಲ್ಲೂ ರೋಚಕ ತಿರುವುಗಳನ್ನು ನೀಡುತ್ತಾ ಪ್ರೇಕ್ಷಕರನ್ನು ಹಿಡಿದಿಡುತ್ತದೆ.
ಇಂದು ಥಿಯೇಟರ್‌ಗಿಂತ ಜನರು ಮನೆಯಲ್ಲಿಯೇ ಕುಳಿತು ಸಿನಿಮಾ ನೋಡಲು ಬಯಸುತ್ತಾರೆ. ಅದಕ್ಕಾಗಿ ಜನರು ಬೇರೆ ಬೇರೆ OTT ಪ್ಲಾಟ್‌ಫಾರಂಗಳಿಗೆ ಸಬ್‌ಸ್ಕ್ರಿಪ್ಷನ್ ಪಡೆದುಕೊಳ್ಳುತ್ತಾರೆ. ಇದಕ್ಕೆ ಕಾರಣ ಇಂದು ಯಾರ ಬಳಿಯಲ್ಲಿಯೂ ಹೆಚ್ಚು ಸಮಯ ಅಲ್ಲ. ಮನೆಯ ಕೆಲಸಗಳನ್ನು ಮಾಡಿಕೊಳ್ಳುತ್ತಲೇ ಸಿನಿಮಾಗಳನ್ನು ವೀಕ್ಷಣೆ ಮಾಡುತ್ತಾರೆ.
25
2 ಗಂಟೆ 9 ನಿಮಿಷ ಈ ಸಿನಿಮಾ
ನೀವು ಸಿನಿಮಾ ಪ್ರೇಮಿಯಾಗಿದ್ದು, ಅದರಲ್ಲಿಯೂ ಸಸ್ಪೆನ್ಸ್ ಆಂಡ್ ಥ್ರಿಲ್ಲರ್ ಲವರ್ ಆಗಿದ್ರೆ ಇಂದು ನಾವು ಹೇಳುವ ಸಿನಿಮಾ ಬೆಸ್ಟ್. ಈ ಚಿತ್ರದಲ್ಲಿ ಪ್ರತಿಯೊಂದು ದೃಶ್ಯ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳಲಾರಂಭಿಸುತ್ತದೆ. ಈ ಟ್ವಿಸ್ಟ್‌ಗಳು ನಿಮ್ಮನ್ನು ಕುರ್ಚಿಯ ತುದಿಗೆ ಕೂರುವಂತೆ ಮಾಡುತ್ತವೆ. 2 ಗಂಟೆ 9 ನಿಮಿಷ ಈ ಸಿನಿಮಾ ನಿಮಗೆ ಸಂಪೂರ್ಣ ಮನರಂಜನೆಯನ್ನು ನೀಡುತ್ತದೆ.
35
ಯಾವುದು ಈ ಸಿನಿಮಾ?
ಜೀತು ಸತೀಶ್ಮನ್ ಕಥೆ ಬರೆದು ನಿರ್ದೇಶನ ಮಾಡಿದ ಸಿನಿಮಾ Sambhavam Adhyayam Onnu ಇದೇ ವರ್ಷ ಅಂದ್ರೆ ಮಾರ್ಚ್-2026ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ದಿನದಿಂದಲೇ ವೀಕ್ಷಕರಿಂದಲೇ ಪ್ರಚಾರಗಿಟ್ಟಿಸಿಕೊಂಡ ಸಿನಿಮಾ ಇದಾಗಿತ್ತು. ಸಂಭವಂ ಅಧ್ಯಾಯಂ ಒನ್ನು ಸಿನಿಮಾದಲ್ಲಿ ನೀತು ಕೃಷ್ಣ, ಅಸ್ಕರ್ ಅಲಿ ಮತ್ತು ಸಿದ್ಧಾರ್ಥ್ ಸೇರಿದಂತೆ ಹಲವು ಅನುಭವಿ ಕಲಾವಿದರು ನಟಿಸಿದ್ದಾರೆ.
ಈ ಚಿತ್ರದ ಕಥೆ ಕೇರಳ-ತಮಿಳುನಾಡು ಗಡಿಯಲ್ಲಿರುವ ವೆಲ್ಲೋರ್ಕಟ್ಟೆಯಲ್ಲಿರುವ ಶಾಪಗ್ರಸ್ಥ ಅರಣ್ಯದ ಸುತ್ತ ಸಾಗುತ್ತದೆ. ಕಾಣೆಯಾದ ಸಹೋದ್ಯೋಗಿಗಳನ್ನು ಹುಡುಕುತ್ತಾ ಮೂವರು ಪೊಲೀಸರು ಅರಣ್ಯಕ್ಕೆ ಬರುತ್ತಾರೆ. ಪೊಲೀಸರು ಅರಣ್ಯಕ್ಕೆ ಬರುತ್ತಿದ್ದಂತೆ ಚಿತ್ರದ ಕಥೆ ಆರಂಭವಾಗುತ್ತದೆ.
55
IMDBಯಲ್ಲಿ 7.3 ರೇಟಿಂಗ್
ಈ ನಡುವೆ ಒಬ್ಬರಿಗೆ ಒಂದು ಮೃತದೇಹ ಕಾಣಿಸುತ್ತದೆ. ಇಲ್ಲಿಂದ ಕಥೆ ಕ್ಷಣ ಕ್ಷಣಕ್ಕೀ ಹೊಸ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ. ಇಲ್ಲಿಂದ ಮುಂದೇನು ಆಗುತ್ತೆ ಎಂಬುದನ್ನು ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಸಂಭವಂ ಅಧ್ಯಾಯಂ ಒನ್ನು ಸಿನಿಮಾ ಜಿಯೋ ಹಾಟ್‌ಸ್ಟಾರ್ OTTಯಲ್ಲಿ ಲಭ್ಯವಿದ್ದು, ಮನೆಯಲ್ಲಿಯೇ ಕುಳಿತು ನೋಡಬಹುದು. ಈ ಸಿನಿಮಾಗೆ IMDBಯಲ್ಲಿ 7.3 ರೇಟಿಂಗ್ ಪಡೆದುಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.