ಕಾಫಿ, ಬೇಲ್​ಪುರಿ ಮಾರಿ ಹಣ ತಂದ: ಗೋಲ್ಡನ್​ ಸ್ಟಾರ್​ ಗಣೇಶ್​ 11 ವರ್ಷ ಪುತ್ರನ ರೋಚಕ ಸ್ಟೋರಿ ಹೇಳಿದ ಅಮ್ಮ

Published : Aug 09, 2026, 01:47 PM IST

ಗೋಲ್ಡನ್ ಸ್ಟಾರ್ ಗಣೇಶ್ ಅವರ 11 ವರ್ಷದ ಪುತ್ರ ವಿಹಾನ್, ತಾನೊಬ್ಬ ಉದ್ಯಮಿಯಾಗಬೇಕೆಂದು ನಿರ್ಧರಿಸಿ ಕಾಫಿ ಮತ್ತು ಬೇಲ್ ಪುರಿ ಮಾರಾಟ ಮಾಡಿ ಹಣ ಸಂಪಾದಿಸಿದ್ದಾನೆ. ಈ ಬಗ್ಗೆ ಮಾತನಾಡಿದ ತಾಯಿ ಶಿಲ್ಪಾ ಗಣೇಶ್, ಮಕ್ಕಳಿಗೆ ದುಡಿಮೆಯ ಮಹತ್ವವನ್ನು ಕಲಿಸುತ್ತಿರುವ ಬಗ್ಗೆ ವಿವರಿಸಿದ್ದಾರೆ.

PREV
16
ಗೋಲ್ಡನ್​ ಸ್ಟಾರ್​ ಗಣೇಶ್​ ಪುತ್ರನ ಸ್ಟೋರಿ

ಬಹುತೇಕ ಎಲ್ಲಾ ಯಶಸ್ವಿ ಬಿಜಿನೆಸ್​ಮನ್ ಹಿಂದೆ ಇರೋದು ಒಂದು ಚಿಕ್ಕ ಉದ್ಯಮದ ಸ್ಟೋರಿನೇ. ಚಿಕ್ಕದೊಂದು ಬಿಜಿನೆಸ್ ಶುರು ಮಾಡಿ, ದೊಡ್ಡ ಸಾಮ್ರಾಜ್ಯ ಕಟ್ಟಿದವರು ಹಲವರು. ಹಾಗೆಂದು ಇಂಥ ಯೋಚನೆ ಆ ಉದ್ಯಮಿಗಳಿಗೆ ದಿಢೀರ್​ ಎಂದು ಬಂದಿರುವುದಿಲ್ಲ. ಅದು ಅವರ ಬಾಲ್ಯದ ಕನಸು ಆಗಿರುತ್ತದೆ. ಅಂದು ಇಟ್ಟ ಆ ಪುಟ್ಟ, ದಿಟ್ಟ ಹೆಜ್ಜೆಯಿಂದ ಇಂದು ಸಹಸ್ರಾರು ಕೋಟಿ ರೂಪಾಯಿಗಳ ಮಾಲೀಕರಾದವರು ಇದ್ದಾರೆ, ವಿಶ್ವ ಖ್ಯಾತಿ ಪಡೆದ ಉದ್ಯಮಿಗಳೂ ಇದ್ದಾರೆ. ಆದರೆ ಪುಟಾಣಿ ತಲೆಗಳಲ್ಲಿ ಇಂಥದ್ದೊಂದು ದಿಟ್ಟ ನಿಲುವು ಬರುವುದು ತುಂಬಾ ಕಡಿಮೆ. ಆದರೆ ಗೋಲ್ಡನ್​ ಸ್ಟಾರ್​ ಗಣೇಶ್​ ಮತ್ತು ಶಿಲ್ಪಾ ಅವರ ಮಗ 11 ವರ್ಷದ ವಿಹಾನ್​ ಇಂಥದ್ದೊಂದು ದಿಟ್ಟ ಹೆಜ್ಜೆ ಇಟ್ಟಿರುವ ಬಗ್ಗೆ ಅಮ್ಮ ಶಿಲ್ಪಾ ಮಾತನಾಡಿದ್ದಾರೆ.

26
ವಿಶೇಷ ಸಂದರ್ಶನ

ಏಷ್ಯಾನೆಟ್​ ಸುವರ್ಣದ (Asianet Suvarna) ಬೆಂಗಳೂರು ಬಜ್​ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಮ್ಮ ಪುತ್ರ ವಿಹಾನ್​ ಕುರಿತು, ಶಿಲ್ಪಾ ಅವರು ಮಾತನಾಡಿದ್ದು, ಹೇಗೆ ತಮ್ಮ ಮಗ ಒಂದು ದಿನ ಬಂದು ಮಮ್ಮಿ ನಾನು ದೊಡ್ಡ ಬಿಜಿನೆಸ್​ಮನ್​ ಆಗಬೇಕು ಎಂದು ಹೇಳಿ, ತಮ್ಮ ಗಮನಕ್ಕೂ ಬಾರದೇ ತೆಗೆದುಕೊಂಡು ಆ ಬಹುದೊಡ್ಡ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ.

36
ಗಣೇಶ್​ ಪುತ್ರನ ಐಡಿಯಾ

ಅವರೇ ಹೇಳಿದಂತೆ, 'ಆ ದಿನ ರಾತ್ರಿ, ವಿಹಾನ್​ ನನ್ನ ಬಳಿ ಬಂದು ಮಮ್ಮಿ ನಾನು ದೊಡ್ಡ ಬಿಜಿನೆಸ್​ಮೆನ್​ ಆಗಬೇಕು ಎಂದ. ಅದಕ್ಕೆ ನಾನು ಆಶ್ಚರ್ಯದಿಂದ ಏನಾಗ್ತಿಯಾ ಎಂದು ಕೇಳಿದೆ. ಅದಕ್ಕೆ ಅವನು ದೊಡ್ಡ ಚೀಟಿನೇ ತಂದಿದ್ದ. ಅದರಲ್ಲಿ ಏನೇನೋ ಬರೆದುಕೊಂಡಿದ್ದ. ಆಮೇಲೆ ಮರುದಿನ ಬೆಳಿಗ್ಗೆ ಫ್ಲಾಸ್ಟ್​ನಲ್ಲಿ ಕಾಫಿ ಮಾಡಿಕೊಂಡು ಮನೆಯಿಂದ ಸ್ವಲ್ಪ ದೂರ ಹೋಗಿ ಕಾಫಿಮಾರಲು ಶುರು ಮಾಡಿ'ದ ಎಂಬ ಅಚ್ಚರಿಯ ಸಂಗತಿ ಹೇಳಿದ್ದಾರೆ.

46
ಕಾಫಿ ಮಾರಿದ

'ಆಮೇಲೆ 170 ರೂಪಾಯಿ ತಂದು ನನ್ನ ಕೈಯಲ್ಲಿ ಕೊಟ್ಟು, ಮಮ್ಮಿ ನಾನು 170 ರೂಪಾಯಿ ಮಾಡಿದೆ ಅಂದ. ತುಂಬಾ ಒಳ್ಳೆಯದು ಮಾಡಿದೆ, ವೆರಿ ಗುಡ್​ ಚಿನ್ನಾ ಅಂದೆ' ಎಂದು ತಮ್ಮ ಮಗನಿಗೆ ನೀಡಿದ ಪ್ರೋತ್ಸಾಹದ ಬಗ್ಗೆ ಶಿಲ್ಪಾ ಅವರು ಮಾತನಾಡಿದ್ದಾರೆ.

56
370 ರೂಪಾಯಿ ದುಡಿದ

'ಸಂಜೆಯಷ್ಟರ ಹೊತ್ತಿಗೆ ತುಂಬಾ ಬೇಲ್​ (ಕಡ್ಲೆಪುರಿ) ತೆಗೆದುಕೊಂಡು ಬಂದ. ನನಗೂ ಗೊತ್ತಿರಲಿಲ್ಲ. ನಾನು ಕಾರಿನಲ್ಲಿ ಪಾಸ್​ ಆಗ್ತಿರುವಾಗಲೇ ಆತ ಬೇಲ್​ ಬೇಲ್​ ಅಂತಿದ್ದ. ನನಗೆ ಇವನು ಏನ್​ ಮಾಡ್ತಾ ಇದ್ದಾನೆ ಎನ್ನಿಸ್ತು. ನೋಡಿದ್ರೆ ಬೇಲ್​ಪುರಿ ಮಾರುತ್ತಾ ಇದ್ದಾನೆ. ಆವತ್ತಿನ ದಿನ 370 ರೂಪಾಯಿ ದುಡಿದುಕೊಂಡು ಬಂದ' ಎಂದಿದ್ದಾರೆ.

66
ಮಕ್ಕಳಿಗೆ ಇದನ್ನೇ ಹೇಳಿಕೊಟ್ಟಿರೋದು

ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಬೇಕು. ದುಡಿಮೆ ಎಷ್ಟು ಮಹತ್ವದ್ದು ಎಂದು ನಾವು ಕಲಿಸಿಕೊಟ್ಟಿರುವುದು ಇದೇ ರೀತಿ. ನಿಮ್ಮ ಇಮೇಜ್ ನೀವೇ ಕ್ರಿಯೇಟ್​ ಮಾಡಬೇಕು ಎನ್ನೋದನ್ನು ಅವರ ತಲೆಯಲ್ಲಿ ತುಂಬಿಸುತ್ತಾ ಇದ್ದೇವೆ ಎಂದಿದ್ದಾರೆ ಶಿಲ್ಪಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories